Site icon Vistara News

Israel Palestine War: ತಂದೆ-ತಾಯಿ ಮುಂದೆಯೇ ಮಗಳನ್ನು ಹತ್ಯೆಗೈದ ಹಮಾಸ್ ಉಗ್ರರು!

Hamas Terrorists killed a girl In front of her parents

ನವದೆಹಲಿ: ಹಮಾಸ್ ಉಗ್ರರು (Hamas Terrorists) ಇಸ್ರೇಲ್ ಕುಟಂಬವನ್ನು (Israel Family) ಒತ್ತೆಯಾಳು ಮಾಡಿಕೊಂಡು, ತಂದೆ-ತಾಯಿ ಮುಂದೆಯೇ ಅವರ ಪುತ್ರಿಯನ್ನು (Israel Girl Killed) ಕೊಂದು ಹಾಕಿದ್ದಾರೆ. ಈ ಕುರಿತಾದ ವಿಡಿಯೋವೊಂದನ್ನು (Viral Video) ಇಸ್ರೇಲ್ ವಿದೇಶಾಂಗ ಸಚಿವಾಲಯವು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿಕೊಂಡಿದೆ. ಇಸ್ರೇಲಿ ಮಗುವನ್ನು ತನ್ನ ಕಿರಿಯ ಒಡಹುಟ್ಟಿದವರು ಮತ್ತು ಪೋಷಕರ ಮುಂದೆ “ಗಲ್ಲಿಗೇರಿಸಲಾಯಿತು”. ಈ ಕೃತ್ಯವು ಶುದ್ಧ ದುಷ್ಟತನದಿಂದ ಕೂಡಿದೆ ಮತ್ತು ಏನಾಗುತ್ತಿದೆ ಎಂಬುದನ್ನು ಜಗತ್ತು ತಿಳಿದುಕೊಳ್ಳಬೇಕು ಎಂದು ಪೋಸ್ಟ್‌ನಲ್ಲಿ ಇಸ್ರೇಲ್ ಹೇಳಿಕೊಂಡಿದೆ.

ನಾವು ಹಂಚಿಕೊಳ್ಳಬೇಕಾಗಿಲ್ಲ ಎಂದು ಬಯಸುವ ವೀಡಿಯೊಗಳಲ್ಲಿ ಈ ವಿಡಿಯೋ ಕೂಡ ಒಂದಾಗಿದೆ. ಪ್ರಸ್ತುತ ಹಮಾಸ್‌ನಿಂದ ಒತ್ತೆಯಾಳಾಗಿರುವ ತನ್ನ ಒಡಹುಟ್ಟಿದವರು ಮತ್ತು ಪೋಷಕರ ಮುಂದೆ ಇಸ್ರೇಲಿ ಮಗುವನ್ನು ಗಲ್ಲಿಗೇರಿಸಲಾಯಿತು. ಇದು ಶುದ್ಧ ಕೆಟ್ಟದ್ದಲ್ಲದಿದ್ದರೆ, ಏನೂ ಅಲ್ಲ. ಏನಾಗುತ್ತಿದೆ ಎಂದು ಜಗತ್ತಿಗೆ ತಿಳಿದಿದೆ ಎಂದು ಖಚಿತಪಡಿಸಿಕೊಳ್ಳಲು ದಯವಿಟ್ಟು ನಮಗೆ ಸಹಾಯ ಮಾಡಿ ಎಕ್ಸ್ ವೇದಿಕೆಯಲ್ಲಿ ಬರೆದುಕೊಳ್ಳಲಾಗಿದೆ.

ದಂಪತಿ ಮತ್ತು ಇಬ್ಬರು ಮಕ್ಕಳು ಇರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇಬ್ಬರು ಮಕ್ಕಳು ತಮ್ಮ ಸಹೋದರಿಗಾಗಿ ದುಃಖಿಸುತ್ತಿರುವುದನ್ನು ಕಾಣಬಹುದು. ಆದರೆ ಪೋಷಕರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಕೂಗ ಬೇಡ, ಕೂಗಬೇಡ, ಅವಳು ಸ್ವರ್ಗಕ್ಕೆ ಹೋದಳು ಎಂದು ಬಹುಶಃ ಉಗ್ರ ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

400 ಹಮಾಸ್ ಉಗ್ರರನ್ನು ಕೊಂದ ಇಸ್ರೇಲ್ ರಕ್ಷಣಾ ಪಡೆಗಳು

ಪ್ಯಾಲೆಸ್ತೀನ್‌ನ (Palestine) ಹಮಾಸ್ (Hamas Terrorists) ಉಗ್ರರ ಭೀಕರ ದಾಳಿಯ ಬೆನ್ನಲ್ಲೇ ಇಸ್ರೇಲ್ ಸೇನೆಯು ಗಾಜಾ ಪಟ್ಟಿಯ (Gaza Strip) ಮೇಲೆ ವೈಮಾನಿಕ ದಾಳಿಯನ್ನು ಕೊಂಡಿದೆ. ಪ್ರತಿ ದಾಳಿ ವೇಳೆ 400 ಹಮಾಸ್ ಉಗ್ರರನ್ನು ಕೊಂದ್ದು, 12ಕ್ಕೂ ಅಧಿಕ ಉಗ್ರರನ್ನು ಸೆರೆ ಹಿಡಿದಿರುವುದಾಗಿ ಇಸ್ರೇಲ್ ಹೇಳಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸಸ್(IDF) ವಕ್ತಾರ ಡೇನಿಯ್ ಹಗಾರಿ ಅವರು ಭಾನುವಾರದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಹಮಾಸ್ ಉಗ್ರರನ್ನು ಹುಡುಕಿ ಹುಡುಕಿ ಹೊಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ(Israel Palestine War).

ಈಗಲೂ ಕ್ಫರ್ ಅಜಾದಲ್ಲಿ ಪಡೆಗಳು ಸಂಘರ್ಷ ನಡೆದಿದೆ. ಹೆಚ್ಚಿನ ಸಂಖ್ಯೆಯ ಪಟ್ಟಣಗಳಲ್ಲಿ ಹಮಾಸ್ ಉಗ್ರರನ್ನು ಶೋಧಿಸಲಾಗುತ್ತಿದೆ. ಎಲ್ಲಾ ಪಟ್ಟಣಗಳಲ್ಲಿ ಇಸ್ರೇಲ್ ಸೇನಾ ಪಡೆಗಳಿವೆ. ಇಸ್ರೇಲ್ ಸೇನೆ ಇಲ್ಲದಿರುವ ಯಾವುದೇ ಪಟ್ಟಣವಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆಗಳ ಉನ್ನತ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿರುವುದಾಗಿ ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Israel Palestine War: ಪ್ಯಾಲೆಸ್ತೀನ್ ಮೇಲೆ ಅಧಿಕೃತ ಯುದ್ಧ ಘೋಷಿಸಿದ ಇಸ್ರೇಲ್! ವೈಮಾನಿಕ ದಾಳಿ ಶುರು

ಐಡಿಎಫ್‌ನ ಮಿಷನ್ ಉದ್ದೇಶಗಳು ಗಾಜಾದಲ್ಲಿನ ಗಡಿ ಸಮುದಾಯಗಳಿಂದ ಎಲ್ಲಾ ನಾಗರಿಕರನ್ನು ಸ್ಥಳಾಂತರಿಸಿ, ಅಲ್ಲಿ ಹೋರಾಟವನ್ನು ಕೊನೆಗೊಳಿಸುವುದಾಗಿದೆ. ಗಾಜಾ ಪಟ್ಟಿಯಲ್ಲಿರುವ ಎಲ್ಲ ಭಯೋತ್ಪಾದಕ ಟಾರ್ಗೆಟ್ ದಾಳಿ ನಡೆಸುವುದು ಮೊದಲ ಆದ್ಯತೆಯಾಗಿದೆ ಎಂದು ಹಗರಿ ಅವರು ತಿಳಿಸಿದ್ದಾರೆ.

ಹಮಾಸ್ ರಾಕೆಟ್ ದಾಳಿಯನ್ನು ಆರಂಭಿಸಿದ 24 ಗಂಟೆಯ ಬಳಿಕ ಇಸ್ರೇಲ್ ರಕ್ಷಣಾ ಪಡೆಗಳು ಮುನ್ನುಗ್ಗಿ ಹೋರಾಡುತ್ತಿವೆ. ಭಯೋತ್ಪಾದಕರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಗಾಜಾ ಗಡಿಗೆ ಸಮೀಪ ಇರುವ ಕ್ಫರ್ ಅಜಾದಲ್ಲಿ ಜೋರು ಯುದ್ಧ ನಡೆಯುತ್ತಿದೆ. ಎಲ್ಲ ಹಮಾಸ್ ಉಗ್ರರನ್ನು ಸದೆ ಬಡೆಯುವ ಪ್ರಯತ್ನವನ್ನು ಇಸ್ರೇಲ್ ರಕ್ಷಣಾ ಪಡೆಗಳು ಮಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version