ಬಾಕು: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ (Helicopter Crash) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದ್ದು, ಹಲವು ಗಂಟೆಗಳ ಕಾರ್ಯಾಚರಣೆ ಬಳಿಕವೂ ಹೆಲಿಕಾಪ್ಟರ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ ಪತ್ತೆಗಾಗಿ ಸುಮಾರು 40 ತಂಡಗಳು ಶೋಧ ಕಾರ್ಯ ನಡೆಸುತ್ತಲೇ ಇವೆ. ಇಷ್ಟಾದರೂ ಹೆಲಿಕಾಪ್ಟರ್ ಪತ್ತೆಯಾಗಿರುವ ಕಾರಣ ಇಬ್ರಾಹಿಂ ರೈಸಿ ಸೇರಿ ಹಲವರ ಪ್ರಾಣಕ್ಕೆ ಕುತ್ತುಂಟಾಗಿರುವ ಸಾಧ್ಯತೆ ಇದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಅಜರ್‌ಬೈಜಾನ್ ಸಮೀಪದ ಜೋಲ್ಫಾ ಎಂಬ ಪ್ರದೇಶ ಬೆಟ್ಟಗಳ ಮಧ್ಯೆ ಹೆಲಿಕಾಪ್ಟರ್ ಪತನಗೊಂಡಿರುವ ಕಾರಣ ಶೋಧ ಕಾರ್ಯ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ ಪತ್ತೆಗಾಗಿ ಹಲವು ಸಿಬ್ಬಂದಿ ಇರುವ ಸುಮಾರು 40 ತಂಡಗಳನ್ನು ಇರಾನ್ ರಚಿಸಿದೆ. ಬೆಟ್ಟಗಳಲ್ಲಿ ಭದ್ರತಾ ಸಿಬ್ಬಂದಿಯು ಎಡೆಬಿಡದೆ ಶೋಧ ಕಾರ್ಯ ಕೈಗೊಂಡರೂ ಮುನ್ನಡೆ ಸಿಗುತ್ತಿಲ್ಲ. ಹೆಲಿಕಾಪ್ಟರ್ ಪತನದ ಬಳಿಕ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಬದುಕುಳಿಯುವ ಸಾಧ್ಯತೆ ತೀರಾ ಕ್ಷೀಣ ಎಂದು ಹೇಳಲಾಗುತ್ತಿದೆ.
HAPPENING NOW: Iranian rescue teams are currently searching for the helicopter carrying President Ebrahim Raisi which reportedly crashed on Sunday.
— Collin Rugg (@CollinRugg) May 19, 2024
The teams could be seen searching through thick fog on mountain roads and hillsides.
Iranian state media is currently calling on… pic.twitter.com/l3wGTnsnbv
ಹೆಲಿಕಾಪ್ಟರ್‌ನಲ್ಲಿ ಯಾರಿದ್ದರು?
ಹೆಲಿಕಾಪ್ಟರ್‌ನಲ್ಲಿ ಇಬ್ರಾಹಿಂ ರೈಸಿ ಜತೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್ ಅಮೀರಬ್ದೊಲ್ಲೈ, ಪೂರ್ವ ಅಜರ್‌ಬೈಜಾನ್ ಗವರ್ನರ್ ಮಲೇಕ್ ರಹಮತಿ ಹಾಗೂ ಪೂರ್ವ ಅಜರ್‌ಬೈಜಾನ್‌ನಲ್ಲಿರುವ ಇರಾನ್ ಸುಪ್ರೀಂ ಲೀಡರ್‌ನ ಪ್ರತಿನಿಧಿ ಅಯೊತೊಲ್ಲಾ ಮೊಹಮ್ಮದ್ ಅಲಿ ಅಲೆ-ಹಶೇಮ್ ಅವರು ಕೂಡ ಇದ್ದರು. ಇದುವರೆಗೆ ಹೆಲಿಕಾಪ್ಟರ್ ಎಲ್ಲಿದೆ ಎಂಬುದರ ಸುಳಿವೇ ಸಿಗದ ಕಾರಣ ಇವರೆಲ್ಲರ ಪ್ರಾಣಕ್ಕೆ ಕುತ್ತು ಎದುರಾಗಿರಬಹುದು ಎಂದು ಹೇಳಲಾಗುತ್ತಿದೆ.
ಇಬ್ರಾಹಿಂ ರೈಸಿಗಾಗಿ ಮೋದಿ ಪ್ರಾರ್ಥನೆ
ಇರಾನ್ ಅಧ್ಯಕ್ಷರಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. “ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಪತನದ ಸುದ್ದಿ ತಿಳಿದು ಆತಂಕವಾಗಿದೆ. ಇರಾನ್ ಜನರ ಭಾವನೆಗಳ ಜತೆ ನಾವಿದ್ದೇವೆ. ಇಬ್ರಾಹಿಂ ರೈಸಿ ಹಾಗೂ ಅವರ ಜತೆಗಿದ್ದ ಎಲ್ಲರೂ ಸುರಕ್ಷಿತವಾಗಿರಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.
Deeply concerned by reports regarding President Raisi’s helicopter flight today. We stand in solidarity with the Iranian people in this hour of distress, and pray for well being of the President and his entourage.
— Narendra Modi (@narendramodi) May 19, 2024
ಅರಸ್ ನದಿಗೆ ಇರಾನ್ ಹಾಗೂ ಅಜರ್‌ಬೈಜಾನ್ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಅವರು ಅಜರ್‌ಬೈಜಾನ್‌ಗೆ ತೆರಳಿದ್ದರು. ಇದೇ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ತಿಳಿದುಬಂದಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಪತನಗೊಂಡಿರಬಹುದು ಎಂದು ಇರಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹವಾಮಾನ ವೈಪರೀತ್ಯವು ಶೋಧ ಕಾರ್ಯಾಚರಣೆಗೂ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ. 2021ರಿಂದಲೂ ಇಬ್ರಾಹಿಂ ರೈಸಿ ಅವರು ಇರಾನ್ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್ ಪತನ;ವಿಡಿಯೋ ವೈರಲ್