Site icon Vistara News

Israel-Hamas Conflict: ಹಮಾಸ್‌ ಉಗ್ರರ ಸೆರೆಯಲ್ಲಿದ್ದ ನಾಲ್ವರ ರಕ್ಷಣೆ; 265 ದಿನಗಳ ನರಕಯಾತನೆ ಬಳಿಕ ತಾಯ್ನಾಡಿಗೆ ವಾಪಾಸ್‌

Israel-Hamas Conflict

ಇಸ್ರೇಲ್‌: ಹಮಾಸ್‌ ಉಗ್ರರು ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಇಸ್ರೇಲ್‌(Israel-Hamas Conflict) ಪ್ರಜೆಗಳನ್ನು ರಕ್ಷಿಸಲಾಗಿದೆ. ಇಸ್ರೇಲ್‌ ರಕ್ಷಣಾ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಾಲ್ವರನ್ನು ರಕ್ಷಿಸಿ ತಮ್ಮ ದೇಶಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿದೆ. ದುರಾದೃಷ್ಟವಶಾತ್‌ ಈ ರಕ್ಷಣಾ ಕಾರ್ಯಾಚಣೆ ವೇಳೆ ಒಬ್ಬ ಇಸ್ರೇಲ್‌ ಯೋಧ ಹುತಾತ್ಮನಾಗಿದ್ದಾರೆ.

ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25ವರ್ಷ), ಅಲ್ಮೋಗ್‌ ಮೀರ್‌ ಜಾನ್‌ (21ವರ್ಷ), ಆಂಡ್ರೆ ಕೊಜ್ಲೋವ್‌ (27ವರ್ಷ) ಹಾಗೂ ಶ್ಲೋಮಿ ಝಿವ್‌ (40ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹಮಾಸ್‌ ಉಗ್ರರು 2023ರ ಅಕ್ಟೋಬರ್‌ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

ಇದೀಗ ಬರೋಬ್ಬರಿ 265 ದಿನಗಳ ಬಳಿಕ ತಮ್ಮ ತಾಯ್ನಾಡಿಗೆ ಮರಳಿರುವ ನಾಲ್ವರ ಕುಟುಂಬಸ್ಥರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಇನ್ನು ರಕ್ಷಿಸಲ್ಪಿಟ್ಟಿರುವ ನಾಲ್ವರು ಒತ್ತೆಯಾಳುಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾವು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಇವರನ್ನು ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗಿದೆ.

ಇನ್ನು ಈ ಬಗ್ಗೆ ಇಸ್ರೇಲ್‌ ಅಧಿಕೃತ ಮಾಹಿತಿ ನೀಡಿದ್ದು, ಗಾಜಾದಲ್ಲಿ ಸೆರೆಯಾಗಿದ್ದ ನಾಲ್ವರನ್ನು ನಾವು ಸುರಕ್ಷಿತವಾಗಿ ರಕ್ಷಿಸಿದ್ದೇವೆ. ಕಾರ್ಯಾಚರಣೆ ವೇಳೆ ಕೆಲವು ಸಾವು ನೋವುಗಳು ಸಂಭವಿಸಿದೆ. ಇನ್ನು ರಕ್ಷಿಸಲ್ಪಟ್ಟ ನಾಲ್ವರನ್ನು ಕಳೆದ ವರ್ಷ ಹಮಾಸ್‌ ಉಗ್ರರು ಸಂಗೀತ ಕಾರ್ಯಕ್ರಮವೊಂದರಿಂದ ಅಪಹರಿಸಿದ್ದರು. ಕಳೆದ ವರ್ಷ ಅಕ್ಟೋಬರ್‌ 7ರಂದು ನೋವಾ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದ ಮೇಲೆ ದಾಳಿ ನಡೆಸಿದ್ದ ಹಮಾಸ್‌ ಉಗ್ರರು ಹಲವರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಬರೋಬ್ಬರಿ 251 ಇಸ್ರೇಲಿ ಪ್ರಜೆಗಳು ಹಮಾಸ್‌ ಉಗ್ರ ಕೈಗೆ ಸಿಲುಕಿಕೊಂಡಿದ್ದು, ಅವರಲ್ಲಿ 116ಜನ ಸದ್ಯ ಗಾಜಾದಲ್ಲಿದ್ದಾರೆ. ಯೋಧರು ಸೇರಿದಂತೆ ಒಟ್ಟು 41 ಜನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

Exit mobile version