Site icon Vistara News

13 ಇಸ್ರೇಲ್ ಪ್ರಜೆಗಳು ಸೇರಿ 25 ಒತ್ತೆಯಾಳುಗಳನ್ನು ರಿಲೀಸ್ ಮಾಡಿದ ಹಮಾಸ್

Hamas release 25 hostage including 13 Israel citizens

ನವದೆಹಲಿ: ಹಮಾಸ್ ಮತ್ತು ಇಸ್ರೇಲ್‌ (Israel and Hamas) ನಡುವಿನ ತಾತ್ಕಾಲಿಕ ಕದನ ವಿರಾಮದ (Ceasefire) ಒಪ್ಪಂದದ ಪ್ರಕಾರ, ಹಮಾಸ್ ಬಂಡುಕೋರರು 13 ಇಸ್ರೇಲಿ ಪ್ರಜೆಗಳು ಸೇರಿ 25 ಒತ್ತೆಯಾಳುಗಳನ್ನು ಶುಕ್ರವಾರ ರಿಲೀಸ್ ಮಾಡಿದ್ದಾರೆ(Hamas releases hostages). ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ರೆಡ್ ಕ್ರಾಸ್‌ಗೆ ಹಸ್ತಾಂತರಿಸಿದ್ದಾರೆ (Red Cross) ಎಂದು ತಿಳಿದು ಬಂದಿದೆ. ಬಿಡುಗಡೆಯಾದ ಒತ್ತೆಯಾಳುಗಳ ಪೈಕಿ 12 ಥಾಯ್ ಪ್ರಜೆಗಳಿದ್ದಾರೆ (Thai Citizens) ಥಾಯ್ಲೆಂಡ್ ಪ್ರಧಾನಿ ಸ್ರೇಠ್ಠಾ ಥಾವಿಸಿನ್ ಅವರು ಎಕ್ಸ್ ವೇದಿಕೆಯಲ್ಲಿ ತಿಳಿಸಿದ್ದಾರೆ. ಹಮಾಸ್-ಇಸ್ರೇಲ್‌ ನಡುವಿನ ಸುಮಾರು 2 ತಿಂಗಳ ಯುದ್ಧದ ಬಳಿಕ, ಒತ್ತೆಯಾಳುಗಳು ಈಗ ಬಿಡುಗಡೆಯಾಗುತ್ತಿದ್ದಾರೆ. ಈ ಮಧ್ಯೆ, ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾದಿಂದ ಇಸ್ರೇಲ್ ತನ್ನ ಸೇನೆಯನ್ನು ವಾಪಸ್ ಕರೆಯಿಸಿಕೊಂಡಿದೆ.

ಹಮಾಸ್ ಬಂಡುಕೋರರು ಇದುವರೆಗೂ 13 ಇಸ್ರೇಲಿ, 102 ಥಾಯ್ ಮತ್ತು ಫಿಲಿಪ್ಪೀನ್ಸ್‌ನ ಒಬ್ಬ ಪ್ರಜೆಗಳನ್ನು ಬಿಡುಗಡೆ ಮಾಡಿದ್ದಾರೆಂದು ಕತಾರ್ ಸರ್ಕಾರ ಖಚಿತಪಡಿಸಿದೆ. ಹಮಾಸ್ ಮತ್ತು ಇಸ್ರೇಲ್‌ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಕತಾರ್ ಹಾಗೂ ಅಮೆರಿಕ ಪ್ರಮುಖ ಪಾತ್ರ ನಿರ್ವಹಿಸಿದ್ದವು.

12 ಥಾಯ್ ಒತ್ತೆಯಾಳುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಭದ್ರತಾ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೃಢಪಡಿಸಿದೆ. ರಾಯಭಾರ ಕಚೇರಿಯ ಅಧಿಕಾರಿಗಳು ಇನ್ನೊಂದು ಗಂಟೆಯಲ್ಲಿ ಅವರನ್ನು ಕರೆದೊಯ್ಯಲು ಹೊರಟಿದ್ದಾರೆ. ಅವರ ಹೆಸರುಗಳು ಮತ್ತು ವಿವರಗಳನ್ನು ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಥಾಯ್ಲೆಂಡ್ ಪ್ರಧಾನಿ ಥಾವಿಸನ್ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಗಾಜಾದಲ್ಲಿನ ತಾತ್ಕಾಲಿಕ ಕದನ ವಿರಾಮದ ಭಾಗವಾಗಿ ಹಮಾಸ್, ಇಸ್ರೇಲಿ ಜೈಲಿನಲ್ಲಿರುವ 39 ಪ್ಯಾಲೆಸ್ಟೀನಿಯನ್ನರಿಗೆ ಪ್ರತಿಯಾಗಿ 13 ಇಸ್ರೇಲಿ ಒತ್ತೆಯಾಳುಗಳನ್ನು ಈಜಿಪ್ಟ್‌ಗೆ ತಲುಪಿಸಲು ಯೋಜಿಸಲಾಗಿತ್ತು. 12 ಥಾಯ್ ಪ್ರಜೆಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಸುಮಾರು ಎರಡು ತಿಂಗಳ ನಂತರ 25 ಜನರು ಹಮಾಸ್ ವಶದಿಂದ ಹೊರ ಬರುತ್ತಿದ್ದಾರೆ.

ರೆಡ್‌ ಕ್ರಾಸ್ ಸಂಸ್ಥೆಗೆ ಹಸ್ತಾಂತರ

ವರದಿಗಳ ಪ್ರಕಾರ, ಹಮಾಸ್ ಬಂಡುಕೋರರು ತಮ್ಮ ಬಳಿ ಇದ್ದ ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಸಂಸ್ಥೆ ಹಸ್ತಾಂತರಿಸಿದೆ. ಈಜಿಪ್ಟ್‌ನೊಂದಿಗೆ ಗಡಿ ಹಂಚಿಕೊಂಡಿರುವ ಗಾಜಾ- ರಾಫಾ ಗಡಿಯ ಬಳಿ ರೆಡ್‌ ಕ್ರಾಸ್‌ ಸಂಸ್ಥೆ ಜತೆಗೆ ವಿನಿಮಯ ನಡೆದಿದೆ. ಕೆಲವು ಇಸ್ರೇಲಿ ಒತ್ತೆಯಾಳುಗಳನ್ನು ಇಸ್ರೇಲ್‌ಗೆ ಹಿಂತಿರುಗಲು ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ಹಮಾಸ್‌ಗೆ ಹತ್ತಿರವಿರುವ ಎರಡು ಮೂಲಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅರ್ಧ ಗಂಟೆಯ ಹಿಂದೆ ಒತ್ತೆಯಾಳುಗಳನ್ನು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯು ಅವರನ್ನು ಈಜಿಪ್ಟಿನವರಿಗೆ ತಲುಪಿಸಿ, ಅಲ್ಲಿಂದ ಇಸ್ರೇಲ್ ಸರ್ಕಾರವನ್ನು ಕರೆದೊಯ್ಯಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಮಾಡಿದೆ. ಈ ಹಸ್ತಾಂತರ ಸುದ್ದಿಯನ್ನು ಮತ್ತೊಂದು ಮೂಲವೂ ಖಚಿತಪಡಿಸಿದೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Israel- Palestine War: ಮೆತ್ತಗಾದ ಹಮಾಸ್‌ನಿಂದ 50 ಒತ್ತೆಯಾಳು ಬಿಡುಗಡೆಗೆ ಒಪ್ಪಿಗೆ, 4 ದಿನ ಕದನ ವಿರಾಮ

Exit mobile version