ಜಕಾರ್ತ, ಇಂಡೋನೇಷ್ಯಾ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ವ್ಯಾಪಕ ಸಾವು ನೋವು ಸಂಭವಿಸಿದ ಬೆನ್ನಲ್ಲೇ, ಇಂಡೋನೇಷ್ಯಾದಲ್ಲಿ 6.0 ತೀವ್ರತೆಯಲ್ಲಿ ಭೂ ಕಂಪಿಸಿದೆ. ಸುದೈವಷಾತ್, ಈ ವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ ಎಂದು ಇಂಡೋನೇಷ್ಯಾ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ(Indonesia Earthquake:).
ಉತ್ತರ ಇಂಡೋನೇಷ್ಯಾದ ಸುಲವೇಸಿ ಪ್ರಾಂತ್ಯದಲ್ಲಿ ಭೂಮಿ ಕಂಪನಿಸಿದೆ. ಆದರೆ, ಇಂಥ ಭೀಕರತೆಯೇನೂ ಸೃಷ್ಟಿಯಾಗಿಲ್ಲ. ಅಲ್ಲದೇ ಸುನಾಮಿಯ ಅಪಾಯ ಕೂಡ ಇಲ್ಲ ಎಂದು ಇಂಡೋನೇಷ್ಯಾ ಹವಾಮಾನ ಇಲಾಖೆ ತಿಳಿಸಿದೆ. ಮಧ್ಯಾಹ್ನ 12.55ಕ್ಕೆ ಭೂಕಂವು ಸಂಭವಿಸಿತು. ಈ ಕಂಪನದ ಕೇಂದ್ರ ಬಿಂದು ತಲೌಡ್ ದ್ವೀಪದ ಮೆಲೊಂಗ್ವಾನ್ ಉಪ-ಜಿಲ್ಲೆಯ ಆಗ್ನೇಯಕ್ಕೆ 37 ಕಿಮೀ ದೂರದಲ್ಲಿ ಹಾಗೂ ಸಮುದ್ರದ 11 ಕಿ.ಮೀ ಆಳದಲ್ಲಿತ್ತು ಸಂಸ್ಥೆಯು ತಿಳಿಸಿದೆ.
ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಪವಾಡ, ಕಟ್ಟಡದ ಅವಶೇಷಗಳಲ್ಲಿ 128 ತಾಸಿದ್ದೂ ಬದುಕಿದ 2 ತಿಂಗಳ ಶಿಶು
ತಲೌಡ್ ದ್ವೀಪದಲ್ಲಿ ಭೂಮಿ ಜೋರಾಗಿಯೇ ಕಂಪಿಸಿದರೂ, ಸ್ಥಳೀಯರಲ್ಲಿ ಅಂಥ ಭಯಾನಕ ಸ್ಥಿತಿಯೇನೂ ನಿರ್ಮಾಣವಾಗಿಲ್ಲ. ಪ್ರತಿ ಜಿಲ್ಲೆ, ಉಪ ಜಿಲ್ಲೆಗಲ್ಲಲಿ ಅಪಾಯದ ಕುರಿತಾಗಿ ಎಲ್ಲ ಪರೀಕ್ಷಿಸಿದ್ದೇವೆ. ಇಲ್ಲಿಯವರೆಗೆ ಯಾವುದೇ ನಷ್ಟ ಅಥವಾ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲೆಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ವಾಸ್ತವದಲ್ಲಿ ಇಂಡೋನೇಷ್ಯಾ ರಾಷ್ಟ್ರವು, ಫೆಸಿಪಿಕ್ ರಿಂಗ್ ಆಫ್ ಫೈರ್ ಎಂಬ ಭೂಕಂಪ ಪೀಡಿತ ಕೇಂದ್ರದ ಮೇಲೆ ನಿರ್ಮಾಣವಾಗಿದೆ.