ನವದೆಹಲಿ: ನಾವೆಲ್ಲರೂ ದೇವರ ಮಕ್ಕಳಾದ್ದರಿಂದ ಸಲಿಂಗಕಾಮ ಅಪರಾಧವಲ್ಲ ಎಂದು ಪೋಪ್ ಫ್ರಾನ್ಸಿಸ್ (Pope Francis) ಅವರು ಹೇಳಿದ್ದಾರೆ. ಅಲ್ಲದೇ, ಕ್ಯಾಥೋಲಿಕ್ ಬಿಷಪ್‌ಗಳು ಚರ್ಚ್‌ಗಳಲ್ಲಿ ಎಲ್‌ಜಿಬಿಟಿಕ್ಯೂ ಜನರಿಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಲಿಂಗಿಯಾಗಿರುವುದು ಅಪರಾಧವಲ್ಲ ಎಂದಿರುವ ಪೋಪ್ ಫ್ರಾನ್ಸಿಸ್ ಅವರು, ಜಗತ್ತಿನ ವಿವಿಧ ಭಾಗಗಳಲ್ಲಿ ಕೆಲವು ಕ್ಯಾಥೋಲಿಕ್ ಬಿಷಪ್‌ಗಳು ಸಲಿಂಗವನ್ನು ಅಪರಾಧಿಕರಿಸುವ ಅಥವಾ ಎಲ್‌ಜಿಬಿಟಿ ಸಮುದಾಯವನ್ನು ವಿರೋಧಿಸತ್ತಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಬಿಷಪ್‌ಗಳ ಇಂಥ ವರ್ತನೆಗೆ ಸಾಂಸ್ಕೃತಿಕ ಹಿನ್ನೆಲೆ ಕಾರಣ. ಹಾಗಾಗಿ, ಪ್ರತಿಯೊಬ್ಬರ ಘನತೆಯನ್ನ ಗುರುತಿಸಲು ಬಿಷಪ್‌ಗಳು ಬದಲಾವಣೆ ಪ್ರಕ್ರಿಯೆಯನ್ನು ಎದುರಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Same-Sex Marriage | ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಏಕಿಲ್ಲ? ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಜಗತ್ತಿನಾದ್ಯಂತ ಸುಮಾರು 67 ದೇಶಗಳು ಸಂಲಿಂಗವನ್ನು ಅಪರಾಧಿಕರಿಸಿವೆ. ಈ ಪೈಕಿ 11 ರಾಷ್ಟ್ರಗಳಲ್ಲಿ ಸಲಿಂಗಕಾಮ ಅಪರಾಧಕ್ಕಾಗಿ ಗಲ್ಲು ಶಿಕ್ಷೆಯನ್ನು ವಿಧಿಸುವ ಕಾನೂನುಗಳಿವೆ. ಕೆಲವು ಕಡೆ ಕಾನೂನುಗಳು ಜಾರಿಯಲ್ಲಿ ಇರದಿದ್ದರೂ ಎಲ್‌ಜಿಬಿಟಿಕ್ಯೂ ಸಮುದಾಯದ ವಿರುದ್ಧ ದೌರ್ಜನ್ಯ, ಕಿರುಕುಳ, ಹಿಂಸಾಚಾರಗಳು ನಡೆಯುತ್ತಲೇ ಇವೆ.