Site icon Vistara News

Gas Explosion: ಗ್ಯಾಸ್‌ ಸಿಲಿಂಡರ್‌ ಸ್ಫೋಟದಿಂದ ಕಾಣಿಸಿಕೊಂಡ ಬೆಂಕಿ; ಕನಿಷ್ಠ ಇಬ್ಬರ ಸಾವು

fire accident

fire accident

ಕೀನ್ಯಾ: ಕೀನ್ಯಾದಲ್ಲಿ (Kenya) ಶುಕ್ರವಾರ (ಫೆಬ್ರವರಿ 2) ಸಂಭವಿಸಿದ ಭೀಕರ ಗ್ಯಾಸ್‌ ಸ್ಫೋಟದಿಂದ (Gas Explosion) ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 167 ಮಂದಿ ಗಾಯಗೊಂಡಿದ್ದಾರೆ. ನೈರೋಬಿಯಾದ ಎಂಬಕಾಸಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ವಿಡಿಯೊ ಇದೀಗ ವೈರಲ್‌ ಆಗಿದೆ. ಸ್ಫೋಟದ ಕಾರಣದಿಂದ ಹತ್ತಿಕೊಂಡ ಬೆಂಕಿ ಎಂಬಕಾಸಿಯಲ್ಲಿನ ಫ್ಲ್ಯಾಟ್‌, ಮನೆಗಳಿಗೆ ಹರಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಗುರುವಾರ ಮಧ್ಯರಾತ್ರಿಯ ವೇಳೆ ಗ್ಯಾಸ್ ಸಿಲಿಂಡರ್‌ಗಳನ್ನು ಮರುಪೂರಣ (Refilled) ಮಾಡಲಾಗುತ್ತಿರುವ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಆದರೆ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

“ಸ್ಫೋಟದ ತೀವ್ರತೆಗೆ ಕಂಪನಿಯ ಕಟ್ಟಡ ತೀವ್ರವಾಗಿ ಹಾನಿಗೊಳಗಾಗಿದೆ. ಈ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಯಂತ್ರಗಳು ಶ್ರಮಿಸುತ್ತಿವೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿರುವುದರಿಂದ ಸಾರ್ವಜನಿಕರು ಪ್ರವೇಶವನ್ನು ನಿಷೇಧಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Fire Accident: ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ; ಓರ್ವ ಸಾವು, ನಾಲ್ಕು ಮಂದಿಗೆ ಗಾಯ

ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ ಹಲವು ಕಿ.ಮೀ.ಗಳಷ್ಟು ದೂರದವರೆಗೆ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿಯ ಕೆನ್ನಾಲೆಗಳು ಶೀಘ್ರವಾಗಿ ಪಕ್ಕದ ಅಪಾರ್ಟ್‌ಮೆಂಟ್‌, ಮನೆಗಳು ಹರಡಿದ್ದು ಹೆಚ್ಚಿನ ಹಾನಿ ಸಂಭವಿಸಲು ಕಾರಣವಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version