ವಾಷಿಂಗ್ಟನ್: ಪ್ರತಿಷ್ಠಿತ ಜಾನ್ಸ್ ಹಾಪ್ಕಿನ್ಸ್ ಕೇಂದ್ರ ವರ್ಲ್ಡ್ಸ್ ಬ್ರೈಟೆಸ್ಟ್ ಪಟ್ಟಿಯನ್ನು ಪ್ರಕಟಿಸಿದ್ದು(“World’s Brightest” Student List), ಇಂಡಿಯನ್-ಅಮೆರಿಕನ್ ಬಾಲಕಿ(Indian-American Girl), ವರ್ಷದ ಪ್ರೀಶಾ ಚಕ್ರವರ್ತಿ (Preesha Chakraborty) ಸ್ಥಾನ ಪಡೆದಿದ್ದಾರೆ. ಸುಮಾರು 90 ರಾಷ್ಟ್ರಗಳ 16,000 ವಿದ್ಯಾರ್ಥಿಗಳು ಗ್ರೇಡ್ ಲೇವಲ್ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಈ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರೀಷಾ ಕ್ಯಾಲಿಫೋರ್ನಿಯಾದ ಫ್ರೀಮಾಂಟ್ನಲ್ಲಿರುವ ವಾರ್ಮ್ ಸ್ಪ್ರಿಂಗ್ ಎಲಿಮೆಂಟರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಗ್ರೇಡ್ 3 ವಿದ್ಯಾರ್ಥಿಯಾಗಿ 2023 ರ ಬೇಸಿಗೆಯಲ್ಲಿ ಯುಎಸ್ ಮೂಲದ ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ (Johns Hopkins Centre for Talented Youth) ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಪಂಚದಾದ್ಯಂತ 90 ಕ್ಕೂ ಹೆಚ್ಚು ದೇಶಗಳ 16,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲಿನ ದರ್ಜೆಯ ಪರೀಕ್ಷೆಗಳ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಿದ ನಂತರ ಪ್ರೀಷಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಿಟಿವೈ ಟ್ಯಾಲೆಂಟ್ ಸರ್ಚ್ನ ಭಾಗವಾಗಿ ಸ್ಯಾಟ್ (ಸ್ಕಾಲಸ್ಟಿಕ್ ಅಸೆಸ್ಮೆಂಟ್ ಟೆಸ್ಟ್), ಆ್ಯಕ್ಟ್ (ಅಮೇರಿಕನ್ ಕಾಲೇಜ್ ಟೆಸ್ಟಿಂಗ್), ಸ್ಕೂಲ್ ಮತ್ತು ಕಾಲೇಜ್ ಎಬಿಲಿಟಿ ಟೆಸ್ಟ್ ಅಥವಾ ಅಂತಹುದೇ ಮೌಲ್ಯಮಾಪನಗಳಲ್ಲಿನ ಅಸಾಧಾರಣ ಪ್ರದರ್ಶನಕ್ಕಾಗಿ ಆಕೆಯನ್ನು ಗೌರವಿಸಲಾಯಿತು.
ಮೌಖಿಕ ಮತ್ತು ಪರಿಮಾಣಾತ್ಮಕ ವಿಭಾಗಗಳಲ್ಲಿ ಪ್ರೀಶಾ ಚಕ್ರವರ್ತಿ ಅವರು ಗ್ರೇಡ್ 5 ಪ್ರದರ್ಶನಗಳಲ್ಲಿ ಶೇ.99 ಅಂಕ ಗಳಿಸಿದ್ದಾರೆ. ಆ ಮೂಲಕ ಗ್ರ್ಯಾಂಡ್ ಆನರ್ಸ್ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಾಧನೆಯಿಂದಾಗಿ ಪ್ರೀಶಾ ಚಕ್ರವರ್ತಿ ಅವರು ಗಣಿತ, ಕಂಪ್ಯೂಟರ್ ಪ್ರೋಗ್ರಾಮಿಂಗ್, ರಸಾಯನಶಾಸ್ತ್ರ, ಭೌತಶಾಸ್ತ್ರ, ರೀಡಿಂಗ್ ಮತ್ತು ರೈಟಿಂಗ್ 2-12 ಗ್ರೇಡ್ಗಳಲ್ಲಿ ಮುಂದುವರಿದ ವಿದ್ಯಾರ್ಥಿಗಳಿಗೆ 250 ಕ್ಕೂ ಹೆಚ್ಚು ಜಾನ್ಸ್ ಹಾಪ್ಕಿನ್ಸ್ CTY ನ ಆನ್ಲೈನ್ ಮತ್ತು ಆನ್-ಕ್ಯಾಂಪಸ್ ಕಾರ್ಯಕ್ರಮಗಳಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಪ್ರೀಶಾ ಅವರು ವಿಶ್ವದಲ್ಲೇ ಅತ್ಯಂತ ಹಳೆಯ ಉನ್ನತ-ಐಕ್ಯೂ ಸೊಸೈಟಿಯೆಂದು ಹೆಸರಾದ ಮೆನ್ಸಾ ಫೌಂಡೇಶನ್ನ ಜೀವಿತಾವಧಿಯ ಸದಸ್ಯರಾಗಿದ್ದಾರೆ. ಅಲ್ಲಿ ಪ್ರಮಾಣೀಕೃತ, ಮೇಲ್ವಿಚಾರಣೆಯ ಐಕ್ಯೂ ಅಥವಾ ಇತರ ಅನುಮೋದಿತ ಬುದ್ಧಿಮತ್ತೆ ಪರೀಕ್ಷೆಯಲ್ಲಿ 98 ನೇ ಶೇಕಡಾ ಅಥವಾ ಹೆಚ್ಚಿನ ಅಂಕಗಳನ್ನು ಗಳಿಸುವ ಜನರಿಗೆ ಸದಸ್ಯತ್ವವನ್ನು ನೀಡಲಾಗುತ್ತದೆ.
ಮಗಳ ಈ ಸಾಧನೆಗೆ ಅವರ ತಂದೆ ತಾಯಿ ಕೂಡ ಹೆಚ್ಚು ಖುಷಿಪಟ್ಟಿದ್ದಾರೆ. ಪ್ರೀಯಾ ಯಾವಾಗಲೂ ಹೊಸದನ್ನು ಕಲಿಯುವಲ್ಲಿ ಹೆಚ್ಚು ಕುತೂಹಲಿಯಾಗಿದ್ದರು ಮತ್ತು ನಿರಂತರವಾಗಿ ತಮ್ಮ ಶೈಕ್ಷಣಿಕ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆಂದು ಎಂದು ಪೋಷಕರು ಹೇಳಿದ್ದಾರೆ.
ಇದು ಒಂದು ಟೆಸ್ಟ್ ಆಧಾರದ ಮೇಲೆ ಅರ್ಹತೆಯನ್ನು ಗುರುತಿಸುವುದಿಲ್ಲ. ಆದರೆ ಅವರ ಕುತೂಹಲ ಮತ್ತು ಕಲಿಕೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಿಟಿವೈನ ಕಾರ್ಯನಿರ್ವಾಹಕ ನಿರ್ದೇಶಕ ಆಮಿ ಶೆಲ್ಟನ್ ಹೇಳಿದ್ದಾರೆ. 1979 ರಲ್ಲಿ ಸ್ಥಾಪಿತವಾದ ಸಿಟಿವೈ ಪರೀಕ್ಷೆ, ಕಾರ್ಯಕ್ರಮಗಳು ಮತ್ತು ಮುಂದುವರಿದ ಕಲಿಯುವವರಿಗೆ ಇತರ ಬೆಂಬಲದ ಮೂಲಕ ಪ್ರತಿಭಾನ್ವಿತ ಶಿಕ್ಷಣದ ಕ್ಷೇತ್ರವನ್ನು ಮುನ್ನಡೆಸಲು ಮೀಸಲಾಗಿರುವ ನಾವೀನ್ಯತೆಯ ಕೇಂದ್ರವಾಗಿದೆ.
ಈ ಸುದ್ದಿಯನ್ನೂ ಓದಿ: Arun Sagar: ಮುಯ್ ಥಾಯ್ ಸ್ಪರ್ಧೆಯಲ್ಲಿ ಅರುಣ್ ಸಾಗರ್ ಪುತ್ರ ಚಾಂಪಿಯನ್; ವಿಶೇಷ ಸಾಧನೆ!