ಪ್ರಕೃತಿ ಅದ್ಭುತ ಜಗತ್ತು. ನಿಮಗೆ ಆಸಕ್ತಿ ಇದ್ದಿದ್ದೇ ಆದರೆ ನೀವು ಪ್ರಕೃತಿಯಲ್ಲಿರುವ ಒಂದು ಪುಟ್ಟ ಕೀಟವನ್ನೂ ಕುತೂಹಲದಿಂದ ನೋಡುತ್ತೀರಿ. ಅದರ ಜೀವನ ಕ್ರಮವನ್ನು ಅರಿತುಕೊಳ್ಳಲು ಹಾತೊರೆಯುತ್ತೀರಿ. ಪ್ರಾಣಿ-ಪಕ್ಷಿಗಳ ಜೀವನಕ್ಕಿಂತಲೂ ಕೀಟ ಜಗತ್ತು ವಿಭಿನ್ನ. ಅವು ಅವಲೋಕನಕ್ಕೆ ಸಿಗುವುದು ಕಷ್ಟ. ಆದರೂ ಈ ವನ್ಯಜೀವಿ ಫೋಟೋಗ್ರಾಫರ್ಗಳು ಅಂಥದ್ದೊಂದು ತಾಳ್ಮೆ ಬೆಳೆಸಿಕೊಂಡಿರುತ್ತಾರೆ. ಅದಕ್ಕೆ ಸಾಕ್ಷಿ ಪೀಟ್ ಬರ್ಫೋರ್ಡ್ ಎಂಬ ವನ್ಯಜೀವಿ ಸ್ಥೂಲ ಛಾಯಾಚಿತ್ರಗ್ರಾಹಕ. 2022ರ ಇನ್ಸೆಕ್ಟ್ ವೀಕ್ ಫೋಟೋಗ್ರಫಿ ಕಾಂಪಿಟೇಶನ್ (ಕೀಟಗಳ ವಾರದ ಛಾಯಾಗ್ರಹಣ ಸ್ಪರ್ಧೆ 2022)ನಲ್ಲಿ ಇವರ ’ರಾಬರ್ ಫ್ಲೈಗಳ ಮಿಲನ’ ದ(ದರೋಡೆಕೋರ ನೊಣ)ದ (Golden-Tabbed Robber Flies Mating) ಫೋಟೋಕ್ಕೆ ಪ್ರಥಮ ಸ್ಥಾನ ಬಂದಿದೆ. ಎರಡು ಗೋಲ್ಡನ್ ಟ್ಯಾಬ್ಡ್ ರಾಬರ್ ಫ್ಲೈಗಳು (ಗೋಲ್ಡನ್ ಟ್ಯಾಬ್ಡ್ ಕೊಲೆಗಾರ ನೊಣಗಳ) ಸುಖದಲ್ಲಿ ಮೈಮರೆತಿರುವ ಕ್ಷಣವನ್ನು ಅತ್ಯಂತ ಸಮೀಪದಿಂದ ಸೆರೆ ಹಿಡಿದು ಶಹಭಾಸ್ ಎನ್ನಿಸಿಕೊಂಡಿದ್ದಾರೆ.
ನ್ಯೂ ಸೈಂಟಿಸ್ಟ್ ಮ್ಯಾಗಜಿನ್ ಪ್ರಕಾರ ಈ ರಾಬರ್ ಫ್ಲೈಗಳು ಯುಕೆಯಲ್ಲಿ ಜಾಸ್ತಿ ಕಂಡುಬರುತ್ತವೆ. ಅವುಗಳ ಸೃಷ್ಟಿಯ ಪ್ರದೇಶ ಯುಕೆ. ಫೋಟೊಗ್ರಾಫರ್ ಬಫೋರ್ಡ್ ಅವರು ಎರಡೂವರೆ ವರ್ಷದ ಹಿಂದೆ ಈ ಫೋಟೊ ಸೆರೆ ಹಿಡಿದಿದ್ದಾರೆ. ಯುಕೆಯಲ್ಲಿ ಕೊವಿಡ್ 19 ಲಾಕ್ಡೌನ್ ಆಗಿದ್ದಾಗಿನ ಸಮಯವನ್ನು ಬಫೋರ್ಡ್ ಸದ್ಬಳಕೆ ಮಾಡಿಕೊಂಡಿದ್ದಾರೆ. ನಿಸರ್ಗದಲ್ಲಿ ಸಿಗುವ ಕೀಟಗಳ ಫೋಟೊಗಳನ್ನು ತೆಗೆದಿದ್ದಾರೆ. ಹೀಗೆ ಒಂದು ದಿನ ಅವರು ಮನೆಗೆ ಬಂದು ಕುಳಿತಾಗ ಈ ರಾಬರ್ ನೊಣಗಳು ಸೋಫಾದ ಬಳಿಯೇ ಕಂಡು ಬಂದಿವೆ. ಅವುಗಳನ್ನು ನಿಧಾನಕ್ಕೆ ಕೋಲಿನಿಂದ ಎತ್ತಿ, ಫೋಟೊ ತೆಗೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಪೀಟ್ ಬರ್ಫೋರ್ಡ್ ‘ರಾಬರ್ ನೊಣಗಳು ಸುಮಾರು 1 ತಾಸು ಹೀಗೆ ಮಿಲನದಲ್ಲಿ ತೊಡಗಿಕೊಂಡಿದ್ದವು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral News : ಇದು ಪವಾಡವೇ ಸರಿ; ಕಾರು 180 ಅಡಿ ಆಳಕ್ಕೆ ಬಿದ್ದರೂ ಡ್ರೈವ್ ಮಾಡುತ್ತಿದ್ದ ಮಹಿಳೆ ಬಚಾವ್!
ಇನ್ಸೆಕ್ಟ್ ವೀಕ್ ಫೋಟೋಗ್ರಫಿ ಸ್ಪರ್ಧೆ, ವಾರ್ಷಿಕವಾಗಿ ನಡೆಯುವ ಹವ್ಯಾಸಿ ಫೋಟೊಗ್ರಾಫರ್ಗಳ ಸ್ಪರ್ಧೆ. 2022ರ ಕಾಂಪಿಟೇಶನ್ನಲ್ಲಿ 34 ದೇಶಗಳಿಂದ ಸುಮಾರು 700 ಫೋಟೊಗಳು ಸ್ಪರ್ಧೆಯಲ್ಲಿ ಇದ್ದವು. ಇನ್ನು 18 ವರ್ಷದೊಳಗಿನವರ, ಕೀಟಗಳ ಫೋಟೊಗ್ರಫಿಸ್ಪರ್ಧೆಯಲ್ಲಿ ಸ್ವೀಡನ್ನ 16 ವರ್ಷದ ಹುಡುಗ ಗುಸ್ತಾವ್ ಪ್ಯಾರೆನ್ಮಾರ್ಕ್ ಪಡೆದುಕೊಂಡಿದ್ದಾರೆ.
ಪೀಟ್ ಬರ್ಫೋರ್ಡ್ ಅವರು ಸೆರೆಹಿಡಿದ ಫೋಟೊ
ಗುಸ್ತಾವ್ ಪ್ಯಾರೆನ್ಮಾರ್ಕ್ ಸೆರೆಹಿಡಿದ ಫೋಟೊ