Site icon Vistara News

‘ಫೋನ್​ ಸೆಕ್ಸ್’​ ಸುಳಿಯಲ್ಲಿ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​; ಇಮ್ರಾನ್​ ಹಶ್ಮಿ ಎಂದು ವ್ಯಂಗ್ಯವಾಡಿದ ಪತ್ರಕರ್ತೆ!

Lahore High Court has ordered the police to stop the operation to arrest Imran Khan

ಇಮ್ರಾನ್‌ ಖಾನ್.

ಕರಾಚಿ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈಗೊಂದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಇಮ್ರಾನ್ ಖಾನ್ ರದ್ದು ಎನ್ನಲಾದ ಎರಡು ಆಡಿಯೊ ಕ್ಲಿಪ್ ಗಳು ವೈರಲ್ ಆಗುತ್ತಿದ್ದು..ಇವು ರಾಜಕೀಯಕ್ಕೆ ಸಂಬಂಧಪಟ್ಟದ್ದಾಗಿರಲಿ ಅಥವಾ ಅವರ ದೇಶದ ವಿರುದ್ಧ ಮಾತಾಡಿದ್ದಾಗಲೀ ಅಲ್ಲ. ಈ ಸಲ ಇಮ್ರಾನ್ ಖಾನ್ ಸಿಲುಕಿದ್ದು ಫೋನ್ ಸೆಕ್ಸ್ ವಿವಾದದಲ್ಲಿ. ಇಮ್ರಾನ್ ಖಾನ್ ಮತ್ತು ಮಹಿಳೆಯೊಬ್ಬರು ಫೋನ್​​​ನಲ್ಲಿ ತುಂಬ ಅಶ್ಲೀಲವಾಗಿ, ಲೈಂಗಿಕ ಪ್ರಚೋದಕವಾಗಿ ಮಾತಾಡಿಕೊಂಡ ಆಡಿಯೊಗಳು ಇವಾಗಿವೆ. ಆ ಮಹಿಳೆ ತನ್ನ ಖಾಸಗಿ ಅಂಗಗಳು, ತನ್ನ ಲೈಂಗಿಕ ಬದುಕಿನ ಬಗ್ಗೆ ಮಾತಾಡಿದ್ದೂ ಆಡಿಯೋದಲ್ಲಿ ಕೇಳುತ್ತದೆ ಎನ್ನಲಾಗಿದೆ. ಆ ಮಹಿಳೆ ಯಾರು ಗೊತ್ತಿಲ್ಲ. ಆದರೆ ಅದರಲ್ಲಿದ್ದ ಪುರುಷನ ಧ್ವನಿ ಇಮ್ರಾನ್ ಖಾನ್ ಅವರದ್ದು ಎಂದು ಪಾಕಿಸ್ತಾನಿ ಪತ್ರಕರ್ತರು, ಮಾಧ್ಯಮಗಳು ಪ್ರತಿಪಾದಿಸಿವೆ.

ಈ ಆಡಿಯೊಗಳನ್ನು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಂಡಿದ್ದು ಪಾಕಿಸ್ತಾನದ ಪತ್ರಕರ್ತ ಸೈಯದ್ ಅಲಿ ಹೈದರ್ ಎಂಬುವರು. ಆದರೆ ಮೊದಲು ಈ ಆಡಿಯೊ ವೈರಲ್ ಮಾಡಿದ್ದು ಯಾರು ಎಂಬುದು ಖಚಿತವಾಗಿಲ್ಲ. ಪಾಕಿಸ್ತಾನದ ಪ್ರಧಾನಿ ಕಚೇರಿ ಮಾಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದರೆ, ಆ ಆಡಿಯೊದಲ್ಲಿ ಧ್ವನಿ ಕೇಳುತ್ತಿರುವ ಮಹಿಳೆಯೇ ಮೊದಲು ಇದನ್ನು ವೈರಲ್ ಮಾಡಿದ್ದು ಎಂದು ಇನ್ನೂ ಕೆಲವು ಮೀಡಿಯಾಗಳು ಹೇಳಿವೆ.

ಇನ್ನು ಪಾಕಿಸ್ತಾನದ ಒಂದಷ್ಟು ಜರ್ನಲಿಸ್ಟ್​​ಗಳಂತೂ ಇಮ್ರಾನ್ ಖಾನ್ ವಿರುದ್ಧ ಟೀಕಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ‘ಇದು ಇಮ್ರಾನ್ ಖಾನ್ ವೈಯಕ್ತಿಕ ಬದುಕು. ಅವರು ಏನಾದರೂ ಮಾಡಿಕೊಳ್ಳಲಿ. ಆದರೆ ಅವರು ಇನ್ನಾದರೂ ತಾನು ಸಭ್ಯ, ಮುಸ್ಲಿಂ ಸಮುದಾಯದ ಪ್ರಬಲ ನಾಯಕ ಎಂದು ಬಿಂಬಿಸಿಕೊಳ್ಳುವುದನ್ನು ಬಿಡಲಿ’ ಎಂದು ಪತ್ರಕರ್ತೆ ಜಮ್ಜಾ ಅಜರ್ ಹೇಳಿದ್ದಾರೆ. ಹಾಗೇ ಇನ್ನೊಬ್ಬಳು ಪತ್ರಕರ್ತೆ ಇಮ್ರಾನ್ ಖಾನ್​​ರನ್ನು ಭಾರತದ ಬಾಲಿವುಡ್​ ನಟ ಇಮ್ರಾನ್ ಹಶ್ಮಿಗೆ ಹೋಲಿಸಿದ್ದಾರೆ. ಇಮ್ರಾನ್ ಹಶ್ಮಿ ಸಿನಿಮಾಗಳಲ್ಲಿ ಹೆಚ್ಚೇ ಎನ್ನಿಸುವಷ್ಟು ಬೋಲ್ಡ್​, ಕಿಸ್ಸಿಂಗ್​ ದೃಶ್ಯಗಳು ಇರುವುದರಿಂದ ಆಕೆ ಹೀಗೆ ಹೇಳಿ ವ್ಯಂಗ್ಯ ಮಾಡಿದ್ದಾಳೆ.

ಫೇಕ್ ಆಡಿಯೊ ಎಂದ ಇಮ್ರಾನ್ ಪಕ್ಷ
ಈ ಮಧ್ಯೆ ಇಮ್ರಾನ್ ಖಾನ್ ಪಕ್ಷ ಪಿಟಿಐ ಆಡಿಯೊ ಫೇಕ್ ಎಂದು ಹೇಳಿದೆ. ಇದರಲ್ಲಿನ ಧ್ವನಿ ಇಮ್ರಾನ್ ಖಾನ್ ಅವರದ್ದಲ್ಲ. ಅವರ ರಾಜಕೀಯ ದ್ವೇಷಿಗಳು ಈ ತುಚ್ಛ ಕೆಲಸ ಮಾಡಿದ್ದಾರೆ. ಇಮ್ರಾನ್ ಖಾನ್ ಇಂಥ ಕೆಲಸ ಮಾಡುವವರು ಅಲ್ಲ ಎಂದು ಪಿಟಿಐ ನಾಯಕ ಡಾ.ಅರ್ಸ್ಲಾನ್ ಖಾಲೀದ್ ತಿಳಿಸಿದ್ದಾರೆ.

ಇದನ್ನೂ ಓದಿ: Imran Khan Wife | ದುಬಾರಿ ವಾಚ್‌ ಮಾರಿ ಜೀವನ ಸಾಗಿಸುವ ಗತಿ ಬಂತೇ ಇಮ್ರಾನ್‌ ಖಾನ್‌ಗೆ? ಪತ್ನಿ ಆಡಿಯೊ ವೈರಲ್

Exit mobile version