ವಾಷಿಂಗ್ಟನ್: ಸಾಮಾಜಿಕ ಜಾಲತಾಣ ಟ್ವಿಟರ್‌ಅನ್ನು ಖರೀದಿಸಿದ ಬಳಿಕ ಎಲಾನ್ ಮಸ್ಕ್ (Elon Musk) ಅವರು ಮುಲಾಜಿಲ್ಲದೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಕುರಿತು ಜಾಗತಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಎಲಾನ್ ಮಸ್ಕ್ ಅವರು ನಕಲಿ ಖಾತೆಗಳನ್ನು (Parody Accounts) ರದ್ದುಗೊಳಿಸುವ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಟ್ವಿಟರ್ ಕಂಟೆಂಟ್ ವಿಚಾರದಲ್ಲಿ ಮಸ್ಕ್ ಹಲವು ತೀರ್ಮಾನ ತೆಗೆದುಕೊಂಡಿದ್ದಾರೆ. ಅಶ್ಲೀಲ ಅಂಶಗಳಿರುವ ವಿಡಿಯೊ, ಲೈಂಗಿಕ ದೌರ್ಜನ್ಯ, ಅಶ್ಲೀಲ ಮಾಹಿತಿ ಹಂಚಿಕೆ ಸೇರಿ ಹಲವು ಅಂಶಗಳು ಕಂಡುಬಂದರೆ ದೂರು ನೀಡುವ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಇಂತಹ ಖಾತೆಗಳನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಹಾಗೆಯೇ, ಜನರ ದಾರಿ ತಪ್ಪಿಸುವ, ತಪ್ಪು ತಪ್ಪಾದ ಮಾಹಿತಿ ಹಂಚಿಕೊಂಡಿರುವ, ಬೇರೆಯವರನ್ನು ಹೀಗಳೆಯಲೆಂದೇ ರಚಿಸುವ ನಕಲಿ ಖಾತೆಗಳನ್ನು ಸಹ ರದ್ದುಗೊಳಿಸಲಾಗುವುದು ಎಂದು ಮಸ್ಕ್ ತಿಳಿಸಿದ್ದಾರೆ. ಇದರಿಂದ ಭಾರತ ಸೇರಿ ಜಗತ್ತಿನಾದ್ಯಂತ ಕೋಟ್ಯಂತರ ನಕಲಿ ಖಾತೆಗಳು ರದ್ದಾಗಲಿವೆ. ಹಾಗಾಗಿಯೇ ಇದು ಮಹತ್ವದ ತೀರ್ಮಾನ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Twitter | ದಯವಿಟ್ಟು ಕಚೇರಿಗೆ ಬನ್ನಿ, ಕೆಲ ಉದ್ಯೋಗಿಗಳಿಗೆ ಮಸ್ಕ್ ಯೂ ಟರ್ನ್