Site icon Vistara News

Ismail Haniyeh: ಇಸ್ರೇಲ್‌ನಿಂದ ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಬರ್ಬರ ಹತ್ಯೆ

Ismail Haniyeh

ಟೆಹ್ರಾನ್‌: ಸುಮಾರು ಒಂದು ವರ್ಷದಿಂದ ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ನಡುವೆ ನಿರಂತರ ಯುದ್ಧ ನಡೆಯುತ್ತಿದೆ (Israel Hamas War). ಇದೀಗ ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್‌ನ ಹಿರಿಯ ನಾಯಕ ಇಸ್ಮಾಯಿಲ್ ಹನಿಯೆಹ್(Ismail Haniyeh) ಮತ್ತು ಅವರ ಅಂಗರಕ್ಷಕರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಹಮಾಸ್‌ನ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ಯಾಲೆಸ್ಟೈನ್ ಹೋರಾಟಗಾರ ಗುಂಪು ಹಮಾಸ್’ನಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥರಾದ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್‌’ನಲ್ಲಿ ಹತ್ಯೆ ಮಾಡಲಾಗಿದೆ ಘಟನೆಯಲ್ಲಿ ಅವರ ಅಂಗ ರಕ್ಷಕ ಕೂಡ ಹತರಾಗಿದ್ದಾರೆ ಇರಾನ್ ಅಧ್ಯಕ್ಷರಾಗಿ ಚುನಾಯಿತರಾದ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ಟೆಹ್ರಾನ್‌ನಲ್ಲಿದ್ದರು. ಸಮಾರಂಭದ ಬಳಿಕ ಮತೊರ್ವ ಹಮಾಸ್‌ ನಾಯಕ ಆಯತೊಲ್ಲಾ ಖಹಮೆನ್‌ ಅವರನ್ನು ಭೇಟಿಯಾಗಿದ್ದರು.

ಇದಾದ ಬಳಿಕ ಅವ ಇಸ್ಮಾಯಿಲ್ ಹನಿಯೆಹ್ ಅವರ ನಿವಾಸವನ್ನು ಟೆಹ್ರಾನ್‌ನಲ್ಲಿ ಹೊಡೆದುರುಳಿಸಲಾಯಿತು ಮತ್ತು ಈ ಘಟನೆಯ ಪರಿಣಾಮವಾಗಿ, ಅವರು ಮತ್ತು ಅವರ ಅಂಗರಕ್ಷಕರಲ್ಲಿ ಒಬ್ಬರು ಹುತಾತ್ಮರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು ಮೇಲ್ನೋಟಕ್ಕೆ ಈ ದಾಳಿ ಇಸ್ರೇಲ್‌ ಸೇನೆ ನಡೆಸಿರುವಂತೆ ಕಾಣುತ್ತಿದೆಯಾದರೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. IRGC ಹೇಳಿಕೆಯು ಹಮಾಸ್ ನಾಯಕನ ಸಾವಿಗೆ ಪ್ಯಾಲೆಸ್ಟೈನ್ ಜನರಿಗೆ, ಮುಸ್ಲಿಂ ಜಗತ್ತು ಮತ್ತು ರೆಸಿಸ್ಟೆನ್ಸ್ ಫ್ರಂಟ್‌ನ ಹೋರಾಟಗಾರರು ಸಂತಾಪ ಸೂಚಿಸಿದೆ.

ಶನಿವಾರ ಇಸ್ರೇಲ್‌ ನಿಯಂತ್ರಣದಲ್ಲಿರುವ ಗೋಲಾನ್‌ ಹೈಟ್ಸ್‌ ಪ್ರದೇಶದ ಮೇಲೆ ಹಿಜ್ಬುಲ್ಲಾ (Hezbollah) ಭಯೋತ್ಪಾದಕ ಸಂಘಟನೆ ನಡೆಸಿದ ರಾಕೆಟ್‌ ದಾಳಿಯಲ್ಲಿ ಮಕ್ಕಳು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, ಇದಕ್ಕೆ ಪ್ರತಿಕಾರ ತೀರಿಸುವುದಾಗಿ ಇಸ್ರೇಲ್‌ ಶಪಥ ಕೈಗೊಂಡಿತ್ತು.

ಲೆಬನಾನ್‌ನಿಂದ ಹಾರಿಸಲಾದ ರಾಕೆಟ್ ಗೋಲನ್ ಹೈಟ್ಸ್‌ನ ಉತ್ತರದ ಡ್ರೂಜ್ ಪಟ್ಟಣವಾದ ಮಜ್ಡಾಲ್ ಶಾಮ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನಕ್ಕೆ ಅಪ್ಪಳಿಸಿ ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ ಹಲವರನ್ನು ಬಲಿ ಪಡೆದುಕೊಂಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu), ಇದಕ್ಕೆ ಹೆಜ್ಬುಲ್ಲಾ ಸಂಘಟನೆ ಭಾರಿ ಬೆಲೆ ತೆರೆಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆದರೆ ಹಿಜ್ಬುಲ್ಲಾ ಈ ರಾಕೆಟ್ ದಾಳಿಯನ್ನು ನಿರಾಕರಿಸಿದೆ.

ದಾಳಿಯ ಹಿನ್ನೆಲೆಯಲ್ಲಿ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಇಸ್ರೇಲ್‌ಗೆ ಧಾವಿಸಿದ್ದರು.

ಇದನ್ನೂ ಓದಿ:Narayana Murthy: ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ: ನಾರಾಯಣಮೂರ್ತಿ ಹೊಸ ವಾದ!

Exit mobile version