ವಾಷಿಂಗ್ಟನ್: ಅಮೆರಿಕ ಇರುವುದೇ ಹಾಗೆ. ತನ್ನ ದೇಶದ ತಂಟೆಗೆ ಬರುವ ಉಗ್ರರನ್ನು ಹೊಡೆದುರುಳಿಸುತ್ತದೆ. ದೇಶದ ಭದ್ರತೆ ವಿಷಯಕ್ಕೆ ಬಂದಾಗ ದಿಟ್ಟ ಕ್ರಮ ತೆಗೆದುಕೊಳ್ಳುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಇತ್ತೀಚೆಗೆ ಕೆನಡಾ ಗಡಿಗಳಲ್ಲಿ ಶಂಕಾಸ್ಪದವಾಗಿ ಹಾರಾಡುತ್ತಿದ್ದ, ಚೀನಾದ ಗೂಢಚಾರ ಬಲೂನ್‌ಗಳು (China Spy Balloon) ಎಂದೇ ಹೇಳಲಾಗುತ್ತಿದ್ದ ಬಲೂನ್‌ಗಳನ್ನು ಅಮೆರಿಕ ಹೊಡೆದುರುಳಿಸಿದೆ.
ಕಳೆದ ಒಂದು ವಾರದಲ್ಲಿ ಅಮೆರಿಕವು ಮೂರ್ನಾಲ್ಕು ಬಲೂನ್‌ಗಳನ್ನು ಹೊಡೆದುರುಳಿಸಿದೆ. ಅಮೆರಿಕ ವಾಯುಪಡೆಯ ಎರಡು ವಿಮಾನಗಳು ಬಲೂನಿನ ಸಮೀಪ ತೆರಳಿ, ಅವುಗಳಿಗೆ ಗುರಿ ಇಟ್ಟು, ಎಲ್ಲೂ ಕೂದಲೆಳೆಯಷ್ಟೂ ತಪ್ಪಾಗದ ಹಾಗೆ ಕಾರ್ಯಾಚರಣೆ ಕೈಗೊಂಡಿವ ವಿಡಿಯೊ ಈಗ ವೈರಲ್ ಆಗಿದೆ. ಇದು ಅಮೆರಿಕದ ವಾಯುಪಡೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: Spy Balloon: ಕೆನಡಾದ ವಾಯು ಪ್ರದೇಶದಲ್ಲಿ ಬಲೂನ್, ಹೊಡೆದುರುಳಿಸಿದ ಅಮೆರಿಕ