ನಶೆಯಲ್ಲಿದ್ದ ಯುವತಿಯ ಮನೆಗೆ ಕರೆದುಕೊಂಡು ಹೋಗಿ ರೇಪ್​; ಲಂಡನ್​​ನಲ್ಲಿ ಭಾರತೀಯ ವಿದ್ಯಾರ್ಥಿ ಜೈಲುಪಾಲು - Vistara News

ವಿದೇಶ

ನಶೆಯಲ್ಲಿದ್ದ ಯುವತಿಯ ಮನೆಗೆ ಕರೆದುಕೊಂಡು ಹೋಗಿ ರೇಪ್​; ಲಂಡನ್​​ನಲ್ಲಿ ಭಾರತೀಯ ವಿದ್ಯಾರ್ಥಿ ಜೈಲುಪಾಲು

ಮುಂಜಾನೆ 4ಗಂಟೆ ಹೊತ್ತಿಗೆ ಆ ಯುವತಿಯನ್ನು ಕ್ಲಬ್​ ಮುಂಭಾಗದಿಂದ ಪ್ರೀತ್​ ಎತ್ತುಕೊಂಡ ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ನಿರೋಧ್ ಬಳಸಿದ್ದೆಯಾ ಎಂದು ಆಕೆ ಕೇಳಿದ್ದಕ್ಕೆ ಹೌದೆಂದು ಸುಳ್ಳು ಉತ್ತರ ಕೊಟ್ಟಿದ್ದ.

VISTARANEWS.COM


on

Indian student
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿದ್ಯಾಭ್ಯಾಸಕ್ಕೆಂದು ಲಂಡನ್​ಗೆ ಹೋದ ಭಾರತೀಯ ಮೂಲದ ಯುವಕ ಅಲ್ಲಿ ಅನಾಚಾರ ಮಾಡಿ 6 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಪ್ರೀತ್​ ವಿಕಲ್ ಎಂಬ 20 ವರ್ಷದ ವಿದ್ಯಾರ್ಥಿ (Indian Student) ಲಂಡನ್​​ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿ, ಈಗ ಜೈಲು ಪಾಲಾಗಿದ್ದಾನೆ. ಈತ ಕಳೆದ ವರ್ಷ ಯುವತಿ ಮೇಲೆ ರೇಪ್ ಮಾಡಿದ್ದ. ಆ ಕೇಸ್​​ನ ತೀರ್ಪನ್ನು ಅಲ್ಲಿನ ಕೋರ್ಟ್​ ಈಗ ನೀಡಿದೆ. ಅದರ ಅನ್ವಯ ಆರೋಪಿ ವಿದ್ಯಾರ್ಥಿ ಪ್ರೀತ್​ ವಿಕಲ್​ ಇನ್ನು ಆರುವರ್ಷ, 9 ತಿಂಗಳ ಕಾಲ ಲಂಡನ್​ ಜೈಲಲ್ಲಿ ಇರಬೇಕಾಗಿದೆ.

ಕಳೆದ ವರ್ಷ ಜೂನ್​​ನಲ್ಲಿ ಯುಕೆಯ ವೆಲ್ಶ್​ ಕ್ಯಾಪಿಟಲ್​​ನಲ್ಲಿರುವ ಕಾರ್ಡಿಫ್​ ಕ್ಲಬ್​ ಹೊರಗೆ ಯುವತಿಯೊಬ್ಬಳು ಮದ್ಯದ ಅಮಲಲ್ಲಿ ತೂರಾಡುತ್ತಿದ್ದಳು. ಆಕೆಗೆ ಮೈಮೇಲೆ ಸರಿಯಾಗಿ ಎಚ್ಚರವೂ ಇರಲಿಲ್ಲ. ತಾನೇನು ಮಾಡುತ್ತಿದ್ದೇನೆ? ಎಲ್ಲಿದ್ದೇನೆ ಎಂಬುದು ಅರ್ಥವಾಗದ ಸ್ಥಿತಿ ತಲುಪಿದ್ದಳು. ಆಕೆಯನ್ನು ನೋಡಿದ ಪ್ರೀತ್​ ವಿಕಲ್ ಅವಳನ್ನು ಹೊತ್ತುಕೊಂಡು ತನ್ನ ರೂಮಿಗೆ ಹೋಗಿದ್ದ. ಆಕೆಯನ್ನು ಬೆಡ್ ಮೇಲೆ ಮಲಗಿಸಿ, ಕೆಲವು ಫೋಟೋಗಳನ್ನು ತೆಗೆದುಕೊಂಡಿದ್ದ. ಅಷ್ಟೇ ಅಲ್ಲ, ತಾನು ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಕ್ಷಣಗಳ ಫೋಟೋ/ವಿಡಿಯೊವನ್ನೂ ಸೆರೆಹಿಡಿದಿದ್ದ.

ಮುಂಜಾನೆ 4ಗಂಟೆ ಹೊತ್ತಿಗೆ ಆ ಯುವತಿಯನ್ನು ಕ್ಲಬ್​ ಮುಂಭಾಗದಿಂದ ಪ್ರೀತ್​ ಎತ್ತುಕೊಂಡ ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಆತ ಮೊದಲು ಅವಳನ್ನು ತೋಳಲ್ಲಿ ಎತ್ತಿಕೊಂಡಿದ್ದ. ಆಮೇಲೆ ಭುಜದ ಮೇಲೆ ಹಾಕಿಕೊಂಡ. ಸ್ವಲ್ಪ ದೂರ ಹೋದ ಮೇಲೆ ನೆಲದ ಮೇಲೆ ಮಲಗಿಸಿ, ಆಕೆಯ ಕಾಲುಭಾಗದಲ್ಲಿ ಒಂದು ಕೈ, ಬೆನ್ನು ಭಾಗದಲ್ಲಿ ಮತ್ತೊಂದು ಕೈ ಹಾಕಿ ಎತ್ತುಕೊಂಡಿದ್ದ. ಇನ್ನೂ ಸ್ವಲ್ಪ ದೂರ ಹೋದ ಮೇಲೆ ಅವಳನ್ನು ತನ್ನ ಭುಜಕ್ಕೆ ಒರಗಿಸಿಕೊಂಡು ನಡೆಯಲು ಪ್ರಾರಂಭಿಸಿದ್ದ. ಇವೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿಚಾರಣೆ ವೇಳೆ ಕೋರ್ಟ್​ನಲ್ಲಿ ಈ ವಿಡಿಯೊ ಪ್ರದರ್ಶಿಸಲಾಗಿದೆ.

ಇದನ್ನೂ ಓದಿ: ಲಂಡನ್‌ನಲ್ಲಿ ಭಾರತದ ವಿದ್ಯಾರ್ಥಿನಿಯ ಬರ್ಬರ ಕೊಲೆ; ಕೆಲವೇ ತಿಂಗಳಲ್ಲಿ ಆಕೆಯ ಮದುವೆ ಇತ್ತು

ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದ ಯುವಕ ರೇಪ್ ಮಾಡಿದ್ದಾನೆ. ಆಕೆಗೆ ಎಚ್ಚರವಾಗುವಷ್ಟರಲ್ಲಿ ಅಮಲು ಇಳಿದಿತ್ತು. ಆದರೆ ರಕ್ತಸ್ರಾವ ಆಗುತ್ತಿತ್ತು. ಅಲ್ಲಿಂದ ಹೇಗೋ ಎದ್ದು ಹೋಗಿದ್ದಳು. ಬಳಿಕ ಮನೆಗೆ ಹೋಗಿ ಇನ್​ಸ್ಟಾಗ್ರಾಂನಲ್ಲಿ ಪ್ರೀತ್​ನ ಅಕೌಂಟ್ ಹುಡುಕಿ ಅವನಿಗೆ ಮೆಸೇಜ್​ ಕಳಿಸಿದ್ದಳು. ‘ನೀನು ನನ್ನೊಂದಿಗೆ ಸೆಕ್ಸ್ ಮಾಡಿದ್ದೀಯಾ? ಹಾಗೊಮ್ಮೆ ಲೈಂಗಿಕ ಸಂಪರ್ಕ ಹೊಂದಿದ್ದೇ ಆದರೆ ನಿರೋಧ್ ಬಳಸಿದ್ದೆಯಾ‘? ಎಂದು ಪ್ರಶ್ನಿಸಿದ್ದಳು. ಆಕೆಯ ಪ್ರಶ್ನೆಗೆ ಪ್ರೀತ್​ ಹೌದು ಎಂದು ಉತ್ತರ ಕೊಟ್ಟಿದ್ದ. ಆದರೆ ವಾಸ್ತವದಲ್ಲಿ ಅವನು ಯಾವುದೇ ರೀತಿ ನಿರೋಧ್ ಬಳಕೆ ಮಾಡಿರಲಿಲ್ಲ ಎಂದು ಆಕೆಯ ಪ್ರಾಸಿಕ್ಯೂಟರ್​ ಮ್ಯಾಥ್ಯೂ ಕೋಬ್ ತಿಳಿಸಿದ್ದಾರೆ. ಸೆಕ್ಸ್ ಮಾಡಿದ್ದು ಹೌದು ಎಂದು ಉತ್ತರ ಸಿಗುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ಕೊಟ್ಟಿದ್ದಳು. ವಿಚಾರಣೆ ನಡೆದು ಈಗ ಅಂತಿಮ ತೀರ್ಪು ಹೊರಬಿದ್ದಿದೆ.

ಇನ್ನಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

Ebrahim Raisi: ಅಜರ್‌ಬೈಜಾನ್‌ನಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ ಎಂಬುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇರಾನ್‌ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ರಾಯಿಟರ್ಸ್‌ ಪ್ರಕಾರ, ಹೆಲಿಕಾಪ್ಟರ್‌ ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂಬುದಾಗಿ ವರದಿ ಪ್ರಕಟಿಸಿದೆ.

VISTARANEWS.COM


on

Ebrahim Raisi
Koo

ಬಾಕು: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ (Helicopter) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದೆ ಎಂಬುದಾಗಿ ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತನವಾಗಿದೆ ಎಂಬುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದರೆ, ಇನ್ನೂ ಕೆಲವು ಮಾಧ್ಯಮಗಳು ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ ಎಂದು ವರದಿ ಮಾಡಿವೆ. ಹಾಗಾಗಿ, ಹೆಲಿಕಾಪ್ಟರ್‌ ಪತನವಾಗಿದೆಯೋ, ತುರ್ತು ಲ್ಯಾಂಡ್‌ ಆಗಿದೆಯೋ ಎಂಬ ಮಾಹಿತಿ ನಿಖರವಾಗಿ ಲಭ್ಯವಾಗಿಲ್ಲ. ಆದಾಗ್ಯೂ, ಭದ್ರತಾ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಜರ್‌ಬೈಜಾನ್‌ನಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ ಎಂಬುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇರಾನ್‌ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ರಾಯಿಟರ್ಸ್‌ ಪ್ರಕಾರ, ಹೆಲಿಕಾಪ್ಟರ್‌ ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂಬುದಾಗಿ ವರದಿ ಪ್ರಕಟಿಸಿದೆ. ಆದಾಗ್ಯೂ, ಇರಾನ್‌ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇರಾನ್‌ ಬೆಂಗಾವಲು ಪಡೆ ಇದ್ದ ಹೆಲಿಕಾಪ್ಟರ್‌ ಪತನಗೊಂಡಿದೆ. ಅದರಲ್ಲಿ, ಇಬ್ರಾಹಿಂ ರೈಸಿ ಅವರು ಇದ್ದರೋ, ಇಲ್ಲವೋ ಎಂಬುದರ ಮಾಹಿತಿ ನಿಖರವಾಗಿಲ್ಲ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳುತ್ತಿದೆ ಎಂಬುದಾಗಿ ಸಚಿವರೊಬ್ಬರು ತಿಳಿಸಿದ್ದಾರೆ ಎಂಬುದಾಗಿ ಬಿಬಿಸಿ ವರದಿ ತಿಳಿಸಿದೆ. ಅಜರ್‌ಬೈಜಾನ್‌ ಸಮೀಪದ ಜೋಲ್ಫಾ ಎಂಬ ಪ್ರದೇಶದಲ್ಲಿ ಪತನಗೊಂಡಿರುವುದಾಗಿ ವರದಿಗಳು ಮಾಹಿತಿ ನೀಡಿವೆ. ಪತನಗೊಂಡಿರುವ ಹೆಲಿಕಾಪ್ಟರ್‌ ಪತ್ತೆಹಚ್ಚಲು ಸಿಬ್ಬಂದಿಯು ಹರಸಾಹಸ ಪಡುತ್ತಿದೆ ಎಂದು ಕೂಡ ತಿಳಿದುಬಂದಿದೆ.

ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಅವರು ಅಜರ್‌ಬೈಜಾನ್‌ಗೆ ತೆರಳಿದ್ದರು. ಇದೇ ವೇಳೆ ಹೆಲಿಕಾಪ್ಟರ್‌ ಪತನಗೊಂಡಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತನದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನಲಾಗಿದೆ. ಮತ್ತೊಂದೆಡೆ, ತುರ್ತು ಭೂಸ್ಪರ್ಶ ಮಾಡಿದ ಕಾರಣದಿಂದಾಗಿ ಯಾರಿಗೂ ಅಪಾಯವಾಗಿಲ್ಲ ಎಂದು ಮತ್ತೊಂದಿಷ್ಟು ಮೂಲಗಳು ತಿಳಿಸಿವೆ.

ಇದನ್ನೂ ಓದಿ: US sanction: ಇರಾನ್‌ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತಕ್ಕೆ ನಿರ್ಬಂಧದ ಎಚ್ಚರಿಕೆ ಕೊಟ್ಟ ಅಮೆರಿಕ

Continue Reading

ಪ್ರವಾಸ

Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಭಾರತೀಯರು ರಷ್ಯಾಕ್ಕೆ ವೀಸಾ ಇಲ್ಲದೇ (Russia Tourism) ತೆರಳಬಹುದು. ಈ ಕುರಿತು ಮಾತುಕತೆ ಜೂನ್‌ನಲ್ಲಿ ಪ್ರಾರಂಭವಾಗಲಿದೆ. ರಷ್ಯಾ ಮತ್ತು ಭಾರತವು ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯದ ಮೂಲಕ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

VISTARANEWS.COM


on

By

Russia Tourism
Koo

ವಿಶ್ವವನ್ನು ಸುತ್ತಬೇಕು (world tour) ಎನ್ನುವ ಆಸೆ ಉಳ್ಳ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು (indians) ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ (Russia Tourism) ಮಾಡಬಹುದು. ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚಿಸಲು ಎರಡೂ ದೇಶಗಳು ಪ್ರಯಾಣದ ಪರಿಸ್ಥಿತಿಗಳನ್ನು ಸರಾಗಗೊಳಿಸಲು ಯೋಜನೆ ರೂಪಿಸುತ್ತಿವೆ.

ರಷ್ಯಾ ಮತ್ತು ಭಾರತ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಮಾನದಂಡಗಳನ್ನು ಅಂತಿಮಗೊಳಿಸಲು ಸಮಾಲೋಚನೆಗಳನ್ನು ಜೂನ್‌ ನಿಂದ ಪ್ರಾರಂಭಿಸಲಿದೆ. ವೀಸಾ ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸಿದ ಅನಂತರ ಭಾರತೀಯರು ರಷ್ಯಾಕ್ಕೆ ಸುಲಭವಾಗಿ ಪ್ರಯಾಣಿಸಬಹುದು.

ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ಬಹುಪಕ್ಷೀಯ ಆರ್ಥಿಕ ಸಹಕಾರ ಮತ್ತು ವಿಶೇಷ ಯೋಜನೆಗಳ ವಿಭಾಗದ ನಿರ್ದೇಶಕಿ ನಿಕಿತಾ ಕೊಂಡ್ರಾಟ್ಯೆವ್, ಭಾರತವು ಆಂತರಿಕ ರಾಜ್ಯ ಸಮನ್ವಯದ ಅಂತಿಮ ಹಂತದಲ್ಲಿದೆ ಎಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಚಾರಗಳಿವೆ.

ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ

ರಷ್ಯಾ ಮತ್ತು ಭಾರತದ ನಡುವಿನ ಮಾತುಕತೆಗಳು ಇನ್ನೂ ನಡೆಯುತ್ತಿವೆ ಮತ್ತು ಜೂನ್‌ನಲ್ಲಿ ಪ್ರಯಾಣವನ್ನು ಸರಾಗಗೊಳಿಸುವ ದ್ವಿಪಕ್ಷೀಯ ಒಪ್ಪಂದದ ಕುರಿತು ಉಭಯ ರಾಷ್ಟ್ರಗಳು ಸಮಾಲೋಚನೆಗಳನ್ನು ಪ್ರಾರಂಭಿಸುತ್ತವೆ. ಅಂತಿಮಗೊಳಿಸುವಿಕೆಯ ಅನಂತರ ರಷ್ಯಾ ಮತ್ತು ಭಾರತವು ಒಟ್ಟಾಗಿ ವೀಸಾ- ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸುತ್ತದೆ ಎಂದು ರಷ್ಯಾದ ಸಚಿವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.


ಯಾವಾಗ ಸಾಧ್ಯವಾಗುತ್ತದೆ?

ಕಜಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ “ರಷ್ಯಾ- ಇಸ್ಲಾಮಿಕ್ ವರ್ಲ್ಡ್: ಕಜಾನ್‌ಫೋರಮ್ 2024” ಭಾಗದಲ್ಲಿ ಸಚಿವರು ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ: Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

“ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯ ಕೇಂದ್ರಗಳನ್ನು ಪ್ರಾರಂಭಿಸಲು ಸಜ್ಜಾಗುತ್ತಿರುವಂತೆ ರಷ್ಯಾ ಮತ್ತು ಭಾರತವು ತಮ್ಮ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸಲು ಸಜ್ಜಾಗಿದೆ. ಎರಡು ರಾಷ್ಟ್ರಗಳ ನಡುವಿನ ಮೊದಲ ಸುತ್ತಿನ ಸಮಾಲೋಚನೆಯನ್ನು ಜೂನ್‌ನಲ್ಲಿ ನಿಗದಿಪಡಿಸಲಾಗಿದೆ. ಇದು ದ್ವಿಪಕ್ಷೀಯ ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿದೆ.


ಪ್ರಸ್ತುತ ಯಾರಿಗಿದೆ ಅವಕಾಶ?

ರಷ್ಯಾ ಈಗ ಚೀನಾ ಮತ್ತು ಇರಾನ್‌ನ ಜನರಿಗೆ ತನ್ನ ವೀಸಾ ಮುಕ್ತ ಪ್ರವಾಸಿ ವಿನಿಮಯ ಕಾರ್ಯಕ್ರಮದ ಮೂಲಕ ವೀಸಾ ಮುಕ್ತವಾಗಿ ಪ್ರವೇಶಿಸಲು ಅವಕಾಶ ನೀಡುತ್ತದೆ. ಸಚಿವರ ಪ್ರಕಾರ, ಕಾರ್ಯಕ್ರಮದ ಯಶಸ್ಸನ್ನು ಭಾರತದೊಂದಿಗೆ ಪುನರಾವರ್ತಿಸುವ ಗುರಿಯನ್ನು ದೇಶ ಹೊಂದಿದೆ. ರಷ್ಯಾ ಮತ್ತು ಚೀನಾ ನಡುವೆ ಮತ್ತು ರಷ್ಯಾ ಮತ್ತು ಇರಾನ್ ನಡುವೆ ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯವು 2023ರ ಆಗಸ್ಟ್ 1ರಂದು ಪ್ರಾರಂಭವಾಯಿತು.

Continue Reading

ದೇಶ

ಪ್ರಚಾರದ ವೇಳೆ ರಾಹುಲ್‌ ಗಾಂಧಿಯಿಂದ ಚೀನಾ ಸಂವಿಧಾನ ಪ್ರತಿ ಪ್ರದರ್ಶನ; ಹಿಮಂತ ಬಿಸ್ವಾ ಗಂಭೀರ ಆರೋಪ

ರಾಹುಲ್‌ ಗಾಂಧಿ ಅವರು ತಾವು ಭಾಗವಹಿಸುವ ಸಮಾವೇಶ, ಸಭೆಗಳಲ್ಲಿ ಜನರಿಗೆ ಚೀನಾ ಸಂವಿಧಾನದ ಪ್ರತಿ ಪ್ರದರ್ಶಿಸುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಪ್ರತಿಯು ನೀಲಿ ಕವರ್‌ ಹೊಂದಿದೆ. ಚೀನಾ ಸಂವಿಧಾನದ ಮೂಲ ಪ್ರತಿಯು ಕೆಂಪು ಕವರ್‌ ಹೊಂದಿದೆ ಎಂಬುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

VISTARANEWS.COM


on

Constitution
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳ ನಾಯಕರ ಹೇಳಿಕೆಗಳು ಮೊನಚಾಗಿವೆ. ಆರೋಪ, ಪ್ರತ್ಯಾರೋಪ, ವಾಗ್ದಾಳಿ, ವಾಗ್ಬಾಣಗಳ ಜತೆಗೆ ವೈಯಕ್ತಿಕ ನಿಂದನೆ, ಆರೋಪಗಳು ಕೂಡ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ರಾಹುಲ್‌ ಗಾಂಧಿ ಅವರು ಸಭೆ-ಸಮಾವೇಶಗಳಲ್ಲಿ ಜನರಿಗೆ ಚೀನಾ ಸಂವಿಧಾನ ಪ್ರದರ್ಶಿಸುತ್ತಿದ್ದಾರೆ” ಎಂದು ಸಿಎಂ ಆರೋಪಿಸಿದ್ದಾರೆ. ಇದು ಈಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

“ರಾಹುಲ್‌ ಗಾಂಧಿ ಅವರು ತಾವು ಭಾಗವಹಿಸುವ ಸಮಾವೇಶ, ಸಭೆಗಳಲ್ಲಿ ಜನರಿಗೆ ಚೀನಾ ಸಂವಿಧಾನದ ಪ್ರತಿ ಪ್ರದರ್ಶಿಸುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಪ್ರತಿಯು ನೀಲಿ ಕವರ್‌ ಹೊಂದಿದೆ. ಚೀನಾ ಸಂವಿಧಾನದ ಮೂಲ ಪ್ರತಿಯು ಕೆಂಪು ಕವರ್‌ ಹೊಂದಿದೆ. ರಾಹುಲ್‌ ಗಾಂಧಿ ಅವರು ಚೀನಾ ಸಂವಿಧಾನವನ್ನು ಜನರಿಗೆ ಪ್ರದರ್ಶಿಸುತ್ತಿದ್ದಾರೆಯೇ? ಈ ಕುರಿತು ಪರಿಶೀಲನೆ ಆಗಬೇಕು” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಅಸ್ಸಾಂ ಮುಖ್ಯಮಂತ್ರಿ ಪೋಸ್ಟ್‌ ಮಾಡಿದ್ದಾರೆ.

“ನಮ್ಮ ಸಂವಿಧಾನವು ನೀಲಿ ಕವರ್‌ ಹೊಂದಿದ್ದು, ಮೂಲಭೂತ ಕರ್ತವ್ಯಗಳ ಬಗ್ಗೆ ಉಲ್ಲೇಖವಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂಬುದಾಗಿ ಮೂಲಭೂತ ಕರ್ತವ್ಯವು ತಿಳಿಸುತ್ತದೆ. ಆದರೆ, ರಾಹುಲ್‌ ಗಾಂಧಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರು ಚೀನಾ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ತಿರುಗಾಡುತ್ತಿರಬಹುದು” ಎಂದು ಕೂಡ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.

ಕಾಂಗ್ರೆಸ್‌ ತಿರುಗೇಟು

ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ಕಾಂಗ್ರೆಸ್‌ ಶಾಸಕ ಅಬ್ದುಲ್‌ ರಶೀದ್‌ ಮೊಂಡಲ್‌ ತಿರುಗೇಟು ನೀಡಿದ್ದಾರೆ. “ಭಾರತ ಸಂವಿಧಾನದ ಕವರ್‌ಗಳ ಬಣ್ಣವು ಬೇರೆ ಬೇರೆ ಇದೆ. ಕವರ್‌ ಬಣ್ಣ ಬೇರೆಯಾದರೂ ಸಂವಿಧಾನದ ಆಶಯಗಳು ಒಂದೇ ಆಗಿವೆ. ಅಷ್ಟಕ್ಕೂ ನಾವು ಬಣ್ಣವನ್ನು ಓದುವುದಿಲ್ಲ. ಸಂವಿಧಾನದ ಆಶಯ, ಉದ್ದೇಶಗಳನ್ನು ಪಾಲಿಸುತ್ತೇವೆ” ಎಂದಿದ್ದಾರೆ. “ಭಾರತ ಸಂವಿಧಾನದ ಪಾಕೆಟ್‌ ಎಡಿಷನ್‌ನ ಪ್ರತಿಯು ನೀಲಿ ಬಣ್ಣದ ಕವರ್‌ ಹೊಂದಿದೆ” ಎಂದು ಕೂಡ ಕೆಲ ಜಾಲತಾಣಿಗರು ಹಿಮಂತ ಬಿಸ್ವಾ ಶರ್ಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Himanta Biswa Sarma: ಬಿಜೆಪಿಗೆ ಏಕೆ 400 ಸೀಟುಗಳು ಬೇಕೇಬೇಕು? ಹಿಮಂತ ಬಿಸ್ವ ಶರ್ಮಾ ಉತ್ತರ ಹೀಗಿದೆ!

Continue Reading

ವಿದೇಶ

Covid 19: ಸಿಂಗಾಪುರದಲ್ಲಿ ಕೊರೊನಾ ಹೊಸ ಅಲೆ; ವಾರದಲ್ಲಿ 25 ಸಾವಿರ ಕೇಸ್‌, ಭಾರತಕ್ಕೆ ಇದೆಯೇ ಭೀತಿ?

Covid 19: ಸಿಂಗಾಪುರದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಕೊರೊನಾ ಹೊಸ ಅಲೆಯ ಆರಂಭಿಕ ಹಂತದಲ್ಲಿ ನಾವಿದ್ದೇವೆ. ಎರಡರಿಂದ ನಾಲ್ಕು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದೆ ಎಂಬುದಾಗಿ ವರದಿಗಳು ತಿಳಿಸಿವೆ ಎಂದು ಸಿಂಗಾಪುರ ಆರೋಗ್ಯ ಸಚಿವ ತಿಳಿಸಿದ್ದಾರೆ.

VISTARANEWS.COM


on

Covid 19
Koo

ಸಿಂಗಾಪುರ: ಭಾರತ ಸೇರಿ ಜಗತ್ತನ್ನೇ ಪಿಡುಗಿನಂತೆ ಕಾಡಿದ ಕೊರೊನಾ ಸೋಂಕು (Covid 19) ಈಗ ಸಿಂಗಾಪುರದಲ್ಲಿ ಹೊಸದೊಂದು ಅಲೆ ಸೃಷ್ಟಿಸಿದೆ. ಸಿಂಗಾಪುರದಲ್ಲಿ (Singapore) ಕಳೆದ ಒಂದು ವಾರದಲ್ಲಿಯೇ (ಮೇ 5-11) 25,900 ಪ್ರಕರಣಗಳು ದಾಖಲಾಗಿದ್ದು, ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವಂತೆ ಆರೋಗ್ಯ ಸಚಿವ ಓಂಗ್‌ ಯೆ ಕುಂಗ್‌ (Ong Ye Kung) ಅವರು ಖಡಕ್‌ ಆದೇಶ ಹೊರಡಿಸಿದ್ದಾರೆ. ಸಿಂಗಾಪುರದಲ್ಲಿ ಏಕಾಏಕಿ ಮಹಾಮಾರಿಯ ಹೊಸ ಅಲೆ ಸೃಷ್ಟಿಯಾಗಿರುವುದರಿಂದ ಭಾರತಕ್ಕೂ ಭೀತಿ ಎದುರಾಗಿದೆ.

“ಸಿಂಗಾಪುರದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಕೊರೊನಾ ಹೊಸ ಅಲೆಯ ಆರಂಭಿಕ ಹಂತದಲ್ಲಿ ನಾವಿದ್ದೇವೆ. ಎರಡರಿಂದ ನಾಲ್ಕು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದೆ ಎಂಬುದಾಗಿ ವರದಿಗಳು ತಿಳಿಸಿವೆ. ಜೂನ್‌ ಅಂತ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವ ಜತೆಗೆ ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕನ್ನು ನಿಗ್ರಹಿಸಲು ಸೂಚಿಸಲಾಗಿದೆ” ಎಂದು ಓಂಗ್‌ ಯೆ ಕುಂಗ್‌ ತಿಳಿಸಿದ್ದಾರೆ.

ಮೇ 5ಕ್ಕಿಂತ ಮೊದಲಿನ ಒಂದು ವಾರದಲ್ಲಿ ಸಿಂಗಾಪುರದಲ್ಲಿ 13,700 ಕೇಸ್‌ಗಳು ದಾಖಲಾಗಿದ್ದವು. ಆದರೆ, ಒಂದೇ ವಾರದ ಅಂತರದಲ್ಲಿ ಪ್ರಕರಣಗಳ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗಿದೆ. ಒಂದು ವಾರದಲ್ಲಿ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 181ರಿಂದ 250ಕ್ಕೆ ಏರಿಕೆಯಾಗಿದೆ. ಪ್ರತಿ ದಿನ ಸರಾಸರಿ ಮೂವರು ಸೋಂಕಿತರು ಐಸಿಯು ಸೇರುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಸೇರಿ ಹಲವು ವೈದ್ಯಕೀಯ ಸೌಕರ್ಯಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಭಾರತಕ್ಕೂ ಇದೆ ಹೊಸ ಅಲೆಯ ಭೀತಿ

ಸಿಂಗಾಪುರದಿಂದ ಭಾರತಕ್ಕೆ ಬರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಭಾರತಕ್ಕೂ ಹೊಸ ಸೋಂಕಿನ ಅಲೆಯ ಭೀತಿ ಇದ್ದೇ ಇದೆ. ಹಾಗೊಂದು ವೇಳೆ, ಸಿಂಗಾಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟ ಜಾಸ್ತಿಯಾದರೆ ಭಾರತಕ್ಕೆ ಬರುವವರ ಮೇಲೆ ಹೆಚ್ಚಿನ ನಿಗಾ ಇರಿಸುವುದು ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮದ ಕುರಿತು ವರದಿಗಳು ಬಹಿರಂಗವಾದ ಬೆನ್ನಲ್ಲೇ ಹೊಸ ತಳಿಯ ಸೋಂಕು ಹರಡುವ ಭೀತಿಯು ಜನರನ್ನು ಆತಂಕಕ್ಕೀಡು ಮಾಡಿದೆ.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Continue Reading
Advertisement
SRH vs PBKS
ಕ್ರೀಡೆ25 mins ago

SRH vs PBKS: ಒಂದು ದಿನ ಕಳೆಯುವ ಮುನ್ನವೇ ಕೊಹ್ಲಿಯ ಸಿಕ್ಸರ್​ ದಾಖಲೆ ಮುರಿದ ಅಭಿಷೇಕ್

Harish Poonja
ಕರ್ನಾಟಕ59 mins ago

Harish Poonja: ಪೊಲೀಸರಿಗೆ ಧಮ್ಕಿ; ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

Ebrahim Raisi
ವಿದೇಶ1 hour ago

Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

PBKS vs SRH
ಕ್ರೀಡೆ1 hour ago

PBKS vs SRH: ಸೋಲಿನ ಮೂಲಕ ಅಭಿಯಾನ ಮುಗಿಸಿದ ಪಂಜಾಬ್​; ಹೈದರಾಬಾದ್​​ಗೆ 4 ವಿಕೆಟ್​ ಜಯ

West Nile fever Health department on alert
ಆರೋಗ್ಯ2 hours ago

West Nile fever : ಕೇರಳದಲ್ಲಿ ವೆಸ್ಟ್‌ ನೈಲ್ ಭೀತಿ; ಮೈಸೂರು ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಅಲರ್ಟ್‌

Great Khali
ದೇಶ2 hours ago

Great Khali: ಜಗತ್ತಿನ ಕುಬ್ಜ ಮಹಿಳೆಯನ್ನು ಮಗುವಿನಂತೆ ಎತ್ತಿ ಆಡಿಸಿದ ಗ್ರೇಟ್‌ ಖಲಿ; ಜನ ಕೆಂಡವಾಗಿದ್ದು ಏಕೆ?

Kalki 2898 AD
ಪ್ರಮುಖ ಸುದ್ದಿ2 hours ago

Kalki 2898 AD: ಮೇ 22ಕ್ಕೆ ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ; ಕಲ್ಕಿ ಚಿತ್ರದ 5ನೇ ಸೂಪರ್ ಸ್ಟಾರ್ ಯಾರು?

RCB vs CSK
ಕ್ರೀಡೆ2 hours ago

RCB vs CSK: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

Rain News
ಕರ್ನಾಟಕ3 hours ago

Rain News: ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು, ಯುವಕನಿಗೆ ಗಂಭೀರ ಗಾಯ

Prajwal Revanna Case
ಕರ್ನಾಟಕ3 hours ago

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌