Site icon Vistara News

Israel Palestine War: ಸಿರಿಯಾದ ಎರಡು ಏರ್‌ಪೋರ್ಟ್‌ಗಳನ್ನು ಧ್ವಂಸ ಮಾಡಿದ ಇಸ್ರೇಲ್

Israel IDF strikes two airports in Syria Says Reports

ನವದೆಹಲಿ: ಗಾಜಾ ಪಟ್ಟಿಯಲ್ಲಿನ (Gaza Strip) ಹಮಾಸ್ ಬಂಡುಕೋರರ (Hamas Attack on Israel) ಜತೆ ಕಾದಾಡುತ್ತಿರುವ ಇಸ್ರೇಲ್, ನೆರೆಯ ಸಿರಿಯಾ ದೇಶದ ಎರಡು ವಿಮಾನ ನಿಲ್ದಾಣಗಳ ಮೇಲೆ ದಾಳಿ ಮಾಡಿದೆ(Attack on Syria Airports). ಈ ವಿಷಯವನ್ನು ಸಿರಿಯಾ ಸರ್ಕಾರಿ ಟಿವಿ ವರದಿ ಮಾಡಿದ್ದು, ಇಸ್ರೇಲಿ ಸೇನೆಯು ಡಮಾಸ್ಕಸ್ ಮತ್ತು ಅಲೆಪ್ಪೊ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಟೆಲಿಗ್ರಾಮ್‌ನಲ್ಲಿ ಹೆಚ್ಚುವರಿ ವಿವರಗಳನ್ನು ನೀಡದೆ ಹೇಳಿದೆ.

ವರದಿಗಳ ಪ್ರಕಾರ, ಸಿರಿಯಾದ ವಿಮಾನ ನಿಲ್ದಾಣಗಳ ರನ್‌ವೇಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಸಿರಿಯಾ ಈಗಾಗಲೇ ಯುದ್ಧಪೀಡಿತವಾಗಿದ್ದು ಸಾಕಷ್ಟು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇದರ ನಡುವೆ ಇಸ್ರೇಲ್ ಕೂಡ ದಾಳಿ ಮಾಡಿದೆ. ಈ ಮಧ್ಯೆ ಸಿರಿಯಾದಿಂದ ಹೊರ ಹೋಗುವ ಮತ್ತು ಒಳ ಬರುವ ಎಲ್ಲ ವಿಮಾನ ಸಂಚಾರಗಳನ್ನು ರದ್ದು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಇಸ್ರೇಲಿ ಪದೇ ಪದೇ ಅಲೆಪ್ಪೊ ಮತ್ತು ರಾಜಧಾನಿ ಡಮಾಸ್ಕಸ್‌ನಲ್ಲಿರುವ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ಎರಡೂ ವಿಮಾನ ನಿಲ್ದಾಣಗಳನ್ನು ಯುದ್ಧದಿಂದ ಹಾನಿಗೊಳಗಾದ ಸಿರಿಯಾ ಸರ್ಕಾರವು ನಿಯಂತ್ರಿಸುತ್ತದೆ.

ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್‌ ಏಕಕಾಲಕ್ಕೆ ಸಾವಿರಾರು ಕ್ಷಿಪಣಿಗಳ ಮೂಲಕ ಇಸ್ರೇಲ್ ದಾಳಿ ನಡೆಸಿತು. ಈ ವೇಳೆ, ಇಸ್ರೇಲ್‌ನಲ್ಲಿ ಸಾವಿರಾರು ಮೃತಪಟ್ಟರು. ಬಳಿಕ ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸಿದ್ದು, ಬಂಡುಕೋರರು ಸೇರಿದಂತೆ ನಾಗರಿಕರನ್ನು ಕೊಂದು ಹಾಕಿದೆ. ಈಗ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆಯೇ ಸಿರಿಯಾ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಇಸ್ರೇಲ್ ತಲುಪಿದ ಅಮೆರಿಕದ ಆಧುನಿಕ ಶಸ್ತ್ರಾಸ್ತ್ರಗಳು!

ಪ್ಯಾಲೆಸ್ತೀನ್‌ನ ಹಮಾಸ್ ಬಂಡುಕೋರರ (Hamas Attack) ಜತೆ ಪೂರ್ಣ ಪ್ರಮಾಣದಲ್ಲಿ ಯುದ್ಧ ಸಾರಿರುವ ಇಸ್ರೇಲ್‌ಗೆ (Israel) ಅಮೆರಿಕದ (America) ಬೆಂಬಲ ದೊರೆಯುತ್ತಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಅಮೆರಿಕವು ಇಸ್ರೇಲ್‌ಗೆ ಕಳುಹಿಸಿಕೊಟ್ಟಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯವು (Israel Ministry of Defence) ಬುಧವಾರ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Israel Palestine War: ಇಸ್ರೇಲ್‌ ಆರಂಭ ಅಷ್ಟೇ, ಇಡೀ ಭೂಮಿಯೇ ನಮ್ಮ ಗುರಿ: ಎಚ್ಚರಿಕೆ ನೀಡಿದ ಹಮಾಸ್‌ ಕಮಾಂಡರ್‌

ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಕ್ಷಿಪಣಿಗಳ ಸುರಿ ಮಳೆಯನ್ನು ಸುರಿಸುವ ಮೂಲಕ ಸಾವಿರಾರು ಇಸ್ರೇಲಿಗಳಿಗೆ ಕೊಂದು ಹಾಕಿದರು. ಪರಿಣಾಮ, ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿ, ಬಂಡುಕೋರರನ್ನು ಬೇಟೆಯಾಡುತ್ತಿದೆ(Israel Palestine War).

ಇಸ್ರೇಲ್‌ನ ರಕ್ಷಣಾ ಸಚಿವಾಲಯವು ಬಿಡುಗಡೆ ಮಾಡಿದ ವೀಡಿಯೊಗಳು ಮತ್ತು ಚಿತ್ರಗಳು ಕಾರ್ಗೋ ವಿಮಾನದ ಲ್ಯಾಂಡಿಂಗ್ ಆಗುತ್ತಿರುವುದನ್ನು ತೋರಿಸಿವೆ. ಜಂಟಿ ಕಾರ್ಯಾಚರಣೆಗಾಗಿ ಅಮೆರಿಕವು ಇಸ್ರೇಲ್‌ಗೆ ಕಳುಹಿಸಲಾದ ಅತ್ಯಾಧುನಿಕ ಯುದ್ಧ ಸಾಮಾಗ್ರಿಗಳು ಅದರಲ್ಲಿವೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version