Site icon Vistara News

Turkey Earthquake: ಟರ್ಕಿ ಭೂಕಂಪ; 178 ತಾಸು ಕಟ್ಟಡದ ಅವಶೇಷಗಳಲ್ಲಿ ಸಿಲುಕಿಯೂ ಬದುಕಿ ಬಂದ 6 ವರ್ಷದ ಬಾಲಕಿ

Turkey Earthquake

#image_title

ಅಂಕಾರ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಶತಮಾನದ ಭೀಕರ ಭೂಕಂಪದಿಂದ (Turkey Earthquake) ಮೃತಪಟ್ಟವರ ಸಂಖ್ಯೆ ೩೫ ಸಾವಿರ ದಾಟಿದೆ. ಕಳೆದ ಒಂದು ವಾರದಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೂ ಇನ್ನೂ ಕಟ್ಟಡದ ಅವಶೇಷಗಳ ಅಡಿಯಲ್ಲಿ ಜನರ ಶವ ಪತ್ತೆಯಾಗುತ್ತಿವೆ. ಹಾಗೆಯೇ, ಕೆಲವೊಬ್ಬರು ಮಾತ್ರ ಅದೃಷ್ಟವಶಾತ್‌, ಅವಶೇಷಗಳ ಅಡಿಯಲ್ಲಿ ಸಿಲುಕಿಯೂ ಬದುಕಿ ಬರುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಟರ್ಕಿಯಲ್ಲಿ ಸುಮಾರು ೧೭೮ ತಾಸು ಅವಶೇಷಗಳ ಅಡಿಯಲ್ಲಿ ಸಿಲುಕಿಯೂ ಆರು ವರ್ಷದ ಬಾಲಕಿಯೊಬ್ಬಳು ಬದುಕಿ ಬಂದಿದ್ದಾಳೆ.

ಅದಿಯಾಮನ್‌ನಲ್ಲಿ ಕಟ್ಟಡ ಕುಸಿದಿದ್ದು, ಬಾಲಕಿ ಮಿರಾಯ್‌ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾಳೆ. ೧೭೮ ತಾಸುಗಳಿಂದಲೂ ಆಕೆ ಅವಶೇಷಗಳ ಅಡಿಯಲ್ಲಿಯೇ ಕಾಲ ಕಳೆದಿದ್ದಾಳೆ. ಅನ್ನ-ನೀರು ಇಲ್ಲದೆಯೇ ಬಾಲಕಿ ಕಾಲ ಕಳೆದಿದ್ದು, ಸೋಮವಾರ (ಫೆಬ್ರವರಿ ೧೩) ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ಆಕೆಯನ್ನು ರಕ್ಷಿಸಿದ್ದಾರೆ.

ಬಾಲಕಿಯನ್ನು ರಕ್ಷಿಸಿದ ಬಳಿಕ ಸಿಬ್ಬಂದಿಯು ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿಯನ್ನು ರಕ್ಷಿಸಿದ ವಿಡಿಯೊ ಈಗ ವೈರಲ್‌ ಆಗಿದೆ. ಕೆಲ ದಿನದ ಹಿಂದಷ್ಟೇ ೧೨೮ ತಾಸುಗಳಿಂದ ಅವಶೇಷಗಳಲ್ಲಿ ಸಿಲುಕಿದದ್ದ ಎರಡು ತಿಂಗಳ ಶಿಶುವನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಪವಾಡ, ಕಟ್ಟಡದ ಅವಶೇಷಗಳಲ್ಲಿ 128 ತಾಸಿದ್ದೂ ಬದುಕಿದ 2 ತಿಂಗಳ ಶಿಶು

Exit mobile version