ಟೆಹ್ರಾನ್: ಪ್ರಸಕ್ತ ವರ್ಷದಲ್ಲಿ ಈವರೆಗೆ ಇರಾನ್ ಸರ್ಕಾರವು (Iran Punishment) 500ಕ್ಕೂ ಅಧಿಕ ಮಂದಿಯನ್ನು ಗಲ್ಲಿಗೇರಿಸಿ ಕೊಂದು ಹಾಕಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಈ ಪ್ರಮಾಣವು ಗರಿಷ್ಠ ಎಂದು ಹೇಳಲಾಗುತ್ತಿದೆ. ನಾರ್ವೇ ಮೂಲದ ಮಾನವಹಕ್ಕುಗಳ ಸಂಘಟನೆಯಾದ ಇರಾನ್ ಮಾನವ ಹಕ್ಕುಗಳ ವರದಿಯ ಪ್ರಕಾರ, 2022ರಲ್ಲಿ ನೇಣಿಗೇರಿಸಲಾದವರ ಸಂಖ್ಯೆ ಈಗ 500 ದಾಟಿದೆ. ಈ ವರದಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.
ಡಿಸೆಂಬರ್ 4ರಂದು ಇರಾನ್‌ನ ರಜಾಯಿ ಶಹ್ರಾ ಎಂಬಲ್ಲಿ ನಾಲ್ವರನ್ನು ಗಲ್ಲಿಗೇರಿಸಲಾಗಿದೆ. ಈ ಗಲ್ಲಿಗೇರಿದವರ ವಿರುದ್ಧ ಇರಾನ್ ಸರ್ಕಾರವು, ಇಸ್ರೇಲಿ ಬೇಹುಗಾರಿಕೆಯೊಂದಿಗೆ ಕೈಜೋಡಿಸಿದ ಆರೋಪವನ್ನು ಹೊರಿಸಿತ್ತು.
ಅಮಾನವೀಯ ಮತ್ತು ಕ್ರೂರ ಮರಣದಂಡನೆಯನ್ನು ಖಂಡಿಸಿರುವ ಮಾನವ ಹಕ್ಕುಗಳ ಸಂಘನೆಯು, ರಾಜಕೀಯ ಕೈದಿಗಳ ವಿರುದ್ಧ ಭದ್ರತಾ ಸಂಬಂಧಿ ಆರೋಪಗಳನ್ನು ಹೊರಿಸಿ, ಮರಣ ದಂಡನೆ ವಿಧಿಸುವುದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ಕಳೆದ ವರ್ಷ ಇರಾನ್ 333 ಜನರನ್ನು ಗಲ್ಲಿಗೇರಿಸಿತ್ತು. ಈ ಪೈಕಿ 55 ಜನರನ್ನು ಅಧಿಕಾರಿಗಳ ಹೊರಿಸಿದ ಆರೋಪದ ಹಿನ್ನೆಲೆಯಲ್ಲಿ ಗಲ್ಲಿಗೇರಿಸಲಾಗಿತ್ತು. ಅಂದರೆ, ಎಲ್ಲ ಗಲ್ಲು ಶಿಕ್ಷೆಗಳನ್ನು ನ್ಯಾಯಾಲಯವೇ ಘೋಷಿಸಬೇಕೆಂದೇನೂ ಇಲ್ಲ.
ಇದನ್ನೂ ಓದಿ | Iran Abolishes Morality Police | ಮಹ್ಸಾ ಅಮಿನಿ ಸಾವಿಗೆ ಸಿಕ್ಕಿತು ನ್ಯಾಯ, ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ರದ್ದು