ಕತಾರ್: ಸ್ವಾತಂತ್ರ್ಯದ ಅಮೃತ ಮಹೋತ್ಸವದ (Amrit mahotsav) ಹಿನ್ನೆಲೆಯಲ್ಲಿ ನಗರದ ಏಷಿಯನ್ ಟೌನ್ ಕ್ರಿಕೆಟ್ ಕ್ರೀಡಾಂಗಣದ ರೀಕ್ರಿಯೇಷನ್ ಹಾಲ್‌ನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ (Indian Cultural Centre-ICC) ವತಿಯಿಂದ ಆ.12ರಂದು ಭಾರತೀಯ ವಲಸಿಗರು ಹಾಗೂ ಕಾರ್ಮಿಕರಿಗಾಗಿ ಲೈವ್ ಆರ್ಕೆಸ್ಟ್ರಾ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿತ್ತು.
ಐಸಿಸಿಯ ಮೆಗಾ ಕಾರ್ನಿವಲ್ ಇವೆಂಟ್‌ಗಳ 12ನೇ ದಿನದ ಕಾರ್ಯಕ್ರಮದಲ್ಲಿ ಐಸಿಸಿಯ ಜಂಟಿ ಕಾರ್ಯದರ್ಶಿ ಸುಧೀರ್ ಗುಪ್ತಾ ಮಾತನಾಡಿ, ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ವಲಸಿಗರು ಮತ್ತು ಕಾರ್ಮಿಕರ ಕಲ್ಯಾಣಕ್ಕೆ ಹೇಗೆ ಬದ್ಧವಾಗಿದೆ ಎಂಬುವುದನ್ನು ವಿವರಿಸಿ, ಕತಾರ್ ಅಭಿವೃದ್ಧಿಗೆ ಭಾರತೀಯ ಸಮುದಾಯದ ಅಮೂಲ್ಯ ಕೊಡುಗೆ ಬಗ್ಗೆ ಸ್ಥಳೀಯ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಮಹಾರಾಷ್ಟ್ರ ಮಂಡಲ್, ತೆಲಂಗಾಣ ಗಲ್ಫ್ ಸಮಿತಿ, ಕರ್ನಾಟಕ, ರಾಜಸ್ಥಾನ ಮತ್ತು ಪಂಜಾಬಿ ಸಮುದಾಯದ ಸದಸ್ಯರು ಲೈವ್ ಆರ್ಕೆಸ್ಟ್ರಾದ ಗಾಯಕರೊಂದಿಗೆ ದೇಶಭಕ್ತಿ ಗೀತೆಗಳನ್ನು ಹಾಡಿದರು.
ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕತಾರ್‌ನ ಭಾರತೀಯ ರಾಯಭಾರಿ ಡಾ. ದೀಪಕ್ ಮಿತ್ತಲ್, ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಕ್ಸೇವಿಯರ್ ಧನರಾಜ್, ಮಾಜಿ ಐಸಿಸಿ ಅಧ್ಯಕ್ಷ ಮತ್ತು ಆಚರಣಾ ಸಮಿತಿಯ ಅಧ್ಯಕ್ಷ ಎ.ಪಿ.ಮಣಿಕಂಠನ್, ಗ್ರ್ಯಾಂಡ್ ಮಾಲ್ ವ್ಯವಸ್ಥಾಪಕ ನಿರ್ದೇಶಕ ಅಶ್ರಫ್ ಚೆರಕಲ್, ಐಸಿಸಿ ಸಲಹಾ ಸಮಿತಿ ಅಧ್ಯಕ್ಷ ಕೆ.ಎಸ್.ಪ್ರಸಾದ್, ಖಜಾಂಚಿ ಅರ್ಷದ್, ಮೋಹನ್ ದುರೈ ಸ್ವಾಮಿ ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ಇದನ್ನೂ ಓದಿ | Har Ghar Tiranga | ಮೋದಿ ಕರೆಗೆ ಭಾರಿ ಬೆಂಬಲ, ತಿರಂಗಾ ಜತೆಗಿರುವ 5 ಕೋಟಿ ಸೆಲ್ಫಿ ಅಪ್‌ಲೋಡ್!