Site icon Vistara News

Israel Palestine War: 400 ಹಮಾಸ್ ಉಗ್ರರನ್ನು ಕೊಂದ ಇಸ್ರೇಲ್, ಇನ್ನೂ ನಡೆಯುತ್ತಿದೆ ಶೋಧ!

IDF spokesman Daniel Hagari

ಟೆಲ್ ಅವಿವ್: ಪ್ಯಾಲೆಸ್ತೀನ್‌ನ (Palestine) ಹಮಾಸ್ (Hamas Terrorists) ಉಗ್ರರ ಭೀಕರ ದಾಳಿಯ ಬೆನ್ನಲ್ಲೇ ಇಸ್ರೇಲ್ ಸೇನೆಯು ಗಾಜಾ ಪಟ್ಟಿಯ (Gaza Strip) ಮೇಲೆ ವೈಮಾನಿಕ ದಾಳಿಯನ್ನು ಕೊಂಡಿದೆ. ಪ್ರತಿ ದಾಳಿ ವೇಳೆ 400 ಹಮಾಸ್ ಉಗ್ರರನ್ನು ಕೊಂದ್ದು, 12ಕ್ಕೂ ಅಧಿಕ ಉಗ್ರರನ್ನು ಸೆರೆ ಹಿಡಿದಿರುವುದಾಗಿ ಇಸ್ರೇಲ್ ಹೇಳಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸಸ್(IDF) ವಕ್ತಾರ ಡೇನಿಯ್ ಹಗಾರಿ ಅವರು ಭಾನುವಾರದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಹಮಾಸ್ ಉಗ್ರರನ್ನು ಹುಡುಕಿ ಹುಡುಕಿ ಹೊಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ(Israel Palestine War).

ಈಗಲೂ ಕ್ಫರ್ ಅಜಾದಲ್ಲಿ ಪಡೆಗಳು ಸಂಘರ್ಷ ನಡೆದಿದೆ. ಹೆಚ್ಚಿನ ಸಂಖ್ಯೆಯ ಪಟ್ಟಣಗಳಲ್ಲಿ ಹಮಾಸ್ ಉಗ್ರರನ್ನು ಶೋಧಿಸಲಾಗುತ್ತಿದೆ. ಎಲ್ಲಾ ಪಟ್ಟಣಗಳಲ್ಲಿ ಇಸ್ರೇಲ್ ಸೇನಾ ಪಡೆಗಳಿವೆ. ಇಸ್ರೇಲ್ ಸೇನೆ ಇಲ್ಲದಿರುವ ಯಾವುದೇ ಪಟ್ಟಣವಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆಗಳ ಉನ್ನತ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿರುವುದಾಗಿ ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Israel Palestine War: ಪ್ಯಾಲೆಸ್ತೀನ್ ಮೇಲೆ ಅಧಿಕೃತ ಯುದ್ಧ ಘೋಷಿಸಿದ ಇಸ್ರೇಲ್! ವೈಮಾನಿಕ ದಾಳಿ ಶುರು

ಐಡಿಎಫ್‌ನ ಮಿಷನ್ ಉದ್ದೇಶಗಳು ಗಾಜಾದಲ್ಲಿನ ಗಡಿ ಸಮುದಾಯಗಳಿಂದ ಎಲ್ಲಾ ನಾಗರಿಕರನ್ನು ಸ್ಥಳಾಂತರಿಸಿ, ಅಲ್ಲಿ ಹೋರಾಟವನ್ನು ಕೊನೆಗೊಳಿಸುವುದಾಗಿದೆ. ಗಾಜಾ ಪಟ್ಟಿಯಲ್ಲಿರುವ ಎಲ್ಲ ಭಯೋತ್ಪಾದಕ ಟಾರ್ಗೆಟ್ ದಾಳಿ ನಡೆಸುವುದು ಮೊದಲ ಆದ್ಯತೆಯಾಗಿದೆ ಎಂದು ಹಗರಿ ಅವರು ತಿಳಿಸಿದ್ದಾರೆ.

ಹಮಾಸ್ ರಾಕೆಟ್ ದಾಳಿಯನ್ನು ಆರಂಭಿಸಿದ 24 ಗಂಟೆಯ ಬಳಿಕ ಇಸ್ರೇಲ್ ರಕ್ಷಣಾ ಪಡೆಗಳು ಮುನ್ನುಗ್ಗಿ ಹೋರಾಡುತ್ತಿವೆ. ಭಯೋತ್ಪಾದಕರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಗಾಜಾ ಗಡಿಗೆ ಸಮೀಪ ಇರುವ ಕ್ಫರ್ ಅಜಾದಲ್ಲಿ ಜೋರು ಯುದ್ಧ ನಡೆಯುತ್ತಿದೆ. ಎಲ್ಲ ಹಮಾಸ್ ಉಗ್ರರನ್ನು ಸದೆ ಬಡೆಯುವ ಪ್ರಯತ್ನವನ್ನು ಇಸ್ರೇಲ್ ರಕ್ಷಣಾ ಪಡೆಗಳು ಮಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version