ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ (Imran Khan) ಅವರ ವಿರುದ್ಧ ಪೊಲೀಸರು ಕೊಲೆ ಮತ್ತು ಭಯೋತ್ಪಾದನಾ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇಮ್ರಾನ್ ಖಾನ್ ಮತ್ತು ಅವರ ಪಕ್ಷದ 400 ನಾಯಕರು, ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Akshay Kumar : ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ ಕಾಂಬಿನೇಶನ್ ಸೆಲ್ಫಿ ಸಿನಿಮಾ ಮೊದಲ ದಿನದ ಕಲೆಕ್ಷನ್ ಅತೀ ಕನಿಷ್ಠ!
ಪಾಕಿಸ್ತಾನದಲ್ಲಿ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ 11 ತಿಂಗಳು ಕಳೆದಿವೆ. ಈ ಅವಧಿಯಲ್ಲಿ ಸರ್ಕಾರವು ಇಮ್ರಾನ್ ಖಾನ್ ಅವರ ವಿರುದ್ಧ ಒಟ್ಟು 80 ಪ್ರಕರಣಗಳು ದಾಖಲಾಗುವಂತೆ ಮಾಡಿದೆ.
ಬುಧವಾರದಂದು ಇಮ್ರಾನ್ ಖಾನ್ ಅವರ ಮನೆ ಮುಂದೆ ಪಿಟಿಐ ಪಕ್ಷದ ಮೆರವಣಿಗೆ ಹೊರಡುವುದರಲ್ಲಿತ್ತು. ಆಗ ಪೊಲೀಸರು ಆ ಸ್ಥಳಕ್ಕೆ ಬಂದಿದ್ದು, ಪೊಲೀಸರು ಮತ್ತು ಪಿಟಿಐ ಕಾರ್ಯಕರ್ತರ ನಡುವೆ ಗುದ್ದಾಟ ನಡೆದಿದೆ. ಈ ಘಟನೆಯಲ್ಲಿ ಪಿಟಿಐನ ಓರ್ವ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಹಲವರು ಗಾಯಾಳುಗಳಾಗಿದ್ದಾರೆ. ಹಾಗೆಯೇ ಪೊಲೀಸ್ ಸಿಬ್ಬಂದಿಯಲ್ಲೂ ಅನೇಕರು ಗಾಯಾಳುಗಳಾಗಿದ್ದಾರೆ. ಕಾರ್ಯಕರ್ತ ಸಾವನ್ನಪ್ಪಿರುವ ಹಿನ್ನೆಲೆ ಪೊಲೀಸರು ಇಮ್ರಾನ್ ಖಾನ್ ಮತ್ತು 400 ಕಾರ್ಯಕರ್ತರ ವಿರುದ್ಧ ಕೊಲೆ ಪ್ರಕರಣ ಹಾಗೂ ಭಯೋತ್ಪಾದನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Imran Khan: ಪಾಕ್‌ನಲ್ಲಿ ಕೆ.ಜಿ ತುಪ್ಪದ ಬೆಲೆ 600 ಶತಕೋಟಿ ರೂ., ಇಮ್ರಾನ್ ಖಾನ್ ಹೇಳಿಕೆಯ ವಿಡಿಯೊ ವೈರಲ್
ಈ ಬಗ್ಗೆ ಪಿಟಿಐನ ನಾಯಕ ಫವಾದ್ ಚೌಧರಿ ಅವರು ಮಾತನಾಡಿದ್ದು, “ಪೊಲೀಸರು ಪಿಟಿಐ ಕಾರ್ಯಕರ್ತನ ಸಾವಿನ ಹಿನ್ನೆಲೆ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು ಆದರೆ ಅದನ್ನು ಬಿಟ್ಟು ಅವರು 70 ವರ್ಷದ ಇಮ್ರಾನ್ ಖಾನ್ ಮತ್ತು 400 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.