ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಲ್ಲೆ, ಅವರ ಹತ್ಯೆ, ಶೋಷಣೆ, ಅತ್ಯಾಚಾರ, ಬಲವಂತದ ಮತಾಂತರ ಹೊಸದಲ್ಲ. ಹಿಂದುಗಳು ಜಾಸ್ತಿ ಇರುವ ಸಿಂಧ್ ಪ್ರಾಂತ್ಯವೊಂದರಲ್ಲೇ ವರ್ಷಕ್ಕೆ 1000 ಹಿಂದು ಹೆಣ್ಣುಮಕ್ಕಳು ಲೈಂಗಿಕ ಗುಲಾಮಗಿರಿ ಕೂಪಕ್ಕೆ ಬೀಳುತ್ತಿದ್ದಾರೆ. ಅಲ್ಲಿ ಹಿಂದೂಗಳನ್ನು ಅದೆಷ್ಟು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಇಡೀ ವಿಶ್ವವೇ ನೋಡುತ್ತಿದೆ. ಅಂಥ ದರಿದ್ರ ದೇಶ ಪಾಕಿಸ್ತಾನದಲ್ಲೀಗ ಮತ್ತೊಬ್ಬಳು ಹಿಂದು ಮಹಿಳೆಯನ್ನು ಭಯಾನಕವಾಗಿ ಹತ್ಯೆ ಮಾಡಲಾಗಿದೆ.
ಪಾಕ್ನ ಸಿಂಧ್ ಪ್ರಾಂತ್ಯದಲ್ಲಿರುವ ಶಿಂಜೋರೋ ಪಟ್ಟಣದಲ್ಲಿ 40 ವರ್ಷದ ಹಿಂದು ಮಹಿಳೆಯೊಬ್ಬರ ಮೃತದೇಹ ತಲೆ ಮತ್ತು ಸ್ತನಗಳನ್ನು ಕತ್ತರಿಸಿದ, ಚರ್ಮವನ್ನು ಸುಲಿದ ರೀತಿಯಲ್ಲಿ ಪತ್ತೆಯಾಗಿದೆ. ಈ ಮಹಿಳೆಯನ್ನು ದಿಯಾ ಎಂದು ಗುರುತಿಸಲಾಗಿದ್ದು, ಭೀಲ್ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವಳು ಎನ್ನಲಾಗಿದೆ. ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪಿಗಳು ಬಳಿಕ ಅವಳ ತಲೆ ಮತ್ತು ಸ್ತನಗಳನ್ನು ಕತ್ತರಿಸಿ, ಚರ್ಮವನ್ನು ಸುಲಿದು ಗೋಧಿ ಹೊಲದಲ್ಲಿ ಎಸೆದು ಹೋಗಿದ್ದಾರೆ ಎಂದು ವರದಿಯಾಗಿದೆ. ‘ಈ ಮಹಿಳೆ ವಿಧವೆಯಾಗಿದ್ದು, ನಾಲ್ಕು ಮಕ್ಕಳ ತಾಯಿ’ ಎಂದು ಆ ದೇಶದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಲೀಡರ್ ಮತ್ತು ಹಿಂದು ಸಮುದಾಯದ ಮೊದಲ ಸೆನೆಟರ್ ಆಗಿರುವ ಕೃಷ್ಣಕುಮಾರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಮಹಿಳೆ ಹತ್ಯೆಯಾದ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಮಹಿಳೆಯ ತಲೆಯನ್ನು ಕಡಿದು, ಅದರಲ್ಲಿನ ಮಾಂಸವನ್ನೆಲ್ಲ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಆ ಶವದ ಪೋಸ್ಟ್ಮಾರ್ಟಮ್ ಮುಕ್ತಾಯಗೊಂಡಿದ್ದು, ತನಿಖೆ ಪ್ರಾರಂಭವಾಗಿದೆ. ಆರೋಪಿಗಳು ಯಾರೆಂದು ಪತ್ತೆಯಾಗಿಲ್ಲ.
ಇದನ್ನೂ ಓದಿ: ಪತ್ನಿಯನ್ನು ಕೊಂದು ಶವವನ್ನು ಮನೆಯಲ್ಲೇ ಹೂತಿಟ್ಟ ಪತಿ; ಇಸ್ಲಾಂಗೆ ಮತಾಂತರ ಆಗಿದ್ದ ಹಿಂದು ಮಹಿಳೆಯ ಬರ್ಬರ ಹತ್ಯೆ