ಬಾಲಿ: ನಿಮ್ಮ ಹತ್ತಿರ ಒಂದು ಕೋಟಿ ರೂಪಾಯಿ ಇದೆ ಮತ್ತು ನಿಮಗೆ ದೀರ್ಘ ಅವಧಿಗೆ ವಿದೇಶದಲ್ಲಿ ಇರಬೇಕೆಂಬ ಆಸೆ ಇದೆಯೇ? ಹಾಗಿದ್ದರೆ ನಿಮ್ಮ ಆಸೆ ಈಡೇರಿತು ಅಂತಿಟ್ಟುಕೊಳ್ಳಿ! ಶ್ರೀಮಂತರನ್ನು ತಮ್ಮ ದೇಶಕ್ಕೆ ಆಕರ್ಷಿಸುವ ಸ್ಪರ್ಧೆಯಲ್ಲಿ ಈಗ ದ್ವೀಪ ರಾಷ್ಟ್ರ ಇಂಡೋನೇಷ್ಯಾ ಕೂಡ ಇಳಿದಿದೆ. ಆಗ್ನೇಯ ಏಷ್ಯಾದಲ್ಲೇ ಬಲಿಷ್ಠ ಆರ್ಥಿಕತೆಯನ್ನು ಹೊಂದಿರುವ ಇಂಡೋನೇಷ್ಯಾ ‘ಸೆಕೆಂಡ್ ಹೋಮ್ ವೀಸಾ’ ನೀಡುತ್ತದೆ. ಸುಮಾರು ಒಂದು ಕೋಟಿ ರೂಪಾಯಿಯನ್ನು ನೀಡಿದರೆ ಹತ್ತು ವರ್ಷಗಳ ಕಾಲದ ಸೆಕೆಂಡ್ ಹೋಮ್ ವೀಸಾದಡಿ ಇಂಡೋನೇಷ್ಯಾದಲ್ಲಿ ವಾಸಿಸಬಹುದು.
ಇಂಡೋನೇಷ್ಯಾ ಆರ್ಥಿಕತೆಗೆ ಭಾರಿ ಕೊಡುಗೆ ನೀಡುವ ಕೆಲವು ವಿಶೇಷ ವಿದೇಶಿಗರಿಗೆ ಇದು ಉತ್ತೇಜನ ನೀಡುವ ಕ್ರಮವಾಗಿದೆ ಎಂದು ಇಮ್ಮಿಗ್ರೇಷನ್‌ನ ಹಂಗಾಮಿ ಪ್ರಧಾನ ನಿರ್ದೇಶಕ ವಿಡೋಡೋ ಏಕತಹಜಹಜನ ಅವರು ಹೇಳಿದ್ದಾರೆ. ಕೋಸ್ಟ್ ರಿಕಾದಿಂದ ಮೆಕ್ಸಿಕೋವರೆಗಿನ ದೇಶಗಳ ವೃತ್ತಿಪರರನ್ನು, ಪಿಂಚಣಿದಾರರನ್ನು ಮತ್ತು ಇತರ ಪ್ರಭಾವಿ ಜನರನ್ನು ತನ್ನತ್ತ ಸೆಳೆಯಲು ಇಂಡೋನೇಷ್ಯಾ ಪ್ರಯತ್ನಿಸುತ್ತಿದೆ.
ಡಿಜಿಟಲ್ ಅಲೆಮಾರಿಗಳು (digital nomads) ಎಂದು ಕರೆಯಲಾಗುವ ವೃತ್ತಿಪರರ, ಸಾಂಕ್ರಾಮಿಕ ರೋಗದ ನಂತರ ತಮ್ಮ ಕೆಲಸವನ್ನು ದೂರದಿಂದಲೇ ಮಾಡಲು ತಮ್ಮ ಹೊಸ ಸ್ವಾತಂತ್ರ್ಯವನ್ನು ಬಳಸಲು ನೋಡುವುದರಿಂದ ವಲಸೆ ಆಯ್ಕೆಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪಡೆಯಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ.
ಡಿಜಿಟಲ್ ನೋಮಾಡ್ ವೀಸಾ ಯೋಜನೆಯನ್ನು ಇಂಡೋನೇಷ್ಯಾ 2021ರಲ್ಲೇ ಜಾರಿಗೆ ತಂದಿದೆ. ಆ ಮೂಲಕ ಬಾಲಿಗೆ ವಿದೇಶಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವುದು ಇಂಡೋನೇಷ್ಯಾ ಸರ್ಕಾರದ ಉದ್ದೇಶವಾಗಿದೆ. ಇಂಡೋನೇಷ್ಯಾ ಎಲ್ಲ ನಗರಗಳ ಪೈಕಿ ಬಾಲಿ ವಿದೇಶಿಗರ ಅಗ್ರ ರಜಾ ಕಳೆಯುವ ಸ್ಥಳವಾಗಿದೆ ಮತ್ತು ವಿದೇಶಿ ವಿನಿಮಯವನ್ನು ಗಳಿಸುವ ಪ್ರಮುಖ ನಗರವಾಗಿದೆ.
ಇದನ್ನೂ ಓದಿ | Football | 133 ಮಂದಿಯನ್ನು ಬಲಿ ಪಡೆದ ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಮ್ ನೆಲಸಮ