ನವ ದೆಹಲಿ: ಭಾರತವು ತೀವ್ರ ಬಿಕ್ಕಟ್ಟು ಮತ್ತು ನಾಗರಿಕರ ದಂಗೆ ಎದುರಿಸುತ್ತಿರುವ ಶ್ರೀಲಂಕಾಗೆ ಸೇನೆಯನ್ನು ರವಾನಿಸಿದೆ ಎಂಬ ಮಾಧ್ಯಮ ವರದಿಗಳನ್ನು ಭಾರತೀಯ ರಾಯಭಾರ ಕಚೇರಿ ನಿರಾಕರಿಸಿದೆ.
ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷ ಅವರ ಅಧಿಕೃತ ನಿವಾಸಕ್ಕೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಭಾರತವು ಸೇನೆಯನ್ನು ರವಾನಿಸುತ್ತಿದೆ ಎಂಬ ವರದಿಗಳನ್ನು ಭಾರತೀಯ ರಾಯಭಾರ ಕಚೇರಿ ಸಾರಾಸಗಟಾಗಿ ನಿರಾಕರಿಸಿದೆ.
ಭಾರತವು ಶ್ರೀಲಂಕಾದ ಜನತೆಯ ಜತೆಗೆ ಇರಲಿದೆಯೇ ಹೊರತು ಅಲ್ಲಿಗೆ ಸೇನೆಯನ್ನು ರವಾನಿಸಲಿದೆ ಎಂಬುದು ಕೇವಲ ವದಂತಿಯಷ್ಟೇ. ಸರ್ಕಾರದ ಎದುರು ಅಂಥ ಪ್ರಸ್ತಾಪವಿಲ್ಲ ಎಂದು ರಾಯಭಾರ ಕಚೇರಿಯ ವಕ್ತಾರರು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದ ರಾಷ್ಟ್ರಾಧ್ಯಕ್ಷನ ಬೆಡ್ ಮೇಲೆ WWE ಫೈಟ್