Site icon Vistara News

ಗಾಜಾದಲ್ಲಿ ‘ಯೋಗಿ’ ಮಾಡೆಲ್‌ ಅನುಸರಿಸಿದ ಇಸ್ರೇಲ್;‌ ಉಗ್ರರ ಶೋಧಕ್ಕೆ ಬುಲ್ಡೋಜರ್‌ ಬಳಕೆ!

Israel Palestine War

Israel Palestine War: Bulldozers At Gaza's Al Shifa Hospital As Israel Search For Hamas Tunnels

ಗಾಜಾ ನಗರ: ಉತ್ತರ ಪ್ರದೇಶದಲ್ಲಿ (Uttar Pradesh) ಗೂಂಡಾಗಳು, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವವರು, ಕ್ರಿಮಿನಲ್‌ಗಳ ಮನೆಗಳಿಗೆ ಬುಲ್ಡೋಜರ್‌ಗಳನ್ನು ನುಗ್ಗಿಸುವ “ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮಾಡೆಲ್‌”ಅನ್ನು ಪ್ಯಾಲೆಸ್ತೀನ್‌ನ ಗಾಜಾ ನಗರದಲ್ಲಿ (Gaza City) ಇಸ್ರೇಲ್‌ ಅನುಸರಿಸುತ್ತಿದೆ. ಹೌದು, ಗಾಜಾ ನಗರದಲ್ಲಿರುವ ಹಮಾಸ್‌ ಉಗ್ರರನ್ನು ಹಡೆಮುರಿ ಕಟ್ಟಲು, ಅವರನ್ನು ಸುರಂಗಗಳನ್ನು ಹೊರತೆಗೆಯಲು ಇಸ್ರೇಲ್‌ ಸೇನೆಯು ಬುಲ್ಡೋಜರ್‌ಗಳನ್ನು ಬಳಸುತ್ತಿದೆ. ಈ ಕುರಿತು ಹಮಾಸ್‌ ಉಗ್ರರೇ ಮಾಹಿತಿ ನೀಡಿದ್ದಾರೆ.

ಇಸ್ರೇಲ್‌ ಸೈನಿಕರು ಗಾಜಾ ನಗರದಲ್ಲಿರುವ ಅಲ್‌ ಶಿಫಾ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಅಲ್‌ ಶಿಫಾ ಆಸ್ಪತ್ರೆಯ ಕೆಳಗಡೆಯೇ ಹಮಾಸ್‌ ಉಗ್ರರ ಸುರಂಗಗಳಿವೆ. ಸುಮಾರು 2,500 ಜನ ಇರುವ ಆಸ್ಪತ್ರೆ ಮೇಲೆ ದಾಳಿ ನಡೆಸಿರುವ ಇಸ್ರೇಲ್‌ ಸೇನೆಯು ಈಗ ಸುರಂಗಗಳನ್ನು ಪತ್ತೆಹಚ್ಚಲು ಬುಲ್ಡೋಜರ್‌ಗಳನ್ನು ನುಗ್ಗಿಸಿದೆ. “ಇಸ್ರೇಲ್‌ ಸೇನೆಯ ಬುಲ್ಡೋಜರ್‌ಗಳು ಅಲ್‌ ಶಿಫಾ ಆಸ್ಪತ್ರೆಗೆ ನುಗ್ಗಿವೆ. ದಕ್ಷಿಣ ಭಾಗದಲ್ಲಿರುವ ಗೇಟ್‌ ಒಂದನ್ನು ಧ್ವಂಸಗೊಳಿಸಿವೆ” ಎಂದು ಹಮಾಸ್‌ ತಿಳಿಸಿದೆ. ಇಸ್ರೇಲ್‌ ಸೇನೆಯೂ ಬುಲ್ಡೋಜರ್‌ಗಳನ್ನು ನುಗ್ಗಿಸಿರುವುದನ್ನು ದೃಢಪಡಿಸಿದೆ.

ಅಲ್‌-ಶಿಫಾ ಆಸ್ಪತ್ರೆಯ ಕೆಳಗೆ ಹಮಾಸ್‌ ಉಗ್ರರ ಸುರಂಗವಿದೆ. ಆಸ್ಪತ್ರೆ ಮೂಲಕ ಸುರಂಗದೊಳಗೆ ಹೋಗುವುದು, ಅಲ್ಲಿಂದ ಬರುವುದು, ಆಸ್ಪತ್ರೆಯಲ್ಲಿಯೇ ದಾಳಿಗೆ ಸಂಚು ರೂಪಿಸುವುದು ಸೇರಿ ಹಲವು ಕೃತ್ಯಗಳಲ್ಲಿ ಹಮಾಸ್‌ ಉಗ್ರರು ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು, ಆಸ್ಪತ್ರೆಯಲ್ಲಿ ಉಗ್ರ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಹಮಾಸ್‌ ಉಗ್ರರಿಗೆ ಇಸ್ರೇಲ್‌ ಗಡುವು ನೀಡಿತ್ತು. ಆದರೆ, ಹಮಾಸ್‌ ಉಗ್ರರು ಇದಕ್ಕೆ ಸೊಪ್ಪು ಹಾಕದ ಕಾರಣ ಭೀಕರವಾಗಿ ದಾಳಿ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಉಂಟಾಗಿರುವ ಸಾರ್ವಜನಿಕರ ಸಾವು-ನೋವಿನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Israel Palestine War: ‌ಇಸ್ರೇಲ್‌ ಸೈನಿಕರು ಅತ್ಯಾಚಾರಿಗಳು ಎಂದ ಶಿಕ್ಷಕನ ಬಂಧನ!

12 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version