Israel-Hamas Conflict: ಹಮಾಸ್‌ ಉಗ್ರರ ಸೆರೆಯಲ್ಲಿದ್ದ ನಾಲ್ವರ ರಕ್ಷಣೆ; 265 ದಿನಗಳ ನರಕಯಾತನೆ ಬಳಿಕ ತಾಯ್ನಾಡಿಗೆ ವಾಪಾಸ್‌ - Vistara News

ವಿದೇಶ

Israel-Hamas Conflict: ಹಮಾಸ್‌ ಉಗ್ರರ ಸೆರೆಯಲ್ಲಿದ್ದ ನಾಲ್ವರ ರಕ್ಷಣೆ; 265 ದಿನಗಳ ನರಕಯಾತನೆ ಬಳಿಕ ತಾಯ್ನಾಡಿಗೆ ವಾಪಾಸ್‌

Israel-Hamas Conflict:ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25ವರ್ಷ), ಅಲ್ಮೋಗ್‌ ಮೀರ್‌ ಜಾನ್‌ (21ವರ್ಷ), ಆಂಡ್ರೆ ಕೊಜ್ಲೋವ್‌ (27ವರ್ಷ) ಹಾಗೂ ಶ್ಲೋಮಿ ಝಿವ್‌ (40ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹಮಾಸ್‌ ಉಗ್ರರು 2023ರ ಅಕ್ಟೋಬರ್‌ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

VISTARANEWS.COM


on

Israel-Hamas Conflict
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ರೇಲ್‌: ಹಮಾಸ್‌ ಉಗ್ರರು ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಇಸ್ರೇಲ್‌(Israel-Hamas Conflict) ಪ್ರಜೆಗಳನ್ನು ರಕ್ಷಿಸಲಾಗಿದೆ. ಇಸ್ರೇಲ್‌ ರಕ್ಷಣಾ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಾಲ್ವರನ್ನು ರಕ್ಷಿಸಿ ತಮ್ಮ ದೇಶಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿದೆ. ದುರಾದೃಷ್ಟವಶಾತ್‌ ಈ ರಕ್ಷಣಾ ಕಾರ್ಯಾಚಣೆ ವೇಳೆ ಒಬ್ಬ ಇಸ್ರೇಲ್‌ ಯೋಧ ಹುತಾತ್ಮನಾಗಿದ್ದಾರೆ.

ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25ವರ್ಷ), ಅಲ್ಮೋಗ್‌ ಮೀರ್‌ ಜಾನ್‌ (21ವರ್ಷ), ಆಂಡ್ರೆ ಕೊಜ್ಲೋವ್‌ (27ವರ್ಷ) ಹಾಗೂ ಶ್ಲೋಮಿ ಝಿವ್‌ (40ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹಮಾಸ್‌ ಉಗ್ರರು 2023ರ ಅಕ್ಟೋಬರ್‌ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

ಇದೀಗ ಬರೋಬ್ಬರಿ 265 ದಿನಗಳ ಬಳಿಕ ತಮ್ಮ ತಾಯ್ನಾಡಿಗೆ ಮರಳಿರುವ ನಾಲ್ವರ ಕುಟುಂಬಸ್ಥರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಇನ್ನು ರಕ್ಷಿಸಲ್ಪಿಟ್ಟಿರುವ ನಾಲ್ವರು ಒತ್ತೆಯಾಳುಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾವು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಇವರನ್ನು ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗಿದೆ.

ಇನ್ನು ಈ ಬಗ್ಗೆ ಇಸ್ರೇಲ್‌ ಅಧಿಕೃತ ಮಾಹಿತಿ ನೀಡಿದ್ದು, ಗಾಜಾದಲ್ಲಿ ಸೆರೆಯಾಗಿದ್ದ ನಾಲ್ವರನ್ನು ನಾವು ಸುರಕ್ಷಿತವಾಗಿ ರಕ್ಷಿಸಿದ್ದೇವೆ. ಕಾರ್ಯಾಚರಣೆ ವೇಳೆ ಕೆಲವು ಸಾವು ನೋವುಗಳು ಸಂಭವಿಸಿದೆ. ಇನ್ನು ರಕ್ಷಿಸಲ್ಪಟ್ಟ ನಾಲ್ವರನ್ನು ಕಳೆದ ವರ್ಷ ಹಮಾಸ್‌ ಉಗ್ರರು ಸಂಗೀತ ಕಾರ್ಯಕ್ರಮವೊಂದರಿಂದ ಅಪಹರಿಸಿದ್ದರು. ಕಳೆದ ವರ್ಷ ಅಕ್ಟೋಬರ್‌ 7ರಂದು ನೋವಾ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದ ಮೇಲೆ ದಾಳಿ ನಡೆಸಿದ್ದ ಹಮಾಸ್‌ ಉಗ್ರರು ಹಲವರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಬರೋಬ್ಬರಿ 251 ಇಸ್ರೇಲಿ ಪ್ರಜೆಗಳು ಹಮಾಸ್‌ ಉಗ್ರ ಕೈಗೆ ಸಿಲುಕಿಕೊಂಡಿದ್ದು, ಅವರಲ್ಲಿ 116ಜನ ಸದ್ಯ ಗಾಜಾದಲ್ಲಿದ್ದಾರೆ. ಯೋಧರು ಸೇರಿದಂತೆ ಒಟ್ಟು 41 ಜನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Working Hours: ಅತಿ ಹೆಚ್ಚು ಕೆಲಸದ ಸಮಯ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

Working Hours: ಜೀವನ ನಡೆಸುವುದು ಸುಲಭದ ಮಾತಲ್ಲ. ಮನೆಸಾಲ, ಆಸ್ಪತ್ರೆ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಅಕ್ಕ-ತಂಗಿಯ ಮದುವೆ ಹೀಗೆ ಯಾವುದ್ಯಾವುದೋ ಕಮಿಟ್‌ಮೆಂಟ್‌ಗಳಿಗೆ ತಮ್ಮ ಬದುಕನ್ನು ಒಡ್ಡಿಕೊಂಡಿರುವ ವ್ಯಕ್ತಿಗೆ ಕೆಲಸದ ಅವಶ್ಯಕತೆ ತೀರಾ ಇರುತ್ತದೆ. ಇನ್ನು ಸಂಬಳ ಬೇಕು ಅನ್ನುವವರಿಗೆ ಕಚೇರಿಯ ನೀತಿ, ನಿಯಮಗಳಿಗೂ ಬದ್ಧನಾಗಿರಬೇಕಾಗುತ್ತದೆ. ಆದರೆ ಈ ಕೆಲಸದ ಅವಧಿ ಒಂದೊಂದು ದೇಶದಲ್ಲಿ ಒಂದೊಂದು ರೀತಿ! ಅತಿ ಹೆಚ್ಚು ಕೆಲಸದ ಸಮಯ ಇರುವ ದೇಶಗಳ ಪಟ್ಟಿ ಇಲ್ಲಿದೆ.

VISTARANEWS.COM


on

Working Hours
Koo

ಬದುಕಿನ ಬಂಡಿ ಸಾಗಿಸುವುದು ಎನ್ನುವುದು ಸುಲಭದ ಕೆಲಸವಲ್ಲ. ಕಷ್ಟಪಟ್ಟು ಹಗಲು ರಾತ್ರಿ ಎನ್ನದೇ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಜನರು ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಅಥವಾ ರಾತ್ರಿ ವೇಳೆಗೆ ಮನೆಗೆ ಮರಳುವುದು ಸಹಜ. ಕೆಲಸದ ಅವಧಿ ಸಾಮಾನ್ಯವಾಗಿ 8ರಿಂದ 9 ಗಂಟೆ ಇರುತ್ತದೆ. ಇದು ಸಾಮಾನ್ಯ ಅವಧಿ. ಆದರೆ ಕೆಲಸದ ಅವಧಿ (Working Hours) ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇರುತ್ತದೆ. ಒಂದೊಂದು ಕೆಲಸಕ್ಕೂ ಒಂದೊಂದು ಅವಧಿ ಇರುತ್ತದೆ. ಕೆಲವು ಕೆಲಸಗಳು ದಿನದಲ್ಲಿ 7 ಗಂಟೆಗಳ ಕಾಲ ಇದ್ದರೆ, ಇನ್ನು ಕೆಲವು ಕೆಲಸಗಳು 8-9 ಗಂಟೆಗಳ ಕಾಲ ನಡೆಯುತ್ತದೆ.

ಇನ್ನು ದೇಶಗಳ ಬಗ್ಗೆ ಹೇಳುವುದಾದರೆ ಕೆಲವು ದೇಶಗಳಲ್ಲಿ ಹಣದುಬ್ಬರ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಹಾಗಾಗಿ ಅಂತಹ ದೇಶಗಳಲ್ಲಿ ಅತಿ ಹೆಚ್ಚು ಕೆಲಸದ ಅವಧಿಯನ್ನು ನಿಗದಿಪಡಿಸಿರುತ್ತಾರೆ. ಇದೀಗ 2024ರಲ್ಲಿ ವಿಶ್ವದ ಅತಿ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ ದೇಶಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಂಕಿಅಂಶಗಳ ಆಧಾರದ ಮೇಲೆ 2024ರಲ್ಲಿ ವಿಶ್ವದ ಅತಿ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ 10 ದೇಶಗಳ ಪಟ್ಟಿ ಹೀಗಿದೆ.

Working Hours

ಇದರಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ವಾರಕ್ಕೆ ಸರಾಸರಿ 52 ಗಂಟೆಗಳ ಕೆಲಸದೊಂದಿಗೆ ಅತಿ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಟಾಪ್‌ 10 ದೇಶಗಳ ಪಟ್ಟಿ ಇಲ್ಲಿದೆ.

  1. 1. ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ): ವಾರಕ್ಕೆ ಸರಾಸರಿ 52 ಗಂಟೆ

2. ಪಾಕಿಸ್ತಾನ: ವಾರಕ್ಕೆ 46.6 ಗಂಟೆ ಕೆಲಸ

3. ಭಾರತ: ವಾರಕ್ಕೆ 46 ಗಂಟೆ

4. ಬಾಂಗ್ಲಾದೇಶ: ವಾರಕ್ಕೆ 45.8 ಗಂಟೆ

5. ಈಜಿಪ್ಟ್: ವಾರಕ್ಕೆ 45.5 ಗಂಟೆ

6. ಚೀನಾ: ವಾರಕ್ಕೆ 45 ಗಂಟೆ

7. ಅಲ್ಜೀರಿಯಾ: ವಾರಕ್ಕೆ 44 ಗಂಟೆ

8. ಟರ್ಕಿ: ವಾರಕ್ಕೆ 43.7 ಗಂಟೆ

9. ನೈಜೀರಿಯಾ: ವಾರಕ್ಕೆ 43.4 ಗಂಟೆ

10. ಮೆಕ್ಸಿಕೊ: ವಾರಕ್ಕೆ 42.7 ಗಂಟೆ

ಇದನ್ನೂ ಓದಿ: Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪವಿತ್ರಾ ಗೌಡ ಮಾಜಿ ಪತಿಯಿಂದ ಕೇಸ್!

ಹಾಗಾಗಿ ವಿದೇಶಗಳಲ್ಲಿ ಕೆಲಸಕ್ಕೆ ಹೋಗಲು ಬಯಸುವವರು ಒಮ್ಮೆ ಈ ಪಟ್ಟಿಯ ಬಗ್ಗೆ ತಿಳಿದುಕೊಳ್ಳಿ. ಯಾಕೆಂದರೆ ಕೆಲಸದ ಅವಧಿ ಅತಿಯಾದರೆ ಅದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದರಿಂದ ನಿಮಗೆ ವಿಶ್ರಾಂತಿ ಸಿಗುವುದಿಲ್ಲ. ಇದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ. 50ನೇ ವಯಸ್ಸಿನಲ್ಲಿ ನೀವು ಮಧುಮೇಹ, ಹೃದ್ರೋಗ, ಬೊಜ್ಜಿನ ನಂತಹ ದೀರ್ಘಕಾಲದ ಸಮಸ್ಯೆಗೆ ಒಳಗಾಗಬಹುದು.

Continue Reading

ವಿದೇಶ

Suhas Subramanyam: ಅಮೆರಿಕದ ವರ್ಜೀನಿಯಾ ಡೆಮಾಕ್ರಟಿಕ್‌ ಪ್ರೈಮರಿಯಲ್ಲಿ ಬೆಂಗಳೂರು ಮೂಲದ ಸುಹಾಸ್‌ ಸುಬ್ರಮಣ್ಯಂ ಗೆಲುವು

Suhas Subramanyam: ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಕಣಕ್ಕಿಳಿಯುವ ಸಾಧ್ಯತೆ ಇದೆ. ಹೌದು, ಬೆಂಗಳೂರು ಮೂಲದ ಅಮೆರಿಕ ಪ್ರಜೆ ಸುಹಾಸ್‌ ಸುಬ್ರಮಣ್ಯಂ ಅವರು ವರ್ಜೀನಿಯಾದಿಂದ ಪ್ರಾಥಮಿಕ ಸುತ್ತಿನ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಆ ಮೂಲಕ ಸಾರ್ವತ್ರಿಕ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿದ್ದಾರೆ.

VISTARANEWS.COM


on

Suhas Subramanyam
Koo

ವಾಷಿಂಗ್ಟನ್‌: ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಕಣಕ್ಕಿಳಿಯುವ ಸಾಧ್ಯತೆ ಇದೆ. ಹೌದು, ಬೆಂಗಳೂರು ಮೂಲದ ಅಮೆರಿಕ ಪ್ರಜೆ ಸುಹಾಸ್‌ ಸುಬ್ರಮಣ್ಯಂ (Suhas Subramanyam) ಅವರು ವರ್ಜೀನಿಯಾದಿಂದ ಪ್ರಾಥಮಿಕ ಸುತ್ತಿನ ಚುನಾವಣೆಯಲ್ಲಿ (Virginia Democratic primaries) ಜಯ ಗಳಿಸಿದ್ದಾರೆ. ಆ ಮೂಲಕ ಸಾರ್ವತ್ರಿಕ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿದ್ದಾರೆ.

ಸುಹಾಸ್‌ ಅವರು ಇನ್ನೊಬ್ಬ ಭಾರತೀಯ-ಅಮೆರಿಕ ಪ್ರಜೆ ಕ್ರಿಸ್ಟಲ್‌ ಕೌಲ್‌ ಸೇರಿದಂತೆ 11 ಅಭ್ಯರ್ಥಿಗಳ ವಿರುದ್ಧ ಜಯ ಸಾಧಿಸುವ ಮೂಲಕ ಈ ಸಾಧನೆ ತೋರಿದ್ದಾರೆ. ವರ್ಜೀನಿಯಾದಲ್ಲಿ ಭಾರತೀಯ-ಅಮೆರಿಕ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಸುಹಾಸ್‌ ಅವರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಈ ಕ್ಷೇತ್ರವು ವಾಷಿಂಗ್ಟನ್‌ನ ಕೆಲವು ಉಪನಗರಗಳನ್ನು ಒಳಗೊಂಡಿದೆ. ʼʼಈ ಅಭೂತಪೂರ್ವ ಗೆಲುವು ಸಾಧಿಸಲು ನೆರವಾದ ಸ್ವಯಂಸೇವಕರು, ಕಾರ್ಯಕರ್ತರು, ಬೆಂಬಲಿಗರು ಮತ್ತು ಕುಟುಂಬಕ್ಕೆ ಧನ್ಯವಾದʼʼ ಎಂದು ಸುಹಾಸ್‌ ಹೇಳಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಈಗ ಐದು ಭಾರತೀಯ-ಅಮೆರಿಕನ್ನರು ಇದ್ದಾರೆ. ಕ್ಯಾಲಿಫೋರ್ನಿಯಾದಿಂದ ಅಮಿ ಬೆರಾ ಮತ್ತು ರೋ ಖನ್ನಾ, ವಾಷಿಂಗ್ಟನ್‌ನಿಂದ ಪ್ರಮೀಳಾ ಜಯಪಾಲ್, ಇಲಿನಾಯ್ಸ್‌ನಿಂದ ರಾಜಾ ಕೃಷ್ಣಮೂರ್ತಿ ಮತ್ತು ಮಿಚಿಗನ್‌ನಿಂದ ಶ್ರೀ ಥಾನೇದಾರ್ ಪ್ರತಿನಿಧಿಸುತ್ತಿದ್ದಾರೆ.

ಬೆಂಗಳೂರು ಮೂಲ

ವಿಶೇಷ ಎಂದರೆ ಸುಹಾಸ್‌ ಸುಬ್ರಮಣ್ಯಂ ಅವರು ಬೆಂಗಳೂರು ಮೂಲದವರು. 37 ವರ್ಷದ ಅವರ ಪಾಲಕರು ಬೆಂಗಳೂರು ಮತ್ತು ಚೆನ್ನೈ ಮೂಲದವರು. ಸುಹಾಸ್‌ ಹೂಸ್ಟನ್‌ನಲ್ಲಿ ಜನಿಸಿದರು. ವಕೀಲರಾದ ಸುಹಾಸ್‌ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ತಂತ್ರಜ್ಞಾನ ಸಲಹೆಗಾರರಾಗಿದ್ದರು. ಸೈಬರ್ ಭದ್ರತೆ ಮತ್ತು ಸರ್ಕಾರಿ ಸಂಸ್ಥೆಗಳನ್ನು ಆಧುನೀಕರಿಸುವ ಕಾರ್ಯದಲ್ಲಿ ಕೈ ಜೋಡಿಸಿದ್ದರು. 2019ರಲ್ಲಿ ವರ್ಜಿನಿಯಾದ ಸಾಮಾನ್ಯ ಸಭೆಗೆ ಆಯ್ಕೆಯಾಗುವ ಮೂಲಕ ಆ ಸ್ಥಾನಕ್ಕೆ ನೇಮಕವಾದ ಮೊದಲ ಭಾರತೀಯ ಸಂಜಾತ, ದಕ್ಷಿಣ ಏಷ್ಯಾದ ಮತ್ತು ಹಿಂದು ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇದನ್ನೂ ಓದಿ: Nikki Haley: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆ; ಟ್ರಂಪ್‌ ವಿರುದ್ಧ ಭಾರತೀಯ ಮೂಲದ ನಿಕ್ಕಿ ಹ್ಯಾಲೆಗೆ ಮೊದಲ ಜಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ವಿವೇಕ್​ ರಾಮಸ್ವಾಮಿ

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಮುಂದಾಗಿದ್ದ ಭಾರತೀಯ ಮೂಲದ ಬಯೋಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಕೆಲವು ತಿಂಗಳ ಹಿಂದೆ ರೇಸ್‌ನಿಂದ ಹೊರಗೆ ಬಂದಿದ್ದು, ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.

ಭಾರತ ಮೂಲದ ಅಮೆರಿಕನ್​ ಪ್ರಜೆ, ಆರೋಗ್ಯ ಮತ್ತು ಬಯೋಟೆಕ್​ ವಲಯದಲ್ಲಿ ಖ್ಯಾತ ಉದ್ಯಮಿ, ಲೇಖಕ ವಿವೇಕ್​ ರಾಮಸ್ವಾಮಿ ಈ ಹಿಂದೆ ತಾವು ಅಭ್ಯರ್ಥಿ ಎಂದು ಪ್ರಕಟಿಸಿದ್ದರು. ಆದರೆ ಅಯೋವಾದ ಲೀಡ್‌ ಆಫ್ ಕಾಕಸ್‌ಗಳಲ್ಲಿ ಬೆಂಬಲ ದೊರೆಯದ ಪರಿಣಾಮ ಶ್ವೇತಭವನದ ಸ್ಪರ್ಧೆಯಿಂದ ಹೊರಗುಳಿದಿದ್ದರು.

ಅಮೆರಿಕದ ಅತ್ಯಂತ ಹಳೇ ಪಕ್ಷವಾಗಿರುವ ರಿಪಬ್ಲಿಕನ್​ ಪಾರ್ಟಿ ಸದಸ್ಯರಾಗಿರುವ ವಿವೇಕ್​ ರಾಮಸ್ವಾಮಿ ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡುತ್ತ, “ಅಮೆರಿಕ ದೇಶದ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಾನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಬಯಸುತ್ತೇನೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು. ಹಾಗೇ ಬಳಿಕ ಟ್ವೀಟ್ ಮಾಡಿದ್ದ ಅವರು “ನಾವು ವೈವಿದ್ಯತೆಯನ್ನು ಪ್ರೀತಿಸಿ ಒಪ್ಪಿಕೊಳ್ಳುವ ಭರದಲ್ಲಿ 250 ವರ್ಷಗಳ ಹಿಂದಿನ, ಒಗ್ಗಟ್ಟಿನ ಸಿದ್ಧಾಂತಗಳನ್ನೇ ಮರೆತಿದ್ದೇವೆ. ಅದನ್ನು ಮತ್ತೆ ಪುನರುಜ್ಜೀವನಗೊಳಿಸಲು ನಾನು ಅಧ್ಯಕ್ಷನಾಗಲು ಬಯಸುತ್ತೇನೆ” ಎಂದಿದ್ದರು.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಭಯೋತ್ಪಾದಕನಿಗೆ ಶ್ರದ್ಧಾಂಜಲಿ; ಕೆನಡಾ ಸಂಸತ್ ನ ಮೂರ್ಖತನ

ಖಲಿಸ್ತಾನಿ ಉಗ್ರರಿಗೆ ಕೆನಡಾ ಹುಲುಸಾದ ನೆಲ. ಇಲ್ಲಿರುವ ಭಾರಿ ಪ್ರಮಾಣದ ಸಿಕ್ಖ್‌ ವಲಸಿಗರಲ್ಲಿ ಹಲವು ಪ್ರತ್ಯೇಕತಾವಾದಿಗಳು ಇದರ ಪೋಷಕರು. ಈ ಶ್ರೀಮಂತರ ಹಣಕ್ಕೆ ಆಸೆಪಡುತ್ತಿರುವ ಕೆನಡಾದ ಆಡಳಿತಗಾರರು ಈ ಖಲಿಸ್ತಾನಿ ಚಳವಳಿಯ ಪೋಷಕರೂ ಆಗಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಕೆನಡಾ ಸಂಸತ್ ನಲ್ಲಿ ಖಲಿಸ್ತಾನಿ ಉಗ್ರನಿಗೆ ಶ್ರದ್ಧಾಂಜಲಿ ಅರ್ಪಿಸಿರುವುದು ಖಂಡನೀಯ.

VISTARANEWS.COM


on

Canada
Koo

ಕೆನಡಾದಲ್ಲಿದ್ದ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ಖಲಿಸ್ತಾನಿ ಪರ ಹೋರಾಟಗಾರ (Khalistani Terrorist) ಹರ್ದೀಪ್‌ ಸಿಂಗ್‌ ನಿಜ್ಜಾರ್‌ (Nijjar Killing Case)ನ ಹತ್ಯೆಗೈದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಮಂಗಳವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ಒಂದು ನಿಮಿಷ ಮೌನ ಆಚರಿಸಿ ಆತನಿಗೆ ಗೌರವ ಸಲ್ಲಿಸಿದೆ. ಕಳೆದ ವರ್ಷ ಜೂನ್‌ 18ರಂದು ಕೆನಡಾದ ಸುರ‍್ರೆ ನಗರದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ. ಈ ಘಟನೆ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಎದ್ದು ನಿಂತು, ಮೌನ ಆಚರಿಸಿತು. ಇದೊಂದು ವಿಚಿತ್ರ ಬೆಳವಣಿಗೆ. ಹಾಗೆಯೇ ಕೆನಡಾದ ಉದ್ಧಟತನಕ್ಕೆ ಇದು ಸಾಕ್ಷಿ ಕೂಡ. ಭಯೋತ್ಪಾದನೆ ಎಂದರೇನು ಎಂದು ಗೊತ್ತಿಲ್ಲದ, ಖಲಿಸ್ತಾನಿ ಉಗ್ರವಾದದ ರುಚಿ ಕಂಡಿಲ್ಲದ ಕೆನಡಾದಂಥ ದೇಶದ ಮೂರ್ಖ ಆಡಳಿತಗಾರರು ಮಾತ್ರ ಮಾಡಬಹುದಾದ ಸಂಗತಿ ಇದು.

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆಯನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಕೆನಡಾದ ಸುರ‍್ರೆ ನಗರದಲ್ಲಿ ಕೊಲೆ ಮಾಡಲಾಗಿತ್ತು. ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನ ಹತ್ಯೆ ನಡೆದಿತ್ತು. ಪಂಜಾಬ್‌ನಲ್ಲಿ ಅರ್ಚಕರೊಬ್ಬರ ಕೊಲೆಗೆ ಪಿತೂರಿ ನಡೆಸಿರುವುದು, ಮೂಲಭೂತವಾದದ ಪ್ರಸರಣ ಸೇರಿ ನಾಲ್ಕು ಪ್ರಕರಣಗಳಲ್ಲಿ ಎನ್‌ಐಎ ಈತನ ವಿರುದ್ಧ ತನಿಖೆ ನಡೆಸುತ್ತಿದೆ. ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಇಂಥ ಉಗ್ರನ ಹತ್ಯೆಯಾದರೆ ಕೆನಡಾಕ್ಕೆ ಯಾಕೆ ಹೊಟ್ಟೆನೋವು?

ಖಲಿಸ್ತಾನಿ ಉಗ್ರರಿಗೆ ಕೆನಡಾ ಹುಲುಸಾದ ನೆಲ. ಇಲ್ಲಿರುವ ಭಾರಿ ಪ್ರಮಾಣದ ಸಿಕ್ಖ್‌ ವಲಸಿಗರಲ್ಲಿ ಹಲವು ಪ್ರತ್ಯೇಕತಾವಾದಿಗಳು ಇದರ ಪೋಷಕರು. ಈ ಶ್ರೀಮಂತರ ಹಣಕ್ಕೆ ಆಸೆಪಡುತ್ತಿರುವ ಕೆನಡಾದ ಆಡಳಿತಗಾರರು ಈ ಖಲಿಸ್ತಾನಿ ಚಳವಳಿಯ ಪೋಷಕರೂ ಆಗಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ನಿಜ್ಜಾರ್‌ ಹತ್ಯೆಗೂ ಮೊದಲು ಖಲಿಸ್ತಾನಿ ಉಗ್ರ, ಬಂಧಿತ ಅಮೃತ್‌ಪಾಲ್‌ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್‌ ಸಿಂಗ್‌ ಖಂಡಾ ಲಂಡನ್‌ನಲ್ಲಿ ಮೃತಪಟ್ಟಿದ್ದ. ಅಮೃತ್‌ಪಾಲ್‌ ಸಿಂಗ್‌ ಬಂಧನದ ಬಳಿಕ ಕೆನಡಾದಲ್ಲಿರುವ ಖಲಿಸ್ತಾನಿಗಳು ಇನ್ನಷ್ಟು ತೀವ್ರವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದು, ಭಾರತೀಯ ರಾಯಭಾರಿಗಳನ್ನು ಬೆದರಿಸುವುದು ಇವರ ಮುಖ್ಯ ಉದ್ಯೋಗ.

ಭಾರತದಲ್ಲಿ ದಶಕಗಳ ಹಿಂದೆ ಉಲ್ಬಣಗೊಂಡು ಇದೀಗ ಉಪಶಮನಗೊಂಡಿರುವ ಹುಣ್ಣನ್ನು ಕೆರೆದು ಮತ್ತೆ ಉಲ್ಬಣಗೊಳಿಸುವ ಕೆಲಸವನ್ನು ಕೆನಡಾ ಮಾಡುತ್ತಿದೆ. ಒಂದು ಕಾಲದಲ್ಲಿ ಅಮೃತಸರದ ಸ್ವರ್ಣಮಂದಿರವನ್ನು ಅಪವಿತ್ರಗೊಳಿಸಿದ, ಖಲಿಸ್ತಾನ್‌ ಚಳವಳಿಯ ಹೆಸರಲ್ಲಿ ಪಂಜಾಬ್‌ನ ಯುವಜನತೆಯ ಮನಸ್ಸುಗಳನ್ನು ಕೆಡಿಸಿ ಸರ್ವನಾಶ ಮಾಡಿದ ಭಿಂದ್ರಾನ್‌ವಾಲೆಯ ಸಂತಾನಗಳು ಇಂದಿಗೂ ಕೆನಡಾದ ನೆಲದಲ್ಲಿ ಆಶ್ರಯ ಪಡೆದಿವೆ. ಇಂಥ ಡಜನ್‌ಗೂ ಹೆಚ್ಚು ಉಗ್ರರ ಹೆಸರನ್ನು ಭಾರತ ಸರ್ಕಾರ ಕೆನಡಾಗೆ ನೀಡಿದ್ದು, ಅವರನ್ನು ತಮಗೊಪ್ಪಿಸುವಂತೆ ಹೇಳಿದೆ. ಆದರೆ ಅವರು ಕೆನಡಾದ ಪ್ರಜೆಗಳೆಂದೂ, ಅವರ ಪ್ರತಿಭಟನೆಯ ಸ್ವಾತಂತ್ರ್ಯಕ್ಕೆ ತಾನು ಧಕ್ಕೆ ತರುವುದಿಲ್ಲವೆಂದೂ ಕೆನಡಾ ಗಳುಹುತ್ತಲೇ ಇದೆ. ʼಭಾರತ ತನ್ನ ಸಾರ್ವಭೌಮತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆʼ ಎಂದು ಪ್ರಲಾಪಿಸುತ್ತಿರುವ ಈ ದೇಶದ ಭಂಡ ನಾಯಕತ್ವದ ವೈಫಲ್ಯದಿಂದಾಗಿ, ಕಳೆದ ವರ್ಷ ಉಭಯ ದೇಶಗಳ ರಾಜತಾಂತ್ರಿಕ ಬಾಂಧವ್ಯವೂ ಹಳಸಿತ್ತು. ಪರಸ್ಪರರ ಹೈಕಮಿಶನರ್‌ಗಳನ್ನು ಹೊರಗೆ ಕಳಿಸುವವರೆಗೆ ಅದು ಹೋಗಿತ್ತು. ಇಲ್ಲೂ ಕೆನಡಾದ್ದೇ ಉಪದ್ವ್ಯಾಪ.

ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ಮತ್ತು ಇತರ ಆಡಳಿತಗಾರರು ಅರ್ಥ ಮಾಡಿಕೊಳ್ಳಬೇಕಾದ್ದು ಏನೆಂದರೆ, ಖಲಿಸ್ತಾನಿ ಹಿಂಸಾವಾದಿಗಳನ್ನು ಮುಂದಿಟ್ಟುಕೊಂಡು ಹೊರಟರೆ ಆ ದೇಶವೇ ಹಿಂಸೆಯ ಫಲವನ್ನು ಉಣ್ಣಬೇಕಾದೀತು. ಭಯೋತ್ಪಾದಕ ಹರ್‌ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಭಾರತ ಈಗಾಗಲೇ ಪ್ರತಿಪಾದಿಸಿದೆ. ಭಯೋತ್ಪಾದಕನಿಗೆ ಗೌರವ ಸಲ್ಲಿಸುವ ಮೂಲಕ ಕೆನಡಾ ಯಾವ ಸಂದೇಶ ನೀಡಹೊರಟಿದೆ? ಆ ದೇಶವೇ ಹೇಳಬೇಕು. ಉಭಯ ದೇಶಗಳ ನಡುವೆ ಶಾಂತಿ- ಸೌಹಾರ್ದ ಸ್ಥಾಪಿಸಬಯಸುವವರು ಮಾಡುವ ಕೆಲಸವಂತೂ ಇದಲ್ಲ.

ಇದನ್ನೂ ಓದಿ: Hardeep Singh Nijjar: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯಾಗಿ ಒಂದು ವರ್ಷ; ಮೌನ ಆಚರಿಸಿ ಗೌರವ ಸಲ್ಲಿಸಿದ ಕೆನಡಾ ಸಂಸತ್ತು

Continue Reading

ದೇಶ

Hajj Pilgrims: ಬಿಸಿಗಾಳಿ, ಬಿಸಿಲಿನ ಹೊಡೆತ; ಹಜ್‌ ಯಾತ್ರೆ ಕೈಗೊಂಡ 68 ಭಾರತೀಯರ ಸಾವು

Hajj Pilgrims: Hajj Pilgrims: ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಗರಿಷ್ಠ ತಾಪಮಾನವು 50 ಡಿಗ್ರಿ ಸೆಲ್ಸಿಯಸ್​ ತಲುಪಿದ್ದು, ಹಜ್‌ ಯಾತ್ರೆ ಕೈಗೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬಿಸಿಲಿನ ಹೊಡೆತಕ್ಕೆ ಸಿಲುಕಿ ಸುಮಾರು 550 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಶಾಖ ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವರಲ್ಲಿ ಭಾರತೀಯರೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

VISTARANEWS.COM


on

Hajj Pilgrims
Koo

ಮೆಕ್ಕಾ: ಸೌದಿ ಅರೇಬಿಯಾದ (Saudi Arabia) ಮೆಕ್ಕಾದಲ್ಲಿರುವ ಮುಸ್ಲಿಮರ ಪವಿತ್ರ ಹಜ್‌ ಯಾತ್ರೆ ಕೈಗೊಂಡಿರುವವರಿಗೆ ಬೇಸಿಗೆಯ ಬಿಸಿಲು, ಬಿಸಿಗಾಳಿಯ ಹೊಡೆತವು ಮಾರಣಾಂತಿಕವಾಗಿ ಪರಿಣಮಿಸಿದೆ. ಬಿಸಿಗಾಳಿ ಸಂಬಂಧಿತ ಕಾಯಿಲೆಯಿಂದ ಮೆಕ್ಕಾದಲ್ಲಿ (Mecca) 550ಕ್ಕೂ ಅಧಿಕ ಯಾತ್ರಿಕರು ಮೃತಪಟ್ಟಿದ್ದು, ಮೃತರಲ್ಲಿ ಭಾರತದ 68 ಯಾತ್ರಿಕರು (Hajj Pilgrims) ಇದ್ದಾರೆ ಎಂದು ಸೌದಿ ಅರೇಬಿಯಾದ ರಾಜತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಭಾರತದ 68 ಯಾತ್ರಿಕರು ಮೃತಪಟ್ಟಿರುವುದು ದೃಢವಾಗಿದೆ. ಇವರಲ್ಲಿ ಕೆಲವು ಜನ ವಯೋಸಹಜ ಕಾಯಿಲೆಯಿಂದ ಮೃತಪಟ್ಟರೆ, ಹೆಚ್ಚಿನ ಜನ ಉಷ್ಣಗಾಳಿ ಸಂಬಂಧಿತ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ” ಎಂಬುದಾಗಿ ರಾಜತಾಂತ್ರಿಕ ಅಧಿಕಾರಿಗಳು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಎಲ್ಲ ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಈ ಕಾರಣಕ್ಕೆ ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಸೋಮವಾರ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.

ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು, 60 ಮಂದಿ ಜೋರ್ಡಾನ್‌ನವರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ. ಇನ್ನು ತನ್ನ ದೇಶದ ಐವರು ಯಾತ್ರಿಕರು ಸಾವಿಗೀಡಾಗಿದ್ದಾರೆ ಎಂದು ಇರಾನ್ ಹೇಳಿದ್ದು, ಕಾರಣವನ್ನು ಬಹಿರಂಗಪಡಿಸಿಲ್ಲ. ಸೆನೆಗಲ್ ಮೂರು ಸಾವುಗಳನ್ನು ವರದಿ ಮಾಡಿದೆ. ಹಜ್ ಸಮಯದಲ್ಲಿ 136 ಇಂಡೋನೇಷ್ಯಾದ ಯಾತ್ರಿಕರು ಮತಪಟ್ಟಿದ್ದಾರೆ, ಇದರಲ್ಲಿ ಕನಿಷ್ಠ ಮೂವರು ಶಾಖದ ಹೊಡೆತದಿಂದ ನಿಧನರಾಗಿದ್ದಾರೆ ಎಂದು ಅಲ್ಲಿನ ಅದಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೌದಿ ಅರೇಬಿಯಾದ ಅಧಿಕಾರಿಗಳು ಶಾಖದ ಒತ್ತಡದಿಂದ ಬಳಲುತ್ತಿರುವ 2,000ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ವರದಿ ಹೇಳಿದೆ. ಕಳೆದ ವರ್ಷ ಇಲ್ಲಿ ವಿವಿಧ ದೇಶಗಳಲ್ಲಿ ಕನಿಷ್ಠ 240 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ಪೈಕಿ ಹೆಚ್ಚಿನವರು ಇಂಡೋನೇಷ್ಯಾದವರು. ಈ ವರ್ಷ ಸುಮಾರು 18,00,000 ಯಾತ್ರಾರ್ಥಿಗಳು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಆ ಪೈಕಿ 16,00,000 ವಿದೇಸಿಗರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕೃತ ಹಜ್ ವೀಸಾ ದುಬಾರಿಯಾದ ಕಾರಣ ಪ್ರತಿವರ್ಷ ಸಾವಿರಾರು ಯಾತ್ರಿಕರು ಅಕ್ರಮವಾಗಿಯೂ ಇಲ್ಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ: ಹಜ್‌ ಯಾತ್ರೆಯಲ್ಲಿ ಪಾಕಿಸ್ತಾನದ ಜೇಬುಗಳ್ಳರ ಕಾಟ; ಸೌದಿ ಅರೇಬಿಯಾ ಖಡಕ್ ವಾರ್ನಿಂಗ್‌

Continue Reading
Advertisement
CM Siddaramaiah
ಪ್ರಮುಖ ಸುದ್ದಿ16 mins ago

CM Siddaramaiah: ಕರ್ನಾಟಕದಲ್ಲಿ ವಾಸಿಸುತ್ತಿರುವ ಪರ ಭಾಷಿಕರು ಕನ್ನಡ ಕಲಿಯಲೇಬೇಕು: ಸಿದ್ದರಾಮಯ್ಯ

Tumkur DC Shubha Kalyan inaugurated the Janaspandana programme in Koratagere
ತುಮಕೂರು26 mins ago

Koratagere News: ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮ; ಡಿಸಿ ಶುಭ‌ ಕಲ್ಯಾಣ್

Power cut There will be power outage in various parts of Bengaluru on June 22
ಕರ್ನಾಟಕ28 mins ago

Power Cut: ಬೆಂಗಳೂರಿನ ವಿವಿಧ ಕಡೆ ಜೂ. 22ರಂದು ವಿದ್ಯುತ್‌ ವ್ಯತ್ಯಯ

Arvind Kejriwal
ದೇಶ29 mins ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್;‌ ಕೊನೆಗೂ ಸಿಕ್ಕಿತು ಜಾಮೀನು

Vijayanagara DC MS Diwakar meeting with officials of various departments
ವಿಜಯನಗರ31 mins ago

Vijayanagara News: ಜೂ. 21ರಂದು ಮುಖ್ಯಮಂತ್ರಿಗಳಿಂದ ಕೆಡಿಪಿ ಸಭೆ; ಡಿಸಿ ಎಂ.ಎಸ್.ದಿವಾಕರ್‌

Action will be taken to ensure that the Anganwadi workers do not suffer in any way says Minister Lakshmi Hebbalkar
ಬೆಂಗಳೂರು36 mins ago

Lakshmi Hebbalkar: ಲಕ್ಷ್ಮೀ ಹೆಬ್ಬಾಳಕರ್ ಭರವಸೆ; ಅಂಗನವಾಡಿ ನೌಕರರ ಮುಷ್ಕರ ವಾಪಸ್‌

Mecca Heatwave Death
ಪ್ರಮುಖ ಸುದ್ದಿ1 hour ago

Mecca Heatwave Death : ಮೆಕ್ಕಾದಲ್ಲಿ ನಿಧನ ಹೊಂದಿದ ಹಜ್​ ಯಾತ್ರಿಗಳಿಗೆ ಅಲ್ಲೇ ಸಂಸ್ಕಾರ; ಹಜ್​ ಕಮಿಟಿ ಮಾಹಿತಿ

CM Siddaramaiah
ಕರ್ನಾಟಕ1 hour ago

CM Siddaramaiah: ಪೆಟ್ರೋಲ್‌ ಬೆಲೆ ಏರಿಸಿದ್ದು ಗ್ಯಾರಂಟಿಗೋ? ಅಭಿವೃದ್ಧಿಗೋ? ಸಿದ್ದರಾಮಯ್ಯ ಹೀಗಂತಾರೆ!

Virat kohli
ಪ್ರಮುಖ ಸುದ್ದಿ2 hours ago

Virat kohli : ಕೊಹ್ಲಿಯನ್ನು ಮತ್ತೆ ಸ್ವಾರ್ಥಿ ಎಂದು ದೂರಿದ ಪಾಕಿಸ್ತಾನದ ಮೊಹಮ್ಮದ್ ಹಫೀಜ್​

Darshan Arrested
ಕರ್ನಾಟಕ2 hours ago

Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ2 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌