Site icon Vistara News

Golden Globe Awards 2024: ಓಪನ್‌ಹೈಮರ್‌‌, ಬಾರ್ಬಿ, ಪೂವರ್‌ ತಿಂಗ್ಸ್… ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

golden globe awards

ಲಾಸ್‌ ಏಂಜಲೀಸ್:‌ ಈ ವರ್ಷದ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಯನ್ನು ʼಓಪನ್‌ಹೈಮರ್‌ʼ (Oppenheimer) ಹಾಗೂ ʼಪೂವರ್‌ ತಿಂಗ್ಸ್ʼ (Poor Things) ಚಿತ್ರಗಳು ಹಂಚಿಕೊಂಡಿವೆ. 81ನೇ ಸಾಲಿನ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ (Golden Globe Awards 2024) ಕಾರ್ಯಕ್ರಮ ಭಾನುವಾರ ಸಂಜೆ (ಭಾರತೀಯ ಕಾಲಮಾನ ಸೋಮವಾರ ಬೆಳಿಗ್ಗೆ) ನಡೆದವು.

ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ಈ ಅವಾರ್ಡ್ ಫಂಕ್ಷನ್ ನಡೆಯಿತು. ‘ಓಪನ್​​ಹೈಮರ್’ ಸಿನಿಮಾ 8 ವಿಭಾಗಗಳಲ್ಲಿ ಹಾಗೂ ‘ಬಾರ್ಬಿ’ (Barbie) ಸಿನಿಮಾ 9 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದವು. ಎರಡೂ ಸಿನಿಮಾಗಳು ಹಲವು ಪ್ರಶಸ್ತಿ ಗೆದ್ದಿವೆ. ಎರಡೂ ಚಿತ್ರಗಳು ಒಟ್ಟಿಗೆ ರಿಲೀಸ್ ಆಗಿ ಸದ್ದು ಮಾಡಿದ್ದವು.

ಖ್ಯಾತ ನಿರ್ದೇಶಕ ಕ್ರಿಸ್ಟೋಫರ್​ ನೋಲನ್​ ನಿರ್ದೇಶನದ ‘ಓಪನ್​ಹೈಮರ್​’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ವೀಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಪಡೆದಿತ್ತು. ಈ ಚಿತ್ರದ ನಿರ್ದೇಶನಕ್ಕಾಗಿ ಕ್ರಿಸ್ಟೋಫರ್​ ನೋಲನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ. ‘ಅತ್ಯುತ್ತಮ ಸಿನಿಮ್ಯಾಟಿಕ್ ಹಾಗೂ ಬಾಕ್ಸ್ ಆಫೀಸ್ ಅಚೀವ್​ಮೆಂಟ್’ ಅವಾರ್ಡ್​ ‘ಬಾರ್ಬಿ’ ಪಡೆದಿದೆ. ಈ ರೇಸ್​ನಲ್ಲಿ ‘ಓಪನ್​ಹೈಮರ್’ ಸಿನಿಮಾ ಕೂಡ ಇತ್ತು.

ಫ್ರಾನ್ಸ್​ನ ‘ಅನಾಟಮಿ ಆಫ್ ಫಾಲ್’ ಚಿತ್ರಕ್ಕೆ ‘ಅತ್ಯುತ್ತಮ ಸಿನಿಮಾ’ (ಆಂಗ್ಲೇತರ ಭಾಷೆ) ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಮೋಷನ್ ಸಿನಿಮಾ ಅವಾರ್ಡ್ (ಡ್ರಾಮಾ) ‘ಓಪನ್​ಹೈಮರ್’ ಚಿತ್ರಕ್ಕೆ ಸಿಕ್ಕಿದೆ. ಅತ್ಯುತ್ತಮ ಪರ್ಫಾರ್ಮೆನ್ಸ್ ಅವಾರ್ಡ್​ ಕಿಲಿಯನ್ ಮರ್ಫಿಗೆ ಸಿಕ್ಕಿದೆ. ಅವರು ಓಪನ್​ಹೈಮರ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸಿನಿಮಾ ಮಾತ್ರವಲ್ಲದೆ ಟಿವಿ ಸೀರಿಸ್​​ಗಳಿಗೂ ಇಲ್ಲಿ ಅವಾರ್ಡ್ ನೀಡಲಾಗಿದೆ.

ಕಳೆದ ವರ್ಷ ಭಾರತೀಯರ ಪಾಲಿಗೆ ‘ಗೋಲ್ಡನ್ ಗ್ಲೋಬ್ಸ್’ ಪ್ರಶಸ್ತಿಗಳು ವಿಶೇಷ ಎನಿಸಿಕೊಂಡಿದ್ದವು. ‘ಆರ್​ಆರ್​ಆರ್’ ಸಿನಿಮಾ ಹಲವು ವಿಭಾಗಗಳಲ್ಲಿ ನಾಮಿನೇಟ್ ಆಗಿ ಅವಾರ್ಡ್ ಪಡೆದಿತ್ತು. ಈ ವರ್ಷ ಭಾರತದ ಯಾವುದೇ ಸಿನಿಮಾಗಳು ನಾಮಿನೇಟ್ ಆಗಿಲ್ಲ.

ಈ ವರ್ಷದ ವಿಜೇತರ ಪಟ್ಟಿ ಇಲ್ಲಿದೆ:

ಅತ್ಯುತ್ತಮ ಚಲನಚಿತ್ರ (ಡ್ರಾಮಾ) – ಓಪನ್‌ಹೈಮರ್
ಅತ್ಯುತ್ತಮ ಚಲನಚಿತ್ರ (ಸಂಗೀತ/ಹಾಸ್ಯ) – ಪೂವರ್‌ ತಿಂಗ್ಸ್
ಅತ್ಯುತ್ತಮ ನಿರ್ದೇಶಕ – ಕ್ರಿಸ್ಟೋಫರ್ ನೋಲನ್ (ಓಪನ್‌ಹೈಮರ್)
ಅತ್ಯುತ್ತಮ ನಟಿ (ಡ್ರಾಮಾ) – ಲಿಲಿ ಗ್ಲಾಡ್‌ಸ್ಟೋನ್ (ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್)
ಅತ್ಯುತ್ತಮ ನಟ (ಡ್ರಾಮಾ) – ಸಿಲಿಯನ್ ಮರ್ಫಿ (ಓಪನ್‌ಹೈಮರ್)
ಅತ್ಯುತ್ತಮ ನಟಿ (ಸಂಗೀತ/ಹಾಸ್ಯ) – ಎಮ್ಮಾ ಸ್ಟೋನ್ (ಪೂವರ್ ಥಿಂಗ್ಸ್)
ಅತ್ಯುತ್ತಮ ನಟ (ಸಂಗೀತ/ಹಾಸ್ಯ)- ಪಾಲ್ ಗಿಯಾಮಟ್ಟಿ (ದಿ ಹೋಲ್ಡವರ್ಸ್)
ಅತ್ಯುತ್ತಮ ಪೋಷಕ ನಟ- ರಾಬರ್ಟ್ ಡೌನಿ ಜೂನಿಯರ್ (ಓಪನ್‌ಹೈಮರ್)
ಅತ್ಯುತ್ತಮ ಪೋಷಕ ನಟಿ- ಡಾ’ವೈನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡವರ್ಸ್)
ಅತ್ಯುತ್ತಮ ಅನಿಮೇಟೆಡ್ ಚಿತ್ರ – ದಿ ಬಾಯ್ ಅಂಡ್ ದಿ ಹೆರಾನ್
ಅತ್ಯುತ್ತಮ ಇಂಗ್ಲಿಷೇತರ ಭಾಷಾ ಚಲನಚಿತ್ರ – ಅನ್ಯಾಟಮಿ ಆಫ್ ಎ ಫಾಲ್ (ಫ್ರಾನ್ಸ್)
ಅತ್ಯುತ್ತಮ ಚಿತ್ರಕಥೆ – ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ (ಅನ್ಯಾಟಮಿ ಆಫ್ ಎ ಫಾಲ್)
ಅತ್ಯುತ್ತಮ ಮೂಲ ಸ್ಕೋರ್- ಲುಡ್ವಿಗ್ ಗೊರಾನ್ಸನ್ (ಓಪನ್‌ಹೈಮರ್)
ಅತ್ಯುತ್ತಮ ಮೂಲ ಹಾಡು- ವಾಟ್‌ ವಾಸ್‌ ಐ ಮೇಡ್‌ ಫಾರ್‌ (ಬಾರ್ಬಿ)
ಸಿನಿಮೀಯ ಮತ್ತು ಬಾಕ್ಸ್ ಆಫೀಸ್ ಸಾಧನೆ – ಬಾರ್ಬಿ

ಇದನ್ನೂ ಓದಿ: Golden Globe Awards 2024: ʻಓಪನ್‌ಹೈಮರ್‌ʼ, ʻಪೂವರ್‌ ಥಿಂಗ್ಸ್‌ʼಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗರಿ!

Exit mobile version