ಲಂಡನ್ : ಎತ್ತರದ ದೇಹ ಉಳ್ಳವರು (Tallest Person) ಎಲ್ಲೇ ಹೋದರೂ ಗಮನ ಸೆಳೆಯುತ್ತಾರೆ. ಅದರಲ್ಲೂ ಮಿತಿಗಿಂತ ಜಾಸ್ತಿ ಎತ್ತರ ಇದ್ದರೆ ಇನ್ನಷ್ಟು ಜಾಸ್ತಿ ಮಾತನಾಡುತ್ತಾರೆ. ಅಂತೆಯೇ ಎಂಟು ದಶಕಗಳ ಹಿಂದೆ ಅಮೆರಿಕದಲ್ಲಿ ಅತ್ಯಂತ ಎತ್ತರದ ವ್ಯಕ್ತಿಯೊಬ್ಬರು ಇದ್ದರು. ಅವರು ಈಗ ಇಲ್ಲವಾದರೂ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಅವರ ಹೆಸರನ್ನು ಅಳಿಸಿ ಹಾಕಲು ಯಾರಿಗೂ ಸಾಧ್ಯವಾಗಿಲ್ಲ. ಕಪ್ಪು- ಬಿಳುಪು ಫೊಟೋಗ್ರಫಿಯ ಕಾಲದ ಅವರ ಚಿತ್ರವನ್ನು ಗಿನ್ನೆಸ್ ವಿಶ್ವ ದಾಖಲೆಯು ತನ್ನ ಟ್ವಿಟರ್ ಹ್ಯಾಂಡ್‌ನಲ್ಲಿ ಬಣ್ಣದೊಂದಿಗೆ ಪ್ರಕಟಿಸಿದೆ.
ಈ ದಾಖಲೆ ವೀರ ಎತ್ತರದ ವ್ಯಕ್ತಿಯ ಹೆಸರು ರಾಬರ್ಡ್ ವಾಡ್ಲೊ. ೧೯೩೫ರಲ್ಲಿ ತೆಗೆದ ಅವರ ಚಿತ್ರವನ್ನು ಗಿನ್ನೆಸ್ ವಿಶ್ವ ದಾಖಲೆ ಪ್ರಕಟಿಸಿದೆ. ರಾಬರ್ಟ್‌ಗೆ “ದಿ ಜಯಂಟ್ ಆಫ್ ಇಲ್ಲಿನಾಯಿಸ್’ ಎಂಬ ಹೆಸರೂ ಇತ್ತು. ಗಿನ್ನೆಸ್ ವಿಶ್ವ ದಾಖಲೆಯ ಪ್ರಕಾರ ೧೯೫೫ರಿಂದ ಅವರು ಎತ್ತರದ ವ್ಯಕ್ತಿಯೆಂಬ ದಾಖಲೆಯನ್ನು ಹೊಂದಿದ್ದಾರೆ.
ರಾಬರ್ಟ್ ವಾಡ್ಲೊ ಅವರನ್ನು ೧೯೪೦ರ ಜೂನ್ ೨೭ರಂದು ಅಳೆಯಲಾಗಿತ್ತು. ಈ ವೇಳೆ ಅವರು ೨.೭೨ ಮೀಟರ್ (೮ ಮೀಟರ್ ೧೧ ಇಂಚು) ಇದ್ದರು. ರಾಬರ್ಟ್ ಅವರು ಸಾಮಾನ್ಯ ಎತ್ತರದ ಪೋಷಕರಿಗೆ ಜನಿಸಿದ್ದರು. ಹುಟ್ಟುತ್ತಲೇ ೩.೮ ಕೆ.ಜಿ ತೂಕವಿದ್ದ ಅವರು ೫ ವರ್ಷಗಳಾದಾಗ ೫.೪ ಇಂಚಿನಷ್ಟು ಎತ್ತರಕ್ಕೆ ಬೆಳೆದಿದ್ದರು. ಈ ವೇಳೆಯೇ ಅವರು ದೊಡ್ಡವರ ಬಟ್ಟೆಯನ್ನು ಧರಿಸಬೇಕಾಗಿತ್ತು.
ರಾಬರ್ಟ್ ಅವರು ತಮಗೆ ೨೨ ವರ್ಷವಿದ್ದಾಗಲೇ ಮೃತಪಟ್ಟಿದ್ದರು. ಅವರ ಬಲಗಾಲಿನ ಮಂಡಿ ನೋವಿಗಾಗಿ ಅಳವಡಿಸಲಾಗಿದ್ದ ಬ್ರೇಸ್‌ನಿಂದ ಉಂಟಾಗಿದ್ದ ಗುಳ್ಳೆಗಳು ಉಲ್ಬಣಗೊಂಡು ೧೯೪೦ರ ಜುಲೈ ೧೫ರಂದು ನಿಧನ ಹೊಂದಿದ್ದರು.
ರಾಬರ್ಟ್ ಅವರ ಸ್ಮರಣಾರ್ಥವಾಗಿ ಅವರ ಗಾತ್ರದ ಪ್ರತಿಮೆಯನ್ನು 1986 ರಲ್ಲಿ ಆಲ್ಟನ್ ಮ್ಯೂಸಿಯಂ ಆಫ್ ಹಿಸ್ಟರಿ ಆಂಡ್ ಆರ್ಟ್ ಮುಂಭಾಗದಲ್ಲಿರುವ ಆಲ್ಟನ್‌ನ ಕಾಲೇಜ್ ಅವೆನ್ಯೂದಲ್ಲಿ ನಿರ್ಮಿಸಲಾಗಿದೆ.
ಇದನ್ನೂ ಓದಿ | Longest Kiss | 58 ಗಂಟೆ, 35 ನಿಮಿಷ, 58 ಸೆಕೆಂಡ್ ಸತತ ಚುಂಬನ, ಈಗ ಗಿನ್ನೆಸ್ ದಾಖಲೆಗೆ ಭಾಜನ