ನವದೆಹಲಿ: 500 ಪ್ಯಾಲೆಸ್ತೀನಿಗಳ (Palestine people Killed) ಹತ್ಯೆಗೆ ಕಾರಣವಾದ ಆಸ್ಪತ್ರೆ ಮೇಲಿನ ಬಾಂಬ್ ದಾಳಿ (Bomb on Hospital) ಕುರಿತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರು ಬೆಂಬಲಿಸಿದ್ದಾರೆ. ಹಮಾಸ್ ಮತ್ತು ಇಸ್ರೇಲ್ ನಡುವಿನ ಭೀಕರ ಕಾಳಗದ ಮಧ್ಯೆಯೇ ಇಸ್ರೇಲ್‌ಗೆ ಬೈಡೆನ್ ಅವರು ಈ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು ಜೋ ಬೈಡೆನ್ ಅವರು, ಪ್ಯಾಲೆಸ್ತೀನ್ ನಾಗರಿಕರ ಮೇಲೆ ದಾಳಿ ಸಲ್ಲದು ಎಂದು ಹೇಳಿದ್ದರು. ಗಾಜಾ ಹಾಸ್ಪಿಟಲ್ ಮೇಲೆ ದಾಳಿ ನಡೆಸಿದ್ದು ಇಸ್ರೇಲ್ ಸೇನೆ ಅಲ್ಲ, ಬದಲಿಗೆ ಬಂಡುಕೋರರ ಗುಂಪು ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel PM benjamin netanyahu) ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ತಿಳಿಸಿದ್ದಾರೆ. ಇಸ್ರೇಲ್ ಪ್ರಧಾನಿಯ ಈ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷರು ಬೆಂಬಲಿಸಿದ್ದಾರೆ(Israel Palestine War).
ನಿನ್ನೆ ಗಾಜಾ ಪಟ್ಟಿಯ ಆಸ್ಪತ್ರೆಯ ಮೇಲಿನ ಬಾಂಬ್ ದಾಳಿಯಿಂದಾಗಿ ನನಗೆ ಬಹಳ ದುಃಖವಾಗಿತ್ತು. ನಾನು ನೋಡಿದ ಆಧಾರದ ಮೇಲೆ ಈ ಕೃತ್ಯವನ್ನು ಬೇರೆಯದ್ದೇ ತಂಡವೊಂದು ಮಾಡಿರುವ ಹಾಗಿದೆ ಎಂದು ಜೋ ಬೈಡೆನ್ ಕೂಡ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಟೆಲ್ ಅವಿವದಲ್ಲಿ ತಿಳಿಸಿದ್ದಾರೆ.
ಬುಧವಾರ ಇಸ್ರೇಲ್‌ಗೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ಗಾಜಾ ಯುದ್ಧದ ವೇಳೆ ಇಸ್ರೇಲ್‌ಗೆ ಬೆಂಬಲ ಘೋಷಿಸಿದ್ದಾರೆ. ಭಾರೀ ಭದ್ರತೆ ಮಧ್ಯೆ, ಟೆಲ್ ಅವಿವ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಜೋ ಬೈಡೆನ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಬರಮಾಡಿಕೊಂಡರು.
ಇದಾದ ಬಳಿಕ ನೆತನ್ಯಾಹು ಜತೆಗೂಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಮಾಸ್ ವಿರುದ್ಧ ಯುದ್ಧದಲ್ಲಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಅಕ್ಟೋಬರ್ 7ರಂದು 1700 ಇಸ್ರೇಲಿಗಳ ಮಾರಣಹೋಮ ನಡೆಸಿದ ಹಮಾಸ್ ವಿರುದ್ದ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಈ ಸುದ್ದಿಯನ್ನೂ ಓದಿ: Israel palestine war: ಹಮಾಸ್‌ನಿಂದ ಮೊದಲ ಒತ್ತೆಯಾಳು ವಿಡಿಯೋ ರಿಲೀಸ್, ಪಾರ್ಟಿಯಿಂದ ಅಪಹರಣಕ್ಕೊಳಗಾದ ಇಸ್ರೇಲಿ ಮಹಿಳೆ
ಅಮೆರಿಕ ಯಾರೊಂದಿಗೆ ನಿಲ್ಲುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಲು, ಇಸ್ರೇಲಿ ಜನರಿಗೆ ತೋರಿಸಲು ನಾನು ಇಲ್ಲಿದ್ದೇನೆ ಎಂದು ಬೈಡೆನ್ ಅವರು ಹೇಳಿದರು. ಇದೇ ವೇಳೆ, ಮಹಿಳೆಯರು, ಮಕ್ಕಳ ಶಿರಚ್ಛೇದ ನಡೆಸಿದ ಹಾಗೂ ದೌರ್ಜನ್ಯ ನಡೆಸಿದ ಹಮಾಸ್ ಬಂಡುಕೋರರ ಕೃತ್ಯವನ್ನು ಖಂಡಿಸಿದರು.
ಗಾಜಾ ಪಟ್ಟಿಯ ಮೇಲೆ ಆಸ್ಪತ್ರೆ ಮೇಲೆ ದಾಳಿ ನಡೆಯುವುದಕ್ಕಿಂತ ಮುಂಚೆಯೇ, ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಗೆ 3000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹಮಾಸ್ ಬಂಡುಕೋರರು 199 ಇಸ್ರೇಲಿಗಳನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿದ್ದು, ಅವರನ್ನು ಬಿಡಿಸಿಕೊಳ್ಳಲು ತನ್ನ ಸೇನಾಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.