ಬೆಂಗಳೂರು: ಹ್ಯಾಕಿಂಗ್ ಒಂದು ದೊಡ್ಡ ಜಾಲ. ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಗೌಪ್ಯ ಮಾಹಿತಿಗಳನ್ನು ಕದಿಯುವುದೇ ಹ್ಯಾಕರ್‌ಗಳ (Hacking) ಕೆಲಸ. ಇದೀಗ ಈ ಹ್ಯಾಕರ್‌ಗಳು ದೊಡ್ಡ ಪ್ರಮಾಣದಲ್ಲಿಯೇ ಸಮಸ್ಯೆ ಸೃಷ್ಟಿಸಿದ್ದಾರೆ. ಟ್ವಿಟರ್ ಬಳಸುತ್ತಿರುವ ಬರೋಬ್ಬರಿ 20 ಕೋಟಿ ಜನರ ಇ-ಮೇಲ್ ಹಾಗೂ ಗೌಪ್ಯ ಮಾಹಿತಿಗಳನ್ನು ಕದ್ದಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: Twitter CEO | ಎಂಐಟಿ ಸ್ಕಾಲರ್ ಶಿವ ಅಯ್ಯಾದೊರೈಗೆ ಟ್ವಿಟರ್ ಸಿಇಒ ಆಗುವ ಬಯಕೆ
ಇಸ್ರೇಲ್‌ನ ಸೈಬರ್ ಸುರಕ್ಷತೆ ಸಂಸ್ಥೆಗೆ ಕೆಲಸ ಮಾಡುತ್ತಿರುವ ಸೆಕ್ಯುರಿಟಿ ರಿಸರ್ಚರ್ ಅಲೋನ್ ಗಲ್ ಅವರು ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. “ಟ್ವಿಟರ್ ಬಳಕೆದಾರರ 23.5 ಕೋಟಿ ಗೌಪ್ಯ ಮಾಹಿತಿಗಳನ್ನು ಹ್ಯಾಕರ್‌ಗಳು ಕದ್ದಿದ್ದಾರೆ. ಅದರಲ್ಲಿ ಇ-ಮೇಲ್, ಫೋನ್ ನಂಬರ್ ಸೇರಿ ಅನೇಕ ರೀತಿಯ ದಾಖಲೆಗಳಿವೆ” ಎಂದು ಅವರು ಹೇಳಿದ್ದಾರೆ. ಇದುವರೆಗೆ ನೋಡಿರುವುದರಲ್ಲಿ ಇದು ಅತ್ಯಂತ ದೊಡ್ಡ ಪ್ರಮಾಣದ ಹ್ಯಾಕ್ ಎಂದೂ ಅವರು ತಿಳಿಸಿದ್ದಾರೆ.
ಅಲೋನ್ ಅವರು ಈ ಹ್ಯಾಕ್ ಬಗ್ಗೆ ತಮ್ಮ ಲಿಂಕಡ್‌ಇನ್ ಖಾತೆಯಲ್ಲಿ ಡಿ.24ರಂದು ಮೊದಲನೇ ಬಾರಿಗೆ ಹಂಚಿಕೊಂಡಿದ್ದರು. ಒಂದು ವಾರದ ಹಿಂದೆ ಮತ್ತೆ ಅದರ ಬಗ್ಗೆ ಪೋಸ್ಟ್ ಹಾಕಿದ್ದು, 40 ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ ಎಂದಿದ್ದಾರೆ. ಹ್ಯಾಕರ್‌ಗಳು ತಮ್ಮ ಬಗ್ಗೆ ಇರುವ ಮಾಹಿತಿಯ ಸ್ಯಾಂಪಲ್‌ಗಳನ್ನೂ ಕಳುಹಿಸಿದ್ದಾರೆ ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿ ಅನೇಕ ಪ್ರಮುಖರ ಗೌಪ್ಯ ಮಾಹಿತಿಗಳನ್ನೂ ಹ್ಯಾಕರ್‌ಗಳು ಕದ್ದಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: Bizarre Jacket | ಎಲೆ ಕೋಸಿನ ರೇಟ್ 60,000 ರೂ.? ಟ್ವಿಟರ್‌ನಲ್ಲಿ ನಡೀತಿದೆ ಹೊಸ ಚರ್ಚೆ!
ನಿಮ್ಮ ಇ-ಮೇಲ್ ಸೋರಿಕೆಯಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಹೀಗೆ ಮಾಡಿ:
https://haveibeenpwned.com ವೆಬ್‌ಸೈಟ್‌ಗೆ ಭೇಟಿ ನೀಡಿ.
ಟ್ವಿಟರ್‌ನಲ್ಲಿ ಲಾಗ್ ಇನ್ ಮಾಡುವುದಕ್ಕೆ ಕೊಟ್ಟಿರುವ ಫೋನ್ ನಂಬರ್/ ಇ-ಮೇಲ್ ಐಡಿಯನ್ನು ಟೈಪ್ ಮಾಡಿ.
ನಿಮ್ಮ ಇ-ಮೇಲ್ ಹ್ಯಾಕ್ ಆಗಿದೆಯೋ ಇಲ್ಲವೋ ಎನ್ನುವುದನ್ನು ವೆಬ್‌ಸೈಟ್ ತೋರಿಸುತ್ತದೆ.