ಬುಡಾಪೆಸ್ಟ್: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಕ್ಷಮಾದಾನ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧ್ಯಕ್ಷೆ (Hungary President) ಕಟಾಲಿನ್ ನೊವಾಕ್ ಶನಿವಾರ ರಾಜೀನಾಮೆ ಘೋಷಿಸಿದ್ದಾರೆ. ಇವರು ಅಲ್ಲಿನ ಪ್ರಧಾನಿ ವಿಕ್ಟರ್ ಒರ್ಬಾನ್ ಆಪ್ತರಾಗಿದ್ದಾರೆ. ಅದೇ ರೀತಿ ಒರ್ಬಾನ್ ಬೆಂಬಲಿಗರಾಗಿರುವ ನ್ಯಾಯ ಸಚಿವ ಜುಡಿತ್ ವರ್ಗಾ ನಿವೃತ್ತಿ ಘೋಷಿಸಿದ್ದಾರೆ.
ಪ್ರತಿಪಕ್ಷ ರಾಜಕಾರಣಿಗಳಿಂದ ಹೆಚ್ಚುತ್ತಿರುವ ಒತ್ತಡ ಮತ್ತು ಶುಕ್ರವಾರ ಸಂಜೆ ಅಧ್ಯಕ್ಷರ ಅರಮನೆಯ ಹೊರಗೆ ಪ್ರತಿಭಟನೆಗಳ ನಂತರ ರಾಜೀನಾಮೆ ನೀಡಿದ್ದಾರೆ. ಕಟಾಲಿನ್ ನೊವಾಕ್ ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಲೈಂಗಿಕ ಕಿರುಕುಳದ ಆರೋಪಿಗಳಿಗೆ ಕ್ಷಮಾಧಾನ ನೀಡುವ ಮೂಲಕ ಹೆಸರು ಕೆಡಿಸಿಕೊಂಡರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಕ್ಷಮಾದಾನ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಹಂಗೇರಿ ಪ್ರಧಾನಿ ವಿಕ್ಟರ್ ಒರ್ಬಾನ್ ಅವರ ಆಪ್ತ ಮಿತ್ರ ಅಧ್ಯಕ್ಷ ಕಟಾಲಿನ್ ನೊವಾಕ್ ಶನಿವಾರ ರಾಜೀನಾಮೆ ಘೋಷಿಸಿದ್ದಾರೆ.
“ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು 46 ವರ್ಷದ ನೊವಾಕ್ ಹೇಳಿದ್ದಾರೆ. ತಾವು ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.
ವಿಶ್ವ ವಾಟರ್ ಪೋಲೊ ಚಾಂಪಿಯನ್ಶಿಪ್ನಲ್ಲಿ ಕಜಕಿಸ್ತಾನ ವಿರುದ್ಧದ ಹಂಗೇರಿಯ ಪಂದ್ಯವನ್ನು ವೀಕ್ಷಿಸಲು ಕತಾರ್ಗೆ ಹೋಗಿದ್ದ ನೊವಾಕ್ ತ್ವರಿತವಾಗಿ ಬುಡಾಪೆಸ್ಟ್ಗೆ ಮರಳಿ. ವಿಮಾನ ಇಳಿದ ಕೂಡಲೇ ರಾಜೀನಾಮೆಯನ್ನು ಘೋಷಿಸಿದ್ದಾರೆ.
ಯಾರು ಈ ಕಟಾಲಿನಾ ನೊವಾಕ್?
ಕಟಾಲಿನ್ ನೊವಾಕ್ ಹಂಗೇರಿಯ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು. ಅವರು ಮಾರ್ಚ್ 10, 2022 ರಂದು ಅಧಿಕಾರ ವಹಿಸಿಕೊಂಡರು ಮತ್ತು ಯುರೋಪಿಯನ್ ಸಂಸತ್ ಚುನಾವಣೆಗಳನ್ನು ಎದುರಿಸುತ್ತಿರುವ ಸಂಪ್ರದಾಯವಾದಿ ಪ್ರಧಾನಿಯ ನಿಕಟ ಮಿತ್ರರಾಗಿದ್ದಾರೆ.
ನೊವಾಕ್ ಬುಡಾಪೆಸ್ಟ್ ಮತ್ತು ಪ್ಯಾರಿಸ್ ವಿಶ್ವವಿದ್ಯಾಲಯ ಅಧ್ಯಯನವನ್ನು ವಿದ್ಯಾರ್ಥಿವೇತನದಲ್ಲಿ ಪೂರ್ಣಗೊಳಿಸಿದ್ದರು. ಅವರು ಅರ್ಥಶಾಸ್ತ್ರಜ್ಞೆ.
ಇದನ್ನೂ ಓದಿ : UN Security Council : ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ; ರಷ್ಯಾದ ಬೆಂಬಲ
ಹಂಗೇರಿಯಲ್ಲಿ ಅಧ್ಯಕ್ಷರ ಪಾತ್ರವು ಔಪಚಾರಿಕ. ಅಪರಾಧಿಗಳಿಗೆ ಕ್ಷಮಾದಾನ ನೀಡುವ ಅಧಿಕಾರವನ್ನು ಅಧ್ಯಕ್ಷರು ಹೊಂದಿದ್ದಾರೆ. ಮಕ್ಕಳ ಗೃಹದ ಮಾಜಿ ಉಪ ನಿರ್ದೇಶಕರಿಗೆ ಅಧ್ಯಕ್ಷರು ಕ್ಷಮಾದಾನ ನೀಡಿದ ನಂತರ ಈ ವಿವಾದ ಭುಗಿಲೆದ್ದಿದೆ.
ಹಾನಿಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಮಕ್ಕಳ ವಿರುದ್ಧ ಮಾಡಿದ ಅಪರಾಧಗಳಿಗೆ ಕ್ಷಮಾದಾನ ನೀಡುವ ಹಕ್ಕನ್ನು ಅಧ್ಯಕ್ಷರಿಂದ ಕಸಿದುಕೊಳ್ಳುವ ಸಾಂವಿಧಾನಿಕ ತಿದ್ದುಪಡಿಯನ್ನು ಪ್ರಧಾನಿ ಗುರುವಾರ ತಡರಾತ್ರಿ ಸಂಸತ್ತಿಗೆ ಸಲ್ಲಿಸಿದರು.