ಕಂಪಾಲ: ದೇವರ ಅದ್ಭುತ ಸೃಷ್ಟಿ ಎಂದರೆ ಅದು ಹಸಿವು. ಈ ಹಸಿವು ನೀಗಿಸಲು ಮನುಷ್ಯ ಮಾತ್ರವಲ್ಲ ಪ್ರಾಣಿಗಳು ಕೂಡ ಪರಿತಪಿಸುತ್ತವೆ. ಹೊಟ್ಟೆ ಹೊರೆಯಲು ಹರಸಾಹಸ ಮಾಡುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ, ಉಗಾಂಡದಲ್ಲಿ ನೀರಾನೆಯೊಂದು ಹಸಿವು ತಾಳದೆ ಎರಡು ವರ್ಷದ (Hippo Swallows Kid) ಮಗುವನ್ನು ನುಂಗಿದೆ. ಇದಾದ ಬಳಿಕ ಮಗುವನ್ನು ಹೊರಗೆಹಾಕಿದ್ದು, ಅದೃಷ್ಟವಶಾತ್ ಮಗು ಬದುಕುಳಿದಿದೆ.
“ಕಾಟ್ವೆ ಕೊಬಾಟೊರೊ ಪಟ್ಟಣದಲ್ಲಿ ಕಳೆದ ಭಾನುವಾರ (ಡಿಸೆಂಬರ್ ೧೧) ಎರಡು ವರ್ಷದ ಮಗು ಮನೆಯ ಬಳಿ ಆಡುತ್ತಿತ್ತು. ಮನೆಯ ಬಳಿಯೇ ನದಿಯೂ ಇರುವುದರಿಂದ ಮಗು ನೀರು ಕಂಡು ನದಿಯ ಬಳಿ ತೆರಳಿದೆ. ಇದೇ ವೇಳೆ, ಹಸಿವಿನಿಂದ ಕಂಗೆಟ್ಟಿದ್ದ ನೀರಾನೆಯು ಮಗುವನ್ನು ನುಂಗಿಬಿಟ್ಟಿದೆ. ನಂತರ, ನೀರಾನೆಯು ಮಗುವನ್ನು ಹೊರಗೆ ಹಾಕಿದೆ. ಇದಾದ ನಂತರವೇ ಮಗುವಿನ ಪೋಷಕರಿಗೆ ವಿಷಯ ಗೊತ್ತಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ನೀರಾನೆಯು ಹೊರಗೆ ಹಾಕಿದ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಕೂಲಂಕಷವಾಗಿ ತಪಾಸಣೆ ಮಾಡಿ, ಮುಂಜಾಗ್ರತಾ ಕ್ರಮವಾಗಿ ರೇಬೀಸ್ ನೀಡಿದ್ದಾರೆ. ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಇಲ್ಲದ ಕಾರಣ ಡಿಸ್‌ಚಾರ್ಜ್ ಮಾಡಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Teacher Marries Student | 20 ವರ್ಷದ ವಿದ್ಯಾರ್ಥಿನಿಯನ್ನೇ ಮದುವೆಯಾದ 42ರ ಶಿಕ್ಷಕ, ವಿಡಿಯೊ ವೈರಲ್