Site icon Vistara News

Bin Laden Son | ನಾನೂ ಉಗ್ರನಾಗಬೇಕು ಎಂದು ತಂದೆ ಬಯಸಿದ್ದ, ಗುಂಡು ಹಾರಿಸಲು ಕಲಿಸಿದ್ದ, ಒಸಾಮಾ ಪುತ್ರ ಒಮರ್ ಹೇಳಿಕೆ

Omar Bin Laden

ಲಂಡನ್‌: ಅಲ್‌ಕೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾಡೆನ್‌ ಪುತ್ರನು ತಂದೆಯ ಬಗ್ಗೆ ಮಾತನಾಡಿದ್ದಾನೆ. “ನಾನೂ ಆತನ ಹಾದಿಯಲ್ಲಿಯೇ ಸಾಗಬೇಕು ಎಂಬ ಆಸೆ ಆತನಿಗಿತ್ತು. ಅದಕ್ಕಾಗಿಯೇ ನನ್ನ ಕೈಗೆ ಎಕೆ-೪೭ ಗನ್‌ ಕೊಟ್ಟು ನಾಯಿಗಳ ಮೇಲೆ ಹಾರಿಸಲು ಹೇಳುತ್ತಿದ್ದ. ರಾಸಾಯನಿಕಯುಕ್ತ ಶಸ್ತ್ರಾಸ್ತ್ರಗಳನ್ನು ಪ್ರಯೋಗ ಮಾಡಿಸುತ್ತಿದ್ದ” ಎಂದು ಬಿನ್‌ ಲಾಡೆನ್‌ನ ನಾಲ್ಕನೇ ಪುತ್ರ (Bin Laden Son) ಒಮರ್‌ ಬಿನ್‌ ಲಾಡೆನ್‌ ತಿಳಿಸಿದ್ದಾರೆ.

“ನನಗೆ ಆಗ ಏನೂ ತಿಳಿಯುತ್ತಿರಲಿಲ್ಲ. ನನ್ನ ತಂದೆಯ ಜತೆ ಕಳೆದ ದಿನಗಳು ಅತ್ಯಂತ ದುಸ್ಥರವಾಗಿದ್ದವು. ನಾನು ಕೂಡ ಆತನಂತೆ ಉಗ್ರನಾಗಬೇಕು ಎಂಬ ಬಯಕೆ ಆತನಿಗಿತ್ತು. ಅದಕ್ಕಾಗಿಯೇ ನನ್ನನ್ನು ಶಸ್ತ್ರಾಸ್ತ್ರ ಹಿಡಿಯುವಂತೆ ಮಾಡಿದ್ದ. ಅಫಘಾನಿಸ್ತಾನದಲ್ಲಿ ಇದನ್ನೆಲ್ಲ ಮಾಡಿಸುತ್ತಿದ್ದ” ಎಂದು ಹೇಳಿದ್ದಾರೆ.

“೨೦೦೧ರಲ್ಲಿ ನ್ಯೂಯಾರ್ಕ್‌ ಮೇಲೆ ಬಾಂಬ್‌ ದಾಳಿ ನಡೆಸುವ ಮುನ್ನ ಅಂದರೆ ಏಪ್ರಿಲ್‌ನಲ್ಲಿಯೇ ಆತ ಅಫಘಾನಿಸ್ತಾನ ತೊರೆದಿದ್ದ. ಆತನಿಗೆ ನನ್ನನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಆತ ಹೋದ ಬಳಿಕವೇ ನಾನು ನಿಟ್ಟುಸಿರು ಬಿಟ್ಟೆ” ಎಂದು ೪೧ ವರ್ಷದ ಒಮರ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ (WTC) ಮೇಲೆ ದಾಳಿ ನಡೆಸಿದ್ದರ ರೂವಾರಿ ಒಸಾಮಾ ಬಿನ್‌ ಲಾಡೆನ್‌ ಆಗಿದ್ದು, ಈತನನ್ನು ಬಳಿಕ ಅಮೆರಿಕ ಹತ್ಯೆ ಮಾಡಿತು.

ಇದನ್ನೂ ಓದಿ | Al-Jawahiri Dead | ಲಾಡೆನ್‌ ಉತ್ತರಾಧಿಕಾರಿ, 9/11 ಸಂಚುಕೋರ ಜವಾಹಿರಿಯ ಆಟ ಮುಗಿಸಿದ ಅಮೆರಿಕ

Exit mobile version