ಜೆರುಸಲೇಂ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಘೋಷಣೆಯಾದ ಕದನವಿರಾಮದ (Ceasefire) ನಿಯಮಗಳಿಗೆ ತಕ್ಕಂತೆ ಹಮಾಸ್ ಉಗ್ರರು (Hamas Terrorists) ಮೂರನೇ ಹಂತದಲ್ಲಿ ಇಸ್ರೇಲ್‌ನ 13 ನಾಗರಿಕರು ಸೇರಿ 17 ಒತ್ತೆಯಾಳುಗಳನ್ನು (Israel Hostages) ಬಿಡುಗಡೆ ಮಾಡಿದ್ದಾರೆ. ಇಸ್ರೇಲ್‌ನ 13 ನಾಗರಿಕರು, ಮೂವರು ಥಾಯ್ಲೆಂಡ್ ನಾಗರಿಕರು ಹಾಗೂ ಅಮೆರಿಕದ ನಾಲ್ಕು ವರ್ಷದ ಬಾಲಕಿ ಸೇರಿ 17 ನಾಗರಿಕರನ್ನು ಹಮಾಸ್ ಬಿಡುಗಡೆ ಮಾಡಿದೆ. ಅತ್ತ, ಇಸ್ರೇಲ್ ಕೂಡ ಪ್ಯಾಲೆಸ್ತೀನ್‌ನ 39 ಕೈದಿಗಳನ್ನು ಬಿಡುಗಡೆ ಮಾಡಿದೆ.
ಇದರೊಂದಿಗೆ ಹಮಾಸ್ ಉಗ್ರರು ಮೂರೂ ಹಂತಗಳಲ್ಲಿ ಒಟ್ಟು 69 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದಂತಾಗಿದೆ. ಸೋಮವಾರ (ನವೆಂಬರ್ 27) ನಾಲ್ಕನೇ ಹಂತದಲ್ಲಿ ಇನ್ನಷ್ಟು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ನಾಲ್ಕು ದಿನಗಳವರೆಗೆ ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ಕದನವಿರಾಮ ಘೋಷಣೆಯಾಗಿದೆ. ಸೋಮವಾರ ಕೊನೆಯ ದಿನವಾದ ಕಾರಣ ಇನ್ನಷ್ಟು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮತ್ತೊಂದೆಡೆ, ಹಮಾಸ್ ಉಗ್ರರು ಅಮೆರಿಕದ ನಾಲ್ಕು ವರ್ಷದ ಬಾಲಕಿಯನ್ನು ಬಿಡುಗಡೆ ಮಾಡಿರುವುದನ್ನು ಅಮೆರಿಕ ದೃಢಪಡಿಸಿದೆ.
If there’s only one video that #Israel doesn’t want you to see, it’s this one.
— WESSAM (@WessamEffat) November 25, 2023
BREAKING: HAMAS RELEASES THE ISRAELI HOSTAGES
The prisoners are healthy and waving to Hamas’s Al-Qassam Brigade fighters. pic.twitter.com/K0MEjljm8r
ಹಮಾಸ್ ಮತ್ತು ಇಸ್ರೇಲ್ ನಡುವಿನ ತಾತ್ಕಾಲಿಕ ಕದನ ವಿರಾಮದ ಒಪ್ಪಂದದ ಪ್ರಕಾರ, ಹಮಾಸ್ ಉಗ್ರರು ನವೆಂಬರ್ 24ರಂದು ಮೊದಲ ಹಂತದಲ್ಲಿ 13 ಇಸ್ರೇಲಿ ಪ್ರಜೆಗಳು ಸೇರಿ 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರು. ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಉಗ್ರರು ರೆಡ್ ಕ್ರಾಸ್‌ಗೆ ಹಸ್ತಾಂತರಿಸಿದ್ದರು. ಬಿಡುಗಡೆಯಾದ ಒತ್ತೆಯಾಳುಗಳ ಪೈಕಿ 12 ಥಾಯ್ ಪ್ರಜೆಗಳಿದ್ದರು. ಎರಡನೇ ಹಂತದಲ್ಲಿ ನವೆಂಬರ್ 25ರಂದು 17 ಒತ್ತೆಯಾಳುಗಳನ್ನು ಹಮಾಸ್ ಉಗ್ರರು ಬಿಡುಗಡೆಗೊಳಿಸಿದ್ದರು.
ಹಮಾಸ್ ಉಗ್ರರ ದಾಳಿಗೆ ಪ್ರತಿದಾಳಿ ಆರಂಭಿಸಿದ ಇಸ್ರೇಲ್ ಸೇನೆಯು ಗಾಜಾ ನಗರದ ಮೇಲೆ ಭಾಗಶಃ ಹಿಡಿತ ಸಾಧಿಸಿದ್ದರು. ನಿರಂತರ ದಾಳಿ ಮೂಲಕ ಸಾವಿರಾರು ಜನರನ್ನು ಹತ್ಯೆಗೈದಿದ್ದರು. ಹಾಗಾಗಿ, ಕತಾರ್ ಮಧ್ಯಪ್ರವೇಶಿಸಿ ಕದನವಿರಾಮಕ್ಕೆ ಕರೆ ನೀಡಿದೆ. ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಕೊನೆಗೆ ಒಪ್ಪಿದೆ. ಅದರಂತೆ, ಈಜಿಪ್ತ್ ಮೂಲಕ 17 ಒತ್ತೆಯಾಳುಗಳನ್ನು ಇಸ್ರೇಲ್‌ಗೆ ಹಸ್ತಾಂತರ ಮಾಡಲಾಗಿದೆ.
ಇದನ್ನೂ ಓದಿ: Israel Palestine War: ಇಸ್ರೇಲ್ ಡೆಡ್‌ಲೈನ್‌ಗೆ ಮಣಿದ ಹಮಾಸ್; 17 ಒತ್ತೆಯಾಳುಗಳ ಬಿಡುಗಡೆ
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.