ವಿದ್ಯಾಭ್ಯಾಸಕ್ಕೆಂದು ಲಂಡನ್ಗೆ ಹೋದ ಭಾರತೀಯ ಮೂಲದ ಯುವಕ ಅಲ್ಲಿ ಅನಾಚಾರ ಮಾಡಿ 6 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಪ್ರೀತ್ ವಿಕಲ್ ಎಂಬ 20 ವರ್ಷದ ವಿದ್ಯಾರ್ಥಿ (Indian Student) ಲಂಡನ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿ, ಈಗ ಜೈಲು ಪಾಲಾಗಿದ್ದಾನೆ. ಈತ ಕಳೆದ ವರ್ಷ ಯುವತಿ ಮೇಲೆ ರೇಪ್ ಮಾಡಿದ್ದ. ಆ ಕೇಸ್ನ ತೀರ್ಪನ್ನು ಅಲ್ಲಿನ ಕೋರ್ಟ್ ಈಗ ನೀಡಿದೆ. ಅದರ ಅನ್ವಯ ಆರೋಪಿ ವಿದ್ಯಾರ್ಥಿ ಪ್ರೀತ್ ವಿಕಲ್ ಇನ್ನು ಆರುವರ್ಷ, 9 ತಿಂಗಳ ಕಾಲ ಲಂಡನ್ ಜೈಲಲ್ಲಿ ಇರಬೇಕಾಗಿದೆ.
ಕಳೆದ ವರ್ಷ ಜೂನ್ನಲ್ಲಿ ಯುಕೆಯ ವೆಲ್ಶ್ ಕ್ಯಾಪಿಟಲ್ನಲ್ಲಿರುವ ಕಾರ್ಡಿಫ್ ಕ್ಲಬ್ ಹೊರಗೆ ಯುವತಿಯೊಬ್ಬಳು ಮದ್ಯದ ಅಮಲಲ್ಲಿ ತೂರಾಡುತ್ತಿದ್ದಳು. ಆಕೆಗೆ ಮೈಮೇಲೆ ಸರಿಯಾಗಿ ಎಚ್ಚರವೂ ಇರಲಿಲ್ಲ. ತಾನೇನು ಮಾಡುತ್ತಿದ್ದೇನೆ? ಎಲ್ಲಿದ್ದೇನೆ ಎಂಬುದು ಅರ್ಥವಾಗದ ಸ್ಥಿತಿ ತಲುಪಿದ್ದಳು. ಆಕೆಯನ್ನು ನೋಡಿದ ಪ್ರೀತ್ ವಿಕಲ್ ಅವಳನ್ನು ಹೊತ್ತುಕೊಂಡು ತನ್ನ ರೂಮಿಗೆ ಹೋಗಿದ್ದ. ಆಕೆಯನ್ನು ಬೆಡ್ ಮೇಲೆ ಮಲಗಿಸಿ, ಕೆಲವು ಫೋಟೋಗಳನ್ನು ತೆಗೆದುಕೊಂಡಿದ್ದ. ಅಷ್ಟೇ ಅಲ್ಲ, ತಾನು ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಕ್ಷಣಗಳ ಫೋಟೋ/ವಿಡಿಯೊವನ್ನೂ ಸೆರೆಹಿಡಿದಿದ್ದ.
ಮುಂಜಾನೆ 4ಗಂಟೆ ಹೊತ್ತಿಗೆ ಆ ಯುವತಿಯನ್ನು ಕ್ಲಬ್ ಮುಂಭಾಗದಿಂದ ಪ್ರೀತ್ ಎತ್ತುಕೊಂಡ ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಆತ ಮೊದಲು ಅವಳನ್ನು ತೋಳಲ್ಲಿ ಎತ್ತಿಕೊಂಡಿದ್ದ. ಆಮೇಲೆ ಭುಜದ ಮೇಲೆ ಹಾಕಿಕೊಂಡ. ಸ್ವಲ್ಪ ದೂರ ಹೋದ ಮೇಲೆ ನೆಲದ ಮೇಲೆ ಮಲಗಿಸಿ, ಆಕೆಯ ಕಾಲುಭಾಗದಲ್ಲಿ ಒಂದು ಕೈ, ಬೆನ್ನು ಭಾಗದಲ್ಲಿ ಮತ್ತೊಂದು ಕೈ ಹಾಕಿ ಎತ್ತುಕೊಂಡಿದ್ದ. ಇನ್ನೂ ಸ್ವಲ್ಪ ದೂರ ಹೋದ ಮೇಲೆ ಅವಳನ್ನು ತನ್ನ ಭುಜಕ್ಕೆ ಒರಗಿಸಿಕೊಂಡು ನಡೆಯಲು ಪ್ರಾರಂಭಿಸಿದ್ದ. ಇವೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿಚಾರಣೆ ವೇಳೆ ಕೋರ್ಟ್ನಲ್ಲಿ ಈ ವಿಡಿಯೊ ಪ್ರದರ್ಶಿಸಲಾಗಿದೆ.
ಇದನ್ನೂ ಓದಿ: ಲಂಡನ್‌ನಲ್ಲಿ ಭಾರತದ ವಿದ್ಯಾರ್ಥಿನಿಯ ಬರ್ಬರ ಕೊಲೆ; ಕೆಲವೇ ತಿಂಗಳಲ್ಲಿ ಆಕೆಯ ಮದುವೆ ಇತ್ತು
ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದ ಯುವಕ ರೇಪ್ ಮಾಡಿದ್ದಾನೆ. ಆಕೆಗೆ ಎಚ್ಚರವಾಗುವಷ್ಟರಲ್ಲಿ ಅಮಲು ಇಳಿದಿತ್ತು. ಆದರೆ ರಕ್ತಸ್ರಾವ ಆಗುತ್ತಿತ್ತು. ಅಲ್ಲಿಂದ ಹೇಗೋ ಎದ್ದು ಹೋಗಿದ್ದಳು. ಬಳಿಕ ಮನೆಗೆ ಹೋಗಿ ಇನ್ಸ್ಟಾಗ್ರಾಂನಲ್ಲಿ ಪ್ರೀತ್ನ ಅಕೌಂಟ್ ಹುಡುಕಿ ಅವನಿಗೆ ಮೆಸೇಜ್ ಕಳಿಸಿದ್ದಳು. ‘ನೀನು ನನ್ನೊಂದಿಗೆ ಸೆಕ್ಸ್ ಮಾಡಿದ್ದೀಯಾ? ಹಾಗೊಮ್ಮೆ ಲೈಂಗಿಕ ಸಂಪರ್ಕ ಹೊಂದಿದ್ದೇ ಆದರೆ ನಿರೋಧ್ ಬಳಸಿದ್ದೆಯಾ‘? ಎಂದು ಪ್ರಶ್ನಿಸಿದ್ದಳು. ಆಕೆಯ ಪ್ರಶ್ನೆಗೆ ಪ್ರೀತ್ ಹೌದು ಎಂದು ಉತ್ತರ ಕೊಟ್ಟಿದ್ದ. ಆದರೆ ವಾಸ್ತವದಲ್ಲಿ ಅವನು ಯಾವುದೇ ರೀತಿ ನಿರೋಧ್ ಬಳಕೆ ಮಾಡಿರಲಿಲ್ಲ ಎಂದು ಆಕೆಯ ಪ್ರಾಸಿಕ್ಯೂಟರ್ ಮ್ಯಾಥ್ಯೂ ಕೋಬ್ ತಿಳಿಸಿದ್ದಾರೆ. ಸೆಕ್ಸ್ ಮಾಡಿದ್ದು ಹೌದು ಎಂದು ಉತ್ತರ ಸಿಗುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ಕೊಟ್ಟಿದ್ದಳು. ವಿಚಾರಣೆ ನಡೆದು ಈಗ ಅಂತಿಮ ತೀರ್ಪು ಹೊರಬಿದ್ದಿದೆ.
ಇನ್ನಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ