Site icon Vistara News

Israel Palestine War: ಜೈಲಿನೊಳಗೇ ಪ್ಯಾಲೆಸ್ತೀನ್‌ ಕೈದಿಗಳ ಮೇಲೆ ಇಸ್ರೇಲಿ ಯೋಧರಿಂದ ಅತ್ಯಾಚಾರ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

Israel Palestine war

ನವದೆಹಲಿ: ಒತ್ತೆಯಾಳುಗಳನ್ನಾಗಿರಿಸಿಕೊಂಡಿರುವ ಮಹಿಳಾ ಸೈನಿಕರ ಮೇಲೆ ಹಮಾಸ್‌ ಉಗ್ರರು ಲೈಂಗಿಕ ದೌರ್ಜನ್ಯ(Sexual Assault) ಎಸಗುತ್ತಿರುವ ವಿಡಿಯೋವೊಂದು ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಪ್ಯಾಲೆಸ್ತೇನಿಯನ್‌ ಒತ್ತೆಯಾಳು ಮೇಲೆ ಇಸ್ರೇಲ್‌(Israel Palestine war)ನ ಯೋಧರ ಅಟ್ಟಹಾಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಸ್‌ಡೆ ಟೆಯ್ಮನ್‌ ಶಿಬಿರದಲ್ಲಿ ಒತ್ತೆಯಾಳುಗಳನ್ನಾಗಿರಿಸಿಕೊಂಡಿರುವ ಪ್ಯಾಲೆಸ್ತೇನಿಯನ್‌ ಜನರ ಮೇಲೆ ಇಸ್ರೇಲಿ ಯೋಧರು ಮನಸ್ಸೋಇಚ್ಛೆ ದೌರ್ಜನ್ಯ ಎಸಗುತ್ತಿದ್ದಾರೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ಗುರುತು ಪತ್ತೆಯಾಗದ ಸಂತ್ರಸ್ತನೋರ್ವ, ಗುದನಾಳ, ಮುರಿದ ಪಕ್ಕೆಲುಬುಗಳು ಮತ್ತು ಕರುಳುಗಳು ಛಿದ್ರಗೊಂಡಿರುವುದು ಸೇರಿದಂತೆ ತೀವ್ರ ಗಾಯಗಳಾಗಿದ್ದು, ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೂ ಅಲ್ಲದೇ ಇಸ್ರೇಲಿ ಯೋಧರು ಮಹಿಳಾ ಒತ್ತೆಯಾಳುಗಳ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿರುವುದನ್ನೂ ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಈ ಸುದ್ದಿ ಬಹಳ ಚರ್ಚೆಗೆ ಗ್ರಾಸವಾಗಿದೆ.

ಕೆಲವು ದಿನಗಳ ಹಿಂದೆ ಹಮಾಸ್‌ ಉಗ್ರರೂ ಇಂತಹದ್ದೇ ಒಂದು ವಿಡಿಯೋ ಬಿಡುಗಡೆ ಮಾಡಿದ್ದರು.ಗಾಯಗೊಂಡ ಇಸ್ರೇಲಿ ಮಹಿಳಾ ಸೈನಿಕರ ಮೇಲೆ ಹಮಾಸ್‌ ಉಗ್ರರು ಲೈಂಗಿಕ ದೌರ್ಜನ್ಯ ನಡೆಸುವ ವಿಡಿಯೊ ಇದಾಗಿತ್ತು. ಬಂದೂಕುಧಾರಿ ಭಯೋತ್ಪಾದಕನೊಬ್ಬ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ತಮ್ಮ ಯೋಜನೆಯನ್ನು ಘೋಷಿಸುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ʼʼಗರ್ಭಿಣಿಯಾಗಬಹುದಾದ ಕೆಲವು ಮಹಿಳೆಯರು ಇಲ್ಲಿದ್ದಾರೆʼʼ ಒಂದು ಓರ್ವ ಹೇಳಿದರೆ, ಇನ್ನೋರ್ವ ಸೆರೆ ಸಿಕ್ಕ ಮಹಿಳೆಯ ಸೌಂದರ್ಯವನ್ನು ಹೊಗಳುತ್ತಿರುವುದೂ ಕಂಡು ಬಂದಿದೆ.

ನಹಾಲ್ ಓಜ್‌ನ ಬಾಂಬ್‌ ಶೆಲ್ಟರ್‌ನಲ್ಲಿ ಸೆರೆ ಹಿಡಿಯಲಾದ ಈ ವಿಡಿಯೊದಲ್ಲಿ ಉಗ್ರರು ಸೆರೆಸಿಕ್ಕವರು ನಾಯಿಗಳೆಂದು ನಿಂದಿಸುತ್ತಿರುವುದೂ ಸೆರೆಯಾಗಿದೆ. ಜತೆಗೆ ಫೋಟೊಗಳಿಗೆ ಪೋಸ್‌ ನೀಡುವಂತೆಯೂ ಮಹಿಳೆಯರಿಗೆ ಹಿಂಸೆ ನೀಡುತ್ತಾರೆ. ಈ ಪೈಕಿ ಒಬ್ಬಾಕೆಯ ಮುಖದಲ್ಲಿ ರಕ್ತ ಸೋರುತ್ತಿದ್ದರೆ, ಇನ್ನೋರ್ವ ಮಹಿಳೆಯ ಬಾಯಿಯಿಂದ ರಕ್ತ ಜಿನುಗುತ್ತಿದೆ. ಮಹಿಳೆಯರ ಪೈಕಿ ಒಬ್ಬಾಕೆ ಇಂಗ್ಲಿಷ್‌ ಗೊತ್ತಿರುವವರನ್ನು ಕರೆತನ್ನಿ ಎಂದು ಮನವಿ ಮಾಡುತ್ತಾರೆ. ಜತೆಗೆ ಇನ್ನೊಬ್ಬರು ತಮಗೆ ಗಾಜಾದಲ್ಲಿ ಸ್ನೇಹಿತರೊಬ್ಬರಿದ್ದು, ಅವರನ್ನು ಭೇಟಿ ಮಾಡಿಸುವಂತೆ ಆಗ್ರಹಿಸುತ್ತಾರೆ. ಆದರೆ ಬಂಧೂಕುದಾರಿಗಳು ಇದ್ಯಾವುದನ್ನೂ ಲೆಕ್ಕಿಸುವುದಿಲ್ಲ. ಕಿರುಚಿ ಸುಮ್ಮನೆ ಕುಳಿತುಕೊಳ್ಳುವಂತೆ ಬೆದರಿಸುತ್ತಾರೆ. ತಮ್ಮ ಸಂಗಾತಿಗಳ ಸಾವಿಗೆ ಇವರೇ ಕಾರಣ ಎಂದು ಆರೋಪಿಸುತ್ತಾರೆ.

2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್‌ (Israel Hamas War) ಮೇಲೆ ದಾಳಿ ಮಾಡಿದ ಬಳಿಕ “ಹಮಾಸ್‌ ಉಗ್ರರು ಯುದ್ಧ ಆರಂಭಿಸಿದ್ದಾರೆ ಹಾಗೂ ನಾವು ಯುದ್ಧವನ್ನು ಅಂತ್ಯಗೊಳಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದರು. ಈಗ ಅದರಂತೆ, ಇಸ್ರೇಲ್‌ ದಾಳಿಯನ್ನು ಚುರುಕುಗೊಳಿಸಿದ್ದು, ಇಸ್ರೇಲ್‌ ಮಿಲಿಟರಿ ಚೀಫ್‌ ಮೊಹಮ್ಮದ್‌ ಡೈಫ್‌ನನ್ನು (Mohammed Deif) ಹೊಡೆದುರುಳಿಸಿದೆ. ಈ ಕುರಿತು ಇಸ್ರೇಲ್‌ ಸೇನೆಯೇ ಅಧಿಕೃತವಾಗಿ ಘೋಷಣೆ ಮಾಡಿದೆ.

ಹೌದು, ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ನಡೆಸಿದ ದಾಳಿಯ ರೂವಾರಿಯಾದ ಮೊಹಮ್ಮದ್‌ ಡೈಫ್‌ನನ್ನು ಇಸ್ರೇಲ್‌ ಸೇನೆಯು ದಾಳಿ ಮೂಲಕ ಹತ್ಯೆ ಮಾಡಿದೆ. “ಇಸ್ರೇಲ್‌ ಡಿಫೆನ್ಸ್‌ ಪಡೆಗಳು ಜುಲೈ 13ರಂದು ಖಾನ್‌ ಯುನಿಸ್‌ನಲ್ಲಿ ನಡೆಸಿದ ವಾಯುದಾಳಿಯಲ್ಲಿ ಮೊಹಮ್ಮದ್‌ ಡೈಫ್‌ ಹತ್ಯೆಗೀಡಾಗಿದ್ದಾನೆ. ಗುಪ್ತಚರ ಮಾಹಿತಿಯನ್ನು ಆಧರಿಸಿ ಐಡಿಎಫ್‌ ದಾಳಿ ನಡೆಸಿ, ಅಕ್ಟೋಬರ್‌ 7ರ ದಾಳಿಯ ಮಾಸ್ಟರ್‌ಮೈಂಡ್‌ನನ್ನು ಹತ್ಯೆ ಮಾಡಲಾಗಿದೆ” ಎಂದು ಇಸ್ರೇಲ್‌ ಮಾಹಿತಿ ನೀಡಿದೆ.

ಇದನ್ನೂ ಓದಿ:Ismail Haniyh Killing: ಹನಿಯೆಹ್‌ ಹತ್ಯೆ ಹಿಂದೆ ಇಸ್ರೇಲ್‌ನ ಮಾಸ್ಟರ್‌ ಪ್ಲ್ಯಾನ್‌? ಮೊಸಾದ್‌ನ ಸೀಕ್ರೆಟ್‌ ಏಜೆಂಟ್‌ಗಳಿಂದ ಬಾಂಬ್‌ ಸ್ಫೋಟ?

Exit mobile version