Site icon Vistara News

ಹುಡುಗರ ತಮಾಷೆ ಸಹಿಸಲಾಗದೆ ಮೂವರನ್ನು ಕೊಂದ; ಭಾರತೀಯನಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

Anurag Chandra Car Accident

ತಮಾಷೆ ಮಾಡಿದರು ಎಂಬ ಕಾರಣಕ್ಕೆ ಸಿಟ್ಟಾಗಿ ಮೂವರು ಬಾಲಕರನ್ನು ಕೊಂದು (killed Three Boys), ಮತ್ತೆ ಮೂವರು ಹುಡುಗರನ್ನು ಗಾಯಗೊಳಿಸಿದ್ದ ಭಾರತೀಯ ಮೂಲದ (Indian origin man) ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ (life sentenced). ಕ್ಯಾಲಿಫೋರ್ನಿಯಾದ ನಿವಾಸಿಯಾಗಿರುವ ಅನುರಾಗ್ ಚಂದ್ರ ಶಿಕ್ಷೆಗೆ ಗುರಿಯಾದವರು. ಒಂದಷ್ಟು ಹುಡುಗರು ಅನುರಾಗ್ ಚಂದ್ರ ಮನೆಯ ಬಾಗಿಲಿನ ಬೆಲ್​ ಮಾಡಿ (Dore Bell Prank), ಓಡಿ ಹೋಗುತ್ತಿದ್ದರು. ಯಾರೋ ಬಂದರು ಎಂದು ಅನುರಾಗ್ ಚಂದ್ರ ಬಂದು ಬಾಗಿಲು ತೆರೆದರೆ ಅಲ್ಯಾರೂ ಇರುತ್ತಿರಲಿಲ್ಲ. ಇದು ಹುಡುಗರ ಕೆಲಸ ಎಂದು ಗೊತ್ತಾಗಿ ಅನುರಾಗ್ ಕೋಪಗೊಂಡಿದ್ದರು.

2020ರಲ್ಲಿ ನಡೆದ ಘಟನೆ ಇದು. ಸುಮ್ಮನೆ ಬಂದು ಬಾಗಿಲಿನ ಬೆಲ್ ಮಾಡುತ್ತಾರೆ ಎಂಬ ಕಾರಣಕ್ಕೆ ಕ್ರೋಧಗೊಂಡಿದ್ದ ಅನುರಾಗ್​ 2019ರ ಜನವರಿಯಲ್ಲಿ, ಕ್ಯಾಲಿಫೋರ್ನಿಯಾದ ಟೆಮೆಸ್ಕಲ್ ಕಾನ್ಯೋನ್​ ರಸ್ತೆಯಲ್ಲಿ ಇದೇ ಹುಡುಗರು ಪ್ರಯಾಣಿಸುತ್ತಿದ್ದ ಟೊಯೊಟಾ ಪ್ರಿಯಸ್ ಕಾರಿಗೆ ತಮ್ಮ ಕಾರಿನ ಮೂಲಕ ಡಿಕ್ಕಿ ಹೊಡೆದಿದ್ದರು. ಬಾಲಕರು ಇದ್ದ ಕಾರಿಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿ ಮೂವರು ಗಾಯಗೊಂಡು, ಮೂವರು ಮೃತಪಟ್ಟಿದ್ದರು. ಅಂದು ಕಾರಿಗೆ ಡಿಕ್ಕಿ ಹೊಡೆಸಿ ಬಂದ ಅನುರಾಗ್ ಚಂದ್ರ ಅದನ್ನು ಯಾರಿಗೂ ಹೇಳಿರಲಿಲ್ಲ.

ಇದನ್ನೂ ಓದಿ: ಸದಾ ಕಿರುಕುಳ, ಊಟವೂ ಇಲ್ಲ; ಪತಿ ಕೊಡುವ ಹಿಂಸೆಯಿಂದ ನೊಂದು ಟೆಕ್ಕಿ ಆತ್ಮಹತ್ಯೆ

ತನಿಖೆ ಬಳಿಕ ಅನುರಾಗ್ ಚಂದ್ರ ಅಪರಾಧ ಸಾಬೀತಾಯಿತು. ಮೂರು ಕೊಲೆ ಕೇಸ್​ಗಳು, ಮೂರು ಕೊಲೆ ಯತ್ನ ಪ್ರಕರಣಗಳು ಅವನ ವಿರುದ್ಧ ದಾಖಲಾಗಿದ್ದವು. ಇನ್ನೂ ಹುಡುಗಾಟದ ಬುದ್ಧಿಯ ಹುಡುಗರು ಕಾರಿನಲ್ಲಿ ಸಂಚರಿಸುತ್ತ, ಎಲ್ಲೋ ಕಾರನ್ನು ನಿಲ್ಲಿಸಿ ಒಬ್ಬರ ಮನೆಯ ಬಾಗಿಲಿನ ಬೆಲ್​ ಮಾಡುವುದು, ಅಲ್ಲಿಂದ ಓಡಿ ಹೋಗುವುದು ಮಾಡುತ್ತಿದ್ದರು. ಬರೀ ಅನುರಾಗ್​ ಮನೆಯ ಬಾಗಿಲ ಬೆಲ್​ ಅಷ್ಟೇ ಅಲ್ಲ, ಇನ್ನೂ ಹಲವು ಮನೆಗಳಿಗೂ ಇದೇ ರೀತಿ ತಮಾಷೆ ಮಾಡಿದ್ದರು. ಇನ್ನು ಅನುರಾಗ್ ಚಂದ್ರ 2020ರ ಜನವರಿ 20ರಿಂದಲೂ ರಾಬರ್ಟ್ ಪ್ರೀಸ್ಲಿ ಬಂಧನ ಕೇಂದ್ರದಲ್ಲೇ ಇದ್ದ. ಆತನಿಗೆ ಪೆರೋಲ್ ಕೂಡ ನೀಡಬಾರದು, ಜೀವ ಇರುವವರೆಗೂ ಜೈಲಲ್ಲೇ ಇರಬೇಕು ಎಂದು ಕೋರ್ಟ್ ಆದೇಶ ನೀಡಿದೆ.

Exit mobile version