Site icon Vistara News

Intel Layoffs: ಆರ್ಥಿಕ ಬಿಕ್ಕಟ್ಟು- ಇಂಟೆಲ್‌ ಕಂಪನಿಯಿಂದ 18,000 ಉದ್ಯೋಗಿಗಳು ವಜಾ

intel layoffs

ಸ್ಯಾನ್ ಫ್ರಾನ್ಸಿಸ್ಕೋ: ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ ದೈತ್ಯ ಟೆಕ್ ಕಂಪನಿಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಉದ್ಯೋಗಗಳನ್ನು ಕಡಿತ(Intel Layoffs) ಮಾಡುತ್ತಿವೆ. ಇದೀಗ ಇದರ ಸಾಲಿಗೆ ಅಮೆರಿಕದ ಚಿಪ್ ತಯಾರಕ ಇಂಟೆಲ್(Intel) ಕೂಡ ಸೇರಿದೆ. ಶೇ.15ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಇಂಟೆಲ್‌ ನಿರ್ಧರಿಸಿದ್ದು, ಇದರಿಂದ 20 ಶತಕೋಟಿ ಡಾಲರ್‌ ವೆಚ್ಚ ಕಡಿಮೆಯಾಗಲಿದೆ.

ಇಂಟೆಲ್ ಇತ್ತೀಚೆಗೆ ಕೊನೆಗೊಂಡ ತ್ರೈಮಾಸಿಕದಲ್ಲಿ $1.6 ಶತಕೋಟಿ ನಷ್ಟವನ್ನು ವರದಿ ಮಾಡಿದ್ದರಿಂದ ಈ ವರ್ಷ ಅಂದಾಜು $20 ಶತಕೋಟಿ ವೆಚ್ಚವನ್ನು ಕಡಿತಗೊಳಿಸುವ ಯೋಜನೆ ರೂಪಿಸಿದೆ. ಈ ಬಗ್ಗೆ ಇಂಟೆಲ್ ಮುಖ್ಯ ಕಾರ್ಯನಿರ್ವಾಹಕ ಪ್ಯಾಟ್ ಗೆಲ್ಸಿಂಗರ್ ಪ್ರತಿಕ್ರಿಯಿಸಿದ್ದು, ನಾವು ಪ್ರಮುಖ ಉತ್ಪನ್ನ ಮತ್ತು ಪ್ರಕ್ರಿಯೆ ತಂತ್ರಜ್ಞಾನದ ಮೈಲಿಗಲ್ಲುಗಳನ್ನು ಮುಟ್ಟಿದರೂ ಸಹ ನಮ್ಮ Q2 ಆರ್ಥಿಕ ಕಾರ್ಯಕ್ಷಮತೆ ನಿರಾಶಾದಾಯಕವಾಗಿತ್ತು. ಮುಂದಿನ ಅರ್ಧವಾರ್ಷಿಕ ನಾವು ಹಿಂದೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸವಾಲಿನವುಗಳಾಗಿವೆ ಎಂದು ಹೇಳಿದ್ದಾರೆ.

“ನಮ್ಮ ಖರ್ಚು ಕಡಿತವನ್ನು ಕಾರ್ಯಗತಗೊಳಿಸುವ ಮೂಲಕ, ನಮ್ಮ ಲಾಭವನ್ನು ಸುಧಾರಿಸಲು ಮತ್ತು ನಮ್ಮ ಆಯವ್ಯಯವನ್ನು ಬಲಪಡಿಸಲು ನಾವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಜಿನ್ಸ್ನರ್ ಹೇಳಿದರು.

18,000 ನೌಕರರು ವಜಾ?

ಇಂಟೆಲ್ ಕಳೆದ ವರ್ಷದ ಕೊನೆಯಲ್ಲಿ 124,800 ಉದ್ಯೋಗಿಗಳನ್ನು ಹೊಂದಿದೆ ಎಂದು ವರದಿ ಮಾಡಿದೆ. ಹೀಗಾಗಿ ಬರೋಬ್ಬರಿ 18,000 ನೌಕರರು ವಜಾಗೊಳ್ಳುವ ಸಾಧ್ಯತೆ ಇದೆ. ಜೂನ್‌ನಲ್ಲಿ, ಇಂಟೆಲ್ ಇಸ್ರೇಲ್‌ನಲ್ಲಿನ ಪ್ರಮುಖ ಕಾರ್ಖಾನೆಯ ಯೋಜನೆಯ ವಿಸ್ತರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿತು, ಇದು ಚಿಪ್ ಸ್ಥಾವರಕ್ಕೆ ಹೆಚ್ಚುವರಿ 15 ಶತಕೋಟಿ ಡಾಲರ್‌ ವೆಚ್ಚ ತಗುಲಿತ್ತು.

ಇಂಟೆಲ್ ಪ್ರತಿಸ್ಪರ್ಧಿಗಳಾದ ಎನ್ವಿಡಿಯಾ, ಎಎಮ್‌ಡಿ ಮತ್ತು ಕ್ವಾಲ್‌ಕಾಮ್‌ನಿಂದ ಪ್ರಬಲ ಸವಾಲುಗಳನ್ನೊಡ್ಡಿದೆ. ದಶಕಗಳಿಂದ, ಲ್ಯಾಪ್‌ಟಾಪ್‌ಗಳಿಂದ ಡೇಟಾ ಕೇಂದ್ರಗಳವರೆಗೆ ಎಲ್ಲವನ್ನೂ ನಡೆಸುವ ಚಿಪ್‌ಗಳ ಮಾರುಕಟ್ಟೆಯಲ್ಲಿ ಇಂಟೆಲ್ ಪ್ರಾಬಲ್ಯ ಹೊಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ, ಅದರ ಪ್ರತಿಸ್ಪರ್ಧಿಗಳು ಅದರಲ್ಲೂ ಮುಖ್ಯವಾಗಿ ವಿಶೇಷವಾಗಿ ಎನ್ವಿಡಿಯಾ – ವಿಶೇಷ AI ಪ್ರೊಸೆಸರ್‌ಗಳಲ್ಲಿ ಮುಂದೆ ಸಾಗಿವೆ.

ಮೈಕ್ರೋಸಾಫ್ಟ್ (Microsoft Layoffs) ಕೂಡ ವರ್ಷದ ಹಿಂದೆ ಇದೇ ರೀತಿಯಾಗಿ ಉದ್ಯೋಗಿಗಳನ್ನು ಕಡಿತಗೊಳಿಸಿತ್ತು. ಕಂಪನಿಯು ಸುಮಾರು ಹತ್ತು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ಈಗಾಗಲೇ ಮೆಟಾ, ಟ್ವಿಟರ್, ಅಮೆಜಾನ್, ಗೋಲ್ಡಮನ್ ಸಾಚ್ಸ್ ಸೇರಿದಂತೆ ಅನೇಕ ಕಂಪನಿಗಳು ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಗಳನ್ನು ಕಡಿಮೆ ಮಾಡಿವೆ.

ಇದನ್ನೂ ಓದಿ: Microsoft Global Outage: ವಿಶ್ವಾದ್ಯಂತ ನೆಲಕಚ್ಚಿದ ಮೈಕ್ರೋಸಾಫ್ಟ್‌; ವಿಂಡೋಸ್‌ನಲ್ಲಿ ತಾಂತ್ರಿಕ ದೋಷ

Exit mobile version