Site icon Vistara News

Israel-Hamas War: ಪುತ್ರರ ವೀರ್ಯವನ್ನು ಸಂಗ್ರಹಿಸಿಡುತ್ತಿರುವ ಇಸ್ರೇಲ್ ಪೋಷಕರು! ಯಾಕೆ ಹೀಗೆ?

Israel-Hamas War

ಹಮಾಸ್ ದಾಳಿಯಿಂದ (Israel-Hamas War) ಮೃತಪಟ್ಟಿರುವ ಪುತ್ರರ ವೀರ್ಯವನ್ನು (sperm of the sons) ಇಸ್ರೇಲ್ ನ ಹೆಚ್ಚಿನ ದುಃಖಿತ ಪೋಷಕರು (parents demand) ಕೇಳುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಸೈನಿಕರ (soldier) ಪೋಷಕರಾಗಿದ್ದಾರೆ. ತಮ್ಮ ಪುತ್ರರ ಶವವನ್ನು ಫ್ರೀಜ್ ಮಾಡಲು ಅನೇಕರು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ 170ಕ್ಕೂ ಹೆಚ್ಚು ಸೈನಿಕರ ಮತ್ತು ನಾಗರಿಕರ ದೇಹದಿಂದ ವೀರ್ಯವನ್ನು ಸಂಗ್ರಹಿಸಿ ಇಡಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಸಂಗ್ರಹಿಸಿದ ವೀರ್ಯಕ್ಕಿಂತ ಇದು 15 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ತಮ್ಮ ಮಕ್ಕಳ ವೀರ್ಯದಿಂದ ಮುಂದೆ ಗರ್ಭಿಣಿಯಾಗ ಬಯಸುವ ಮಹಿಳೆಯರಿಂದ ಪೋಷಕರು ಮಕ್ಕಳನ್ನು ಪಡೆಯಲು ಅನೇಕರು ಇದರ ಮೊರೆ ಹೋಗಿದ್ದಾರೆ.

ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕ ಇಸ್ರೇಲ್‌ನಲ್ಲಿ ಕೆಲವು ನಿಯಮಗಳನ್ನು ಸಡಿಲಿಸಲಾಗಿದೆ. ಇದೀಗ ಸೇನಾ ಅಧಿಕಾರಿಗಳೇ ಮೃತಪಟ್ಟ ಸೈನಿಕರ ವೀರ್ಯವನ್ನು ಸಂಗ್ರಹಿಸಿ ಇಡಬೇಕೆ ಎಂದು ಪೋಷಕರನ್ನು ಸಂಪರ್ಕಿಸಿ ಕೇಳುತ್ತಿದ್ದಾರೆ.

2024ರ ಏಪ್ರಿಲ್ 6 ರಂದು ಗಾಜಾ ಪಟ್ಟಿಯಲ್ಲಿ 20 ವರ್ಷದ ರೀಫ್ ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದಾನೆ. ರೀಫ್ ನ ಮನೆಬಾಗಿಲಿಗೆ ಬಂದ ಸೇನಾಧಿಕಾರಿಗಳು ಪೋಷಕರ ಬಳಿ ರೀಫ್ ನ ವೀರ್ಯವನ್ನು ಹಿಂಪಡೆಯಲು ಇನ್ನೂ ಸಮಯವಿದೆ. ಕುಟುಂಬವು ಇದಕ್ಕೆ ಆಸಕ್ತಿ ಹೊಂದಿದೆಯೇ ಎಂದು ಕೇಳಿದ್ದಾರೆ. ಇದಕ್ಕೆ ರೀಫ್ ನ ತಂದೆ ತಕ್ಷಣವೇ ಪ್ರತಿಕ್ರಿಯಿಸಿ ರೀಫ್ ಜೀವನವನ್ನು ಪೂರ್ಣವಾಗಿ ಬದುಕಲಿ ಎಂದು ಹೇಳಿದರು. ರೀಫ್ ಮಕ್ಕಳನ್ನು ಪ್ರೀತಿಸುತ್ತಿದ್ದ, ಸ್ವಂತ ಮಕ್ಕಳನ್ನು ಬಯಸಿದ್ದ. ಆದರೆ ಆತನಿಗೆ ಹೆಂಡತಿ ಅಥವಾ ಗೆಳತಿ ಇಲ್ಲ ಎಂದು ಹೇಳಿಕೊಂಡಿದ್ದರು.

ಮಗನ ವೀರ್ಯ ರಕ್ಷಣೆಗೆ ಪೋಷಕರು ಮುಂದಾಗಿದ್ದರಿಂದ ಆತನ ಮಗುವಿಗೆ ಜನ್ಮ ನೀಡಲು ಹಲವಾರು ಮಹಿಳೆಯರು ಮುಂದೆ ಬಂದಿರುವುದಾಗಿ ರೀಫ್ ಪೋಷಕರು ಹೇಳಿದ್ದಾರೆ. ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ದಾಳಿಯ ಅನಂತರ ವೀರ್ಯವನ್ನು ಸಂರಕ್ಷಿಸಲು ಬಯಸುವ ಕುಟುಂಬಗಳ ಸಂಖ್ಯೆ ಬೆಳೆಯುತ್ತಿದೆ. ಈ ದಾಳಿಯಲ್ಲಿ ಸುಮಾರು 1,200 ಜನರು ಕೊಲ್ಲಲ್ಪಟ್ಟರು ಮತ್ತು 251ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಮಾಡಲಾಗಿತ್ತು.

ಹಮಾಸ್ ವಿರುದ್ಧ ಇಸ್ರೇಲ್ ಗಾಜಾದಲ್ಲಿ ನಡೆಸಿದ ಪ್ರಮುಖ ಮಿಲಿಟರಿ ಕಾರ್ಯಾಚರಣೆಯಲ್ಲಿ 39,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. ಸುಮಾರು 400 ಇಸ್ರೇಲಿಗಳು ಸಾವನ್ನಪ್ಪಿದ್ದಾರೆ. ಇಸ್ರೇಲಿ ಆರೋಗ್ಯ ಸಚಿವಾಲಯದ ಪ್ರಕಾರ ಅಕ್ಟೋಬರ್ 7 ರಿಂದ ನಾಗರಿಕರು ಮತ್ತು ಸೈನಿಕರ ಸುಮಾರು 170 ಯುವಕರಿಂದ ವೀರ್ಯವನ್ನು ಪಡೆಯಲಾಗಿದೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಿಸುಮಾರು 15 ಪಟ್ಟು ಹೆಚ್ಚು.


ಈ ಪ್ರಕ್ರಿಯೆಯಲ್ಲಿ ಮೃತ ವ್ಯಕ್ತಿಯ ವೃಷಣದಲ್ಲಿ ಛೇದನವನ್ನು ಮಾಡಿ ಅಂಗಾಂಶದ ಒಂದು ಸಣ್ಣ ತುಂಡನ್ನು ತೆಗೆದು ಜೀವಂತ ವೀರ್ಯ ಕೋಶಗಳನ್ನು ಪ್ರಯೋಗಾಲಯದಲ್ಲಿ ಪ್ರತ್ಯೇಕಿಸಿ ಮತ್ತು ಫ್ರೀಜ್ ಮಾಡಲಾಗುತ್ತದೆ. ವ್ಯಕ್ತಿ ಮೃತಪಟ್ಟ 24 ಗಂಟೆಗಳ ಒಳಗೆ ಇದನ್ನು ಮಾಡಿದರೆ ಯಶಸ್ಸಿನ ಪ್ರಮಾಣ ಹೆಚ್ಚಾಗಿರುತ್ತದೆ. 72 ಗಂಟೆಗಳವರೆಗೆ ಇದನ್ನು ಮಾಡಲು ಅವಕಾಶವಿದೆ.

ಅಕ್ಟೋಬರ್‌ನಲ್ಲಿ ಇಸ್ರೇಲಿ ಆರೋಗ್ಯ ಸಚಿವಾಲಯವು ಪೋಷಕರಿಗೆ ಇದರ ಕಾರ್ಯವಿಧಾನವನ್ನು ಕೋರಲು ನ್ಯಾಯಾಲಯದ ಆದೇಶವನ್ನು ಪಡೆಯುವ ಅಗತ್ಯವನ್ನು ಮನ್ನಾ ಮಾಡಿದೆ. ಐಡಿಎಫ್ ಇತ್ತೀಚಿನ ವರ್ಷಗಳಲ್ಲಿ ದುಃಖಿತ ಪೋಷಕರಿಗೆ ಅದನ್ನು ನೀಡುವಲ್ಲಿ ಮುಂದಾಗಿದೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾ ದಂಗೆ ಹಿಂದೆ ಇದ್ಯಾ ಪಾಕ್‌ ISI ಕೈವಾಡ? ಶೇಖ್‌ ಹಸೀನಾ ಪುತ್ರ ಹೇಳಿದಿಷ್ಟು!

ವೀರ್ಯವನ್ನು ಸಂಗ್ರಹಿಸಿಡುವುದು ಸುಲಭವಾಗಿದ್ದರೂ ಮಗುವನ್ನು ಪಡೆಯಲು ಅದನ್ನು ಬಳಸಲು ಬಯಸುವ ವಿಧವೆಯರು ಅಥವಾ ಪೋಷಕರು ನ್ಯಾಯಾಲಯದಲ್ಲಿ ಅದಕ್ಕೆ ದಾಖಲೆಗಳನ್ನು ಸಲ್ಲಿಸಿ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಈ ಪ್ರಕ್ರಿಯೆಯು ಕೆಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಇದು ಸಮಯವಾಗಿರಲಿದೆ ಎನ್ನುತ್ತಾರೆ ದುಃಖಿತ ಪೋಷಕರು.

Exit mobile version