Site icon Vistara News

ಅಮೆರಿಕದ ಕಾನ್ಸುಲೇಟ್‌ ಎದುರು ತಿರಂಗಾ ಹಾರಿಸಿ ಖಲಿಸ್ತಾನಿಗಳಿಗೆ ತಿರುಗೇಟು ಕೊಟ್ಟ ಭಾರತೀಯರು

Indian Americans Wave Tricolour In Front Of Khalistan Supporters At San Francisco Consulate

Indian Americans Wave Tricolour In Front Of Khalistan Supporters At San Francisco Consulate

ವಾಷಿಂಗ್ಟನ್‌: ಭಾರತದಲ್ಲಿ ಖಲಿಸ್ತಾನಿಗಳ ನಾಯಕ, ಹಿಂಸೆಗೆ ಪ್ರಚೋದನೆ ನೀಡುವ, ಉಗ್ರರ ಜತೆ ಸಂಪರ್ಕ ಹೊಂದಿರುವ ಅಮೃತ್‌ಪಾಲ್‌ ಸಿಂಗ್‌ ಬಂಧನಕ್ಕೆ ಪಂಜಾಬ್‌ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದನ್ನು ಖಂಡಿಸಿ ಇತ್ತೀಚೆಗೆ ಲಂಡನ್‌ ಹಾಗೂ ಅಮೆರಿಕದಲ್ಲಿ ಖಲಿಸ್ತಾನಿಗಳು ಉಪಟಳ ಮಾಡುತ್ತಿದ್ದಾರೆ. ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಮೇಲಿನ ತಿರಂಗಾವನ್ನು ಖಲಿಸ್ತಾನಿಗಳು ಕೆಳಗಿಳಿಸಿದ್ದರು. ಆದರೆ, ಭಾರತದ ಅಧಿಕಾರಿಗಳು ಬೃಹತ್‌ ತಿರಂಗಾ ಹಾರಿಸಿ ಅವರಿಗೆ ತಿರುಗೇಟು ನೀಡಿದ್ದರು. ಅದರಂತೆ, ಸ್ಯಾನ್‌ಫ್ರಾನ್ಸಿಸ್ಕೋದಲ್ಲಿಯೂ ದೇಶಪ್ರೇಮ ಹೊಂದಿರುವ ಅನಿವಾಸಿ ಭಾರತೀಯರು ತಿರಂಗಾ ಹಿಡಿದು ಕುಣಿಯುವ ಮೂಲಕ ಖಲಿಸ್ತಾನಿಗಳಿಗೆ ತಿರುಗೇಟು ನೀಡಿದ್ದಾರೆ.

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಇಂಡಿಯನ್‌ ಕಾನ್ಸುಲೇಟ್‌ ಎದುರು ಜಮಾಯಿಸಿದ ಅನಿವಾಸಿ ಭಾರತೀಯರು, ಕೈಯಲ್ಲಿ ತಿರಂಗಾ ಧ್ವಜಗಳನ್ನು ಹಿಡಿದು ಕುಣಿದರು. ಪ್ರತಿಯೊಬ್ಬರೂ ತಿರಂಗಾ ಹಿಡಿದು, ಒಗ್ಗಟ್ಟು ಪ್ರದರ್ಶಿಸುವ ಮೂಲಕ ಖಲಿಸ್ತಾನಿಗಳಿಗೆ ತಿರುಗೇಟು ನೀಡಿದರು. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇವರು ನಿಜವಾದ ದೇಶಭಕ್ತರು ಎಂಬುದಾಗಿ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ವಿದೇಶಕ್ಕೆ ಹೋಗಿ ನೆಲೆ ನಿಂತರೂ ಭಾರತದ ಮಣ್ಣನ್ನು ಮರೆತಿಲ್ಲ ಎಂದು ಶ್ಲಾಘಿಸಿದ್ದಾರೆ.

ಅಮೆರಿಕದಲ್ಲಿ ಭಾರತೀಯರ ಒಗ್ಗಟ್ಟು

ಅಮೆರಿಕದಲ್ಲಿರುವ ಇಂಡಿಯನ್‌ ಕಾನ್ಸುಲೇಟ್‌ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದು ಅನಿವಾಸಿ ಭಾರತೀಯರಿಗೆ ಮಾತ್ರವಲ್ಲ, ಇಡೀ ಜಗತ್ತಿನ ಜನರನ್ನು ಕೆರಳಿಸಿದೆ. ಹಾಗಾಗಿ, ಅಮೆರಿಕದಲ್ಲಿರುವ ನಾವೆಲ್ಲರೂ ಭಾರತದ ಪರ ನಿಲ್ಲಬೇಕು, ಭಾರತೀಯರ ಒಗ್ಗಟ್ಟು ಪ್ರದರ್ಶಿಸಬೇಕು ಎಂಬ ಕಾರಣಕ್ಕಾಗಿ ಇಂಡಿಯನ್‌ ಕಾನ್ಸುಲೇಟ್‌ ಎದುರು ನಿಂತು ತಿರಂಗಾ ಹಾರಿಸಿದ್ದೇವೆ” ಎಂದು ಅಮೆರಿಕದ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸತೀಶ್‌ ವಾಲೆ ತಿಳಿಸಿದ್ದಾರೆ.

ಕಳೆದ ಭಾನುವಾರ ಇಂಡಿಯನ್ ಕಾನ್ಸುಲೇಟ್ ದಾಳಿ ನಡೆಸಿ, ಹಲವಾರು ವಿಡಿಯೊಗಳನ್ನು ಚಿತ್ರಿಕರಿಸಿ, ಖಲಿಸ್ತಾನಿಗಳೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇಂಡಿಯನ್ ಕಾನ್ಸುಲೇಟ್ ಕಚೇರಿಯ ಬಾಗಿಲುಗಳ ಗಾಜುಗಳನ್ನು ಪುಡಿ ಮಾಡುತ್ತಿರುವುದು, ಕಿಟಕಿಗಳನ್ನು ಮುರಿಯುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಖಲಿಸ್ತಾನಿ ಧ್ವಜಗಳನ್ನು ಕಾಣಬಹುದು. ಕಟ್ಟಡದ ಪ್ರವೇಶ ದ್ವಾರದಲ್ಲಿ ನೆಡಲಾಗಿರುವ ಖಲಿಸ್ತಾನಿ ಧ್ವಜಗಳನ್ನು ಕಾನ್ಸುಲೇಟ್‌ನ ಮೂವರು ಸಿಬ್ಬಂದಿ ತೆರವುಗೊಳಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು.

ಲಂಡನ್‌ನಲ್ಲೂ ಭಾರತೀಯ ಹೈಕಮಿಷನ್‌ ಕಚೇರಿ ಮೇಲೆ ಹಾರಾಡುತ್ತಿದ್ದ ತ್ರಿವರ್ಣ ಧ್ವಜವನ್ನು ಖಲಿಸ್ತಾನಿ ಪ್ರತ್ಯೇಕತಾವಾದಿ ಪ್ರತಿಭಟನಾಕಾರರ ಗುಂಪೊಂದು ಕೆಳಗಿಳಿಸಿ, ಪ್ರತ್ಯೇಕತಾವಾದಿಗಳ ಧ್ವಜವನ್ನು ಹಾರಾಟ ನಡೆಸಿ, ಘೋಷಣೆಗಳನ್ನು ಕೂಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು ಇಂಗ್ಲೆಂಡ್ ರಾಯಭಾರಿಯಿಂದ ವಿವರಣೆ ಕೇಳಿದ್ದಲ್ಲದೆ, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತ್ತು.

ಇದನ್ನೂ ಓದಿ: Attack on Indian Consulate: ಸ್ಯಾನ್‌ ಫ್ರಾನ್ಸಿಸ್ಕೋದ ಇಂಡಿಯನ್ ಕಾನ್ಸುಲೇಟ್ ಕಚೇರಿ ಮೇಲೆ ಖಲಿಸ್ತಾನಿಯರಿಂದ ದಾಳಿ

Exit mobile version