Site icon Vistara News

Indian Sailors Released: ಭಾರತಕ್ಕೆ ಭಾರೀ ರಾಜತಾಂತ್ರಿಕ ಗೆಲುವು; ಐವರು ಭಾರತೀಯ ನಾವಿಕರು ರಿಲೀಸ್‌

Indian Sailors Released

ಟೆಹ್ರಾನ್‌: ವಶಕ್ಕೆ ಪಡೆದಿದ್ದ ಇಸ್ರೇಲ್‌(Israel) ಮೂಲದ ಹಡಗಿನಲ್ಲಿದ್ದ ಐವರು ಭಾರತೀಯರನ್ನು(Indian Sailors Released) ಇರಾನ್‌(Iran) ಕೊನೆಗೂ ಬಿಡುಗಡೆಗೊಳಿಸಿದೆ. ಇರಾನ್‌ ಜೊತೆಗಿನ ಭಾರತದ ಮಾತುಕತೆ ಯಶಸ್ವಿಯಾಗಿದ್ದು, ವಶಕ್ಕೆ ಪಡೆದಿರುವ ಐವರನ್ನು ರಿಲೀಸ್‌ ಮಾಡಲು ಇರಾನ್‌ ಒಪ್ಪಿದ್ದು, ಅವರನ್ನು ಈಗಾಗಲೇ ತಾಯ್ನಾಡಿಗೆ ಕಳುಹಿಸಲಾಗಿದೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರಿ(Indian Embassy) ಕಚೇರಿ ಹೇಳಿದೆ. ಇದು ಭಾರತದ ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.

ಈ ರಾಜತಾಂತ್ರಿಕ ಗೆಲುವಿಗೆ ಬಂದರ್ ಅಬ್ಬಾಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿ, ಇರಾನ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದೆ. ಇಸ್ರೇಲ್-ಸಂಬಂಧಿತ ಸರಕು ಹಡಗನ್ನು ಏ.13 ರಂದು ಇರಾನ್ ವಶಪಡಿಸಿಕೊಂಡಿತು. ಅದರಲ್ಲಿ 17 ಭಾರತೀಯರು ಇದ್ದರು. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಬಳಿ ಕಂಟೈನರ್ ಹಡಗನ್ನು ವಶಪಡಿಸಿಕೊಂಡಿತ್ತು. ಏ.13 ರಂದು ಇರಾನ್ ವಶಪಡಿಸಿಕೊಂಡಿದ್ದ ಇಸ್ರೇಲ್ ಸಂಪರ್ಕಿತ ಸರಕು ಹಡಗು ‘ಎಂಎಸ್‌ಸಿ ಏರೀಸ್’ನ 17 ಭಾರತೀಯ ಸಿಬ್ಬಂದಿಯಲ್ಲಿ ಒಬ್ಬರಾದ ಕೇರಳದ ತ್ರಿಶೂರ್‌ನ ಆನ್ ಟೆಸ್ಸಾ ಜೋಸೆಫ್ ಏ.18 ರಂದು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದರು. 17 ಭಾರತೀಯ ಸಿಬ್ಬಂದಿಯಲ್ಲಿ ಒಬ್ಬರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇತರರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ಒಪ್ಪಂದದ ಜವಾಬ್ದಾರಿಗಳನ್ನು ಪೂರೈಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

ಬಿಡುಗಡೆಗೊಂಡವರಲ್ಲಿ ಐವರು ಭಾರತೀಯರು, ಓರ್ವ ಫಿಲಿಪ್ಪೀನ್ಸ್ ಹಾಗೂ ಓರ್ವ ಎಸ್ಟೋನಿಯಾ ಪ್ರಜೆಗಳು ಸೇರಿದ್ದಾರೆ. ಪೋರ್ಚುಗೀಸ್ ಧ್ವಜ ಹೊಂದಿರುವ ಎಂಎಸ್‍ಸಿ ಏರೀಸ್ ಹಡಗನ್ನು ಎಪ್ರಿಲ್ 13ರಂದು ಇರಾನ್‍ನ ರೆವೊಲ್ಯುಷನರಿ ಗಾಡ್ರ್ಸ್ ವಶಕ್ಕೆ ಪಡೆದಿತ್ತು. ಕಂಟೈನರ್ ಹಡಗು ಇಸ್ರೇಲ್ ಜತೆ ಸಂಪರ್ಕ ಹೊಂದಿತ್ತು ಎಂದು ಇರಾನ್ ವಿದೇಶಾಂಗ ಇಲಾಖೆ ಹೇಳಿತ್ತು. ಇರಾನ್‍ನ ಕ್ರಮವನ್ನು ಸ್ವಾಗತಿಸಿರುವ ಪೋರ್ಚುಗಲ್, ಉಳಿದ 17 ಸಿಬ್ಬಂದಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ. ಹಡಗಿನ ಎಲ್ಲಾ ಸಿಬ್ಬಂದಿಗಳನ್ನೂ ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಆದರೆ ಜಫ್ತಿ ಮಾಡಿರುವ ಹಡಗನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಕಳೆದ ವಾರ ಹೇಳಿದ್ದರು.

ಇದನ್ನೂ ಓದಿ:Actor Ravichandran: ಕನಸುಗಾರನ ʻಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫಿಕ್ಸ್‌!

ಇರಾನ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಭಾರತ ವಿದೇಶಾಂಗ ಇಲಾಖೆ ಭಾರತೀಯರ ಸುರಕ್ಷಿತ ಬಿಡುಗಡೆ ಒತ್ತಾಯಿಸಿತ್ತು. ಖುದ್ದು ಕೇಂದ್ರ ಸಚಿವ ಜೈಶಂಕರ್​ ಸಹ ಇರಾನ್ ಜತೆ ಮಾತುಕತೆ ನಡೆಸಿ ಭಾರತೀಯರನ್ನು ಬಿಟ್ಟು ಕಳುಹಿಸುವಂತೆ ಮನವಿ ಮಾಡಿದ್ದು, ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿತ್ತು.


Promoted

Exit mobile version