Site icon Vistara News

Pak defense Minister | ರಾತ್ರಿ 8 ಗಂಟೆಯ ಬಳಿಕ ಮಕ್ಕಳನ್ನು ಮಾಡದಿದ್ದರೆ ಜನಸಂಖ್ಯೆ ನಿಯಂತ್ರಣ: ಪಾಕ್‌ ರಕ್ಷಣಾ ಸಚಿವ

asif

ಇಸ್ಲಮಾಬಾದ್:‌ ಜನ ಸಂಖ್ಯಾ ಸ್ಫೋಟವನ್ನು ತಡೆಯಲು ರಾತ್ರಿ 8 ಗಂಟೆಯ ಬಳಿಕ ಮಕ್ಕಳನ್ನು ಮಾಡದಿರುವುದೇ ಪರಿಹಾರ ಎಂಬ ಹಾಸ್ಯಾಸ್ಪದ, ವಿಲಕ್ಷಣ ಹೇಳಿಕೆಯನ್ನು ಹೊರಡಿಸಿ ಪಾಕ್‌ ರಕ್ಷಣಾ ಸಚಿವರು ( Pak defense Minister) ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಗುರಿಯಾಗಿದ್ದಾರೆ.

ಪಾಕಿಸ್ತಾನದ ರಕ್ಷಣಾ ಸಚಿವ ಖಾಜ್ವಾ ಮಹಮ್ಮದ್‌ ಆಸಿಫ್‌ ಜನಸಂಖ್ಯೆಯ ನಿಯಂತ್ರಣಕ್ಕೆ ಇಂಥ ಅರ್ಥಹೀನ ಐಡಿಯಾ ಕೊಟ್ಟಿದ್ದಾರೆ.

ಮಾರುಕಟ್ಟೆಗಳು ರಾತ್ರಿ 8 ಗಂಟೆಯ ಒಳಗೆ ಮುಚ್ಚುವ ರಾಷ್ಟ್ರಗಳಲ್ಲಿ ಜನ ಸಂಖ್ಯೆ ನಿಯಂತ್ರಣದಲ್ಲಿ ಇದೆ ಎಂದೂ ಸುದ್ದಿಗೋಷ್ಠಿಯೊಂದರಲ್ಲಿ ಆಸಿಫ್‌ ಹೇಳಿರುವುದು ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Exit mobile version