Site icon Vistara News

Mother Heroine | ರಷ್ಯಾದಲ್ಲಿ 10 ಮಕ್ಕಳನ್ನು ಹೆತ್ತು ಕೊಟ್ಟರೆ ಹೆಣ್ಣುಮಕ್ಕಳಿಗೆ ಸಿಗಲಿದೆ 12 ಲಕ್ಷ ರೂಪಾಯಿ!

Vladimir Putin

ಮಾಸ್ಕೊ: ಕೆಲವೊಂದು ರಾಷ್ಟ್ರಗಳಿಗೆ ಜನಸಂಖ್ಯೆ ಶಾಪವಾದರೆ, ಮತ್ತೊಂದಿಷ್ಟು ದೇಶಗಳಿಗೆ ಜನರೇ ವರ. ೧೪೦ ಕೋಟಿ ಜನಸಂಖ್ಯೆ ಇರುವ ಚೀನಾದಲ್ಲಿಯೇ ಜನಸಂಖ್ಯೆ ನಿಯಂತ್ರಣದ ನಿಯಮ ಸಡಿಲಗೊಳಿಸಲಾಗಿದೆ. ಈಗ ರಷ್ಯಾದಲ್ಲೂ ಜನಸಂಖ್ಯೆ ಹೆಚ್ಚಿಸಲು ನೂತನ ನೀತಿ ಜಾರಿಗೆ ತರಲಾಗಿದೆ. ಜನಸಂಖ್ಯೆ ಹೆಚ್ಚಿಸಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌‌ (Vladimir Putin) , “ದೇಶದಲ್ಲಿ ೧೦ ಮಕ್ಕಳನ್ನು ಹೆರುವ ಮಹಿಳೆಯರಿಗೆ ೧೩,೫೦೦ ಪೌಂಡ್‌ (ಸುಮಾರು ೧೨.೯೪ ಲಕ್ಷ ರೂ.) ನೀಡುವುದಾಗಿ” ಘೋಷಿಸಿದ್ದಾರೆ. ಈ ಯೋಜನೆಗೆ ಮದರ್‌ ಹೀರೊಯಿನ್‌ (Mother Heroine) ಎಂದು ಹೆಸರಿಸಲಾಗಿದೆ.

ಕೊರೊನಾದಿಂದಾಗಿ ರಷ್ಯಾದಲ್ಲಿ ೩.೭೫ ಲಕ್ಷ ಜನ ಮೃತಪಟ್ಟಿದ್ದಾರೆ. ಉಕ್ರೇನ್‌ ಮೇಲೆ ಸಮರ ಸಾರಿ, ಸೈನಿಕರನ್ನು ಉಕ್ರೇನ್‌ಗೆ ಕಳುಹಿಸಿದ ಕಾರಣ ಸಮರಭೂಮಿಯಲ್ಲಿ ಸಾವಿರಾರು ಸೈನಿಕರು ಸಾವಿಗೀಡಾಗಿದ್ದಾರೆ. ಇದರಿಂದಾಗಿ ರಷ್ಯಾದಲ್ಲಿ ಜನಸಂಖ್ಯೆ ಕೊರತೆಯುಂಟಾಗಿದೆ ಎಂದು ತಜ್ಞರು ವ್ಲಾಡಿಮಿನ್‌ ಪುಟಿನ್‌ ಅವರಿಗೆ ತಿಳಿಸಿದ್ದಾರೆ. ಇದಕ್ಕೆ ಪುಟಿನ್‌ ಸಮ್ಮತಿ ಸೂಚಿಸಿದ್ದಾರೆ.

ರಷ್ಯಾ ರಾಜಕೀಯ ಹಾಗೂ ಭದ್ರತಾ ತಜ್ಞ ಡಾ.ಜೆನ್ನಿ ಮ್ಯಾಥರ್ಸ್‌ ಅವರು ಮಾಧ್ಯಮಗಳಿಗೆ ಹೊಸ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಯಾವುದೇ ಮಹಿಳೆಯು ೧೦ ಮಕ್ಕಳನ್ನು ಹೆತ್ತರೆ, ಮಕ್ಕಳು ಆರೋಗ್ಯವಾಗಿದ್ದರೆ, ಅವರಿಗೆ ಒಂದೇ ಕಂತಿನಲ್ಲಿ ೧೨.೯೪ ಲಕ್ಷ ರೂ. ಸಿಗಲಿದೆ.

ಇದನ್ನೂ ಓದಿ | ಪುಟಿನ್‌ ಪ್ರೇಯಸಿಯ ಮೇಲೆ ಮುಗಿಬಿದ್ದ ಯುರೋಪ್!‌ ಯಾರೀಕೆ ಕಬಯೇವಾ?

Exit mobile version