ಟೆಹ್ರಾನ್: ಹಿಜಾಬ್ ವಿಷಯಕ್ಕೆ (Hijab Hypocrisy in Iran) ಸಂಬಂಧಿಸಿದಂತೆ ಇರಾನ್‌ನಲ್ಲಿ ಇಸ್ಲಾಮಿಕ್ ಮೂಲಭೂತವಾದವು ಪರಾಕಾಷ್ಠೆ ತಲುಪಿದೆ. ಹಿಜಾಬ್ ಧರಿಸದ್ದಕ್ಕೆ ಮಹ್ಸಾ ಅಮಿನಿ (Mahsa Amini) ಎಂಬ ೨೨ ವರ್ಷದ ಯುವತಿಯನ್ನು ಹತ್ಯೆಗೈದ ಬೆನ್ನಲ್ಲೇ ಹಿಜಾಬ್ ವಿರುದ್ಧ ಹೋರಾಟದ ನೇತೃತ್ವದ ವಹಿಸಿಕೊಂಡಿದ್ದ ೨೦ ವರ್ಷದ ಹದೀಸ್ ನಜಾಫಿ ಎಂಬ ಮತ್ತೊಬ್ಬ ಯುವತಿಯನ್ನು (Hadis Najafi) ಭದ್ರತಾ ಸಿಬ್ಬಂದಿ ಹತ್ಯೆಗೈದಿದ್ದಾರೆ.
ಅಲ್‌ಬೋರ್ಜ್ ಪ್ರಾಂತ್ಯದ ಕಾರಕ್ ನಗರದಲ್ಲಿ ಹದೀಸ್ ನಜಾಫಿ ಅವರನ್ನು ಸೆಪ್ಟೆಂಬರ್ ೨೧ರಂದೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸೆಪ್ಟೆಂಬರ್ ೨೫ರಂದು ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿದೆ. ಮಹಿಳೆಯ ಎದೆ ಹಾಗೂ ಕುತ್ತಿಗೆಗೆ ಆರು ಗುಂಡು ಹಾರಿಸಿ ದಾರುಣಗವಾಗಿ ಕೊಲೆ ಮಾಡಲಾಗಿದೆ. ಮಹ್ಸಾ ಅಮಿನಿ ಹತ್ಯೆ ಬಳಿಕ ಹಿಜಾಬ್ ವಿರುದ್ಧ ದೇಶದಲ್ಲಿ ನಡೆದ ಪ್ರತಿಭಟನೆಗೆ ಹದೀಸ್ ನಜಾಫಿ ಬೆಂಬಲ ಸೂಚಿಸಿದ್ದರು. ಹಾಗೆಯೇ, ಒಂದು ತಂಡದ ನೇತೃತ್ವವನ್ನೂ ವಹಿಸಿಕೊಂಡಿದ್ದರು. ಇದನ್ನು ಸಹಿಸದ ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದೆ.
ಹಿಜಾಬ್ ಧರಿಸದ ಕಾರಣಕ್ಕಾಗಿ ಸೆಪ್ಟೆಂಬರ್ ೧೬ರಂದು ಟೆಹ್ರಾನ್‌ನಲ್ಲಿ ಮಹ್ಸಾ ಅಮಿನಿಯನ್ನು ನೈತಿಕ ಪೊಲೀಸರು (Moral Police) ಹತ್ಯೆ ಮಾಡಿದ್ದರು. ಇದಾದ ಬಳಿಕ ದೇಶಾದ್ಯಂತ ಹಿಜಾಬ್ ಕಡ್ಡಾಯ ನಿಯಮದ ವಿರುದ್ಧ ಹೋರಾಟ ಆರಂಭವಾಗಿದೆ. ಜನ ಬೀದಿಗಿಳಿದು, ಹಿಜಾಬ್ ಸುಟ್ಟು, ಕೂದಲು ಕತ್ತರಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಹೀಗಿದ್ದರೂ ಸರ್ಕಾರವು ಹಿಜಾಬ್ ವಿರುದ್ಧ ಹೋರಾಡುವವರ ಮೇಲೆ ಪ್ರಹಾರ ನಡೆಸುತ್ತಿದೆ.
ಇದನ್ನೂ ಓದಿ | ಹಿಜಾಬ್ ಧರಿಸೋದಿಲ್ಲ ಎಂದ ಸುದ್ದಿ ನಿರೂಪಕಿ; ಸಂದರ್ಶನ ಕೊಡೋದಿಲ್ಲವೆಂದು ಹೋದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ