ಜೆರುಸಲೇಂ: ಇಸ್ರೇಲ್‌ನಲ್ಲಿ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಈಗ ಗಾಜಾಪಟ್ಟಿ ಮೇಲೆ ಸಮರ (Israel PaIestine War) ಸಾರಿದೆ. ಗಾಜಾ ಗಡಿಯಲ್ಲಿ ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿರುವ ಇಸ್ರೇಲ್ ಸೇನೆಯು, ಅಕ್ಷರಶಃ ಯುದ್ಧ ಸಾರಿದೆ. ಇದಕ್ಕೆ ನಿದರ್ಶನ ಎಂಬಂತೆ ಹಮಾಸ್ ಏರ್ ಫೋರ್ಸ್ (Hamas Air Force) ಮುಖ್ಯಸ್ಥ ಮುರಾದ್ ಅಬು ಮುರಾದ್‌ನನ್ನೇ (Murad Abu Murad) ಹತ್ಯೆಗೈಯಲಾಗಿದೆ.
ಶುಕ್ರವಾರ ರಾತ್ರಿ (ಅಕ್ಟೋಬರ್ 13) ಗಾಜಾಪಟ್ಟಿ ಮೇಲೆ ಇಸ್ರೇಲ್ ಯೋಧರು ವೈಮಾನಿಕ ದಾಳಿ ನಡೆಸಿದ್ದು, ಹಮಾಸ್ ಏರ್‌ಫೋರ್ಸ್ ಮುಖ್ಯಸ್ಥನನ್ನೇ ಹೊಡೆದುರುಳಿಸಿದ್ದಾರೆ. ಈತನು ಹಮಾಸ್ ಉಗ್ರರು ಇಸ್ರೇಲ್ ಮಾಡುವ ಸಂಚು ರೂಪಿಸಿದ ಪ್ರಮುಖರಲ್ಲಿ ಒಬ್ಬನಾಗಿದ್ದಾನೆ ಎಂದು ತಿಳಿದುಬಂದಿದೆ. ವಾಯುದಾಳಿ ದಾಳಿ ಮೂಲಕವೇ ಏರ್‌ಫೋರ್ಸ್ ಮುಖ್ಯಸ್ಥನನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ. ತಮ್ಮ ಮುಖಂಡನನ್ನು ಕಳೆದುಕೊಂಡ ಉಗ್ರರು ಈಗ ಕಂಗಾಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
The IDF says that the head of the Hamas air force, Murad Abu Murad, was killed as a result of a night airstrike in the Gaza Strip. According to the IDF, the strike targeted the headquarters🤔 pic.twitter.com/trCpVq1JKY
— Sprinter (@Sprinter99800) October 14, 2023
24 ಗಂಟೆಯಲ್ಲಿ 324 ಜನರನ್ನು ಕೊಂದ ಇಸ್ರೇಲ್
ಇಸ್ರೇಲ್ ಸೇನೆಯು ಯುದ್ಧ ಟ್ಯಾಂಕರ್, ಬಂಕರ್ ಹಾಗೂ ರಾಕೆಟ್‌ಗಳ ಮೂಲಕ ಗಾಜಾಪಟ್ಟಿ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಕಳೆದ 24 ಗಂಟೆಯಲ್ಲಿಯೇ ಇಸ್ರೇಲ್ ಮಾಡಿದ ದಾಳಿಗೆ ಗಾಜಾ ನಗರದ 324 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಡೀ ಹಮಾಸ್ ಉಗ್ರರನ್ನೇ ನಿರ್ನಾಮ ಮಾಡಲಾಗುವುದು ಎಂದು ಈಗಾಗಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Israel Palestine War: ಅವಳಿ ಮಕ್ಕಳ ಪ್ರಾಣ ಉಳಿಸಲು ತಮ್ಮ ಜೀವವನ್ನೇ ಬಲಿ ಕೊಟ್ಟ ಇಸ್ರೇಲ್ ದಂಪತಿ!
60 ಉಗ್ರರ ಹತ್ಯೆ
ಇತ್ತೀಚೆಗೆ ನಾಗರಿಕರ ರಕ್ಷಣೆಗೆ ಇಸ್ರೇಲ್ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇಸ್ರೇಲ್ ಯೋಧರು ಸಿನಿಮೀಯ ರೀತಿಯಲ್ಲಿ 250 ಒತ್ತೆಯಾಳುಗಳನ್ನು ರಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ರೀತಿಯ ಕಾರ್ಯಾಚರಣೆ ವೇಳೆ 60ಕ್ಕೂ ಹೆಚ್ಚು ಉಗ್ರರನ್ನೂ ಕೊಂದಿದ್ದಾರೆ. ಇಸ್ರೇಲ್ ಡಿಫೆನ್ಸ್ ಫೋರ್ಸ್‌ನ (IDF) ಶಯೇಟೆಟ್ ಫ್ಲೀಟ್ ಯುನಿಟ್‌ನ ಯೋಧರು ಸೂಫಾ ಔಟ್‌ಪೋಸ್ಟ್‌ನಲ್ಲಿ ದಾಳಿ ನಡೆಸಿ, 250 ನಾಗರಿಕರನ್ನು ರಕ್ಷಿಸಿದ್ದಾರೆ. ಗಾಜಾಗೆ ನುಗ್ಗಿದ ಇಸ್ರೇಲ್ ಯೋಧರು ಸಿನಿಮೀಯವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಯೋಜನೆ ರೂಪಿಸಿದಂತೆ ಆಪರೇಷನ್ ಕೈಗೊಂಡ ಅವರು, ಒಬ್ಬೊಬ್ಬನೇ ಉಗ್ರನನ್ನು ಹತ್ಯೆ ಮಾಡಿದ್ದಾರೆ. ನಿರಂತರ ಗುಂಡಿನ ದಾಳಿಯಲ್ಲಿ 60ಕ್ಕೂ ಹೆಚ್ಚಿನ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನು ಹಮಾಸ್ ಕಮಾಂಡರ್ ಸೇರಿ 26 ಉಗ್ರರನ್ನು ಬಂಧಿಸಿದ್ದಾರೆ.