ನವದೆಹಲಿ: ಇಸ್ರೇಲ್ ಗಾಜಾಪಟ್ಟಿಯ (Gaza Strip) ಮೇಲೆ ಪೂರ್ಣ ಪ್ರಮಾಣದ ಸೇನಾಕಾರ್ಯಾಚರಣೆಯನ್ನು ಆರಂಭಿಸುತ್ತಿದ್ದಂತೆ ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಯುದ್ಧದ ಕಾರ್ಮೋಡಗಳು ಆವರಿಸಿವೆ. ಗಾಜಾ ಪಟ್ಟಿಯ ಹಮಾಸ್ ಬಂಡುಕೋರರು (Hamas Terrorists) ಅ.7ರಂದು ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಗಾಜಾ ಪಟ್ಟಿಯ ನೆಲಸಮಕ್ಕೆ ಪಣತೊಟ್ಟು ಮುನ್ನುಗುತ್ತಿದ್ದಂತೆ, ಇರಾನ್ (Iran) ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ. ಕೂಡಲೇ ಪ್ಯಾಲೆಸ್ತೀನಿಯರು ಇರುವ ಗಾಜಾ ಮೇಲಿನ ದಾಳಿಯನ್ನು ನಿಲ್ಲಿಸದೇ ಹೋದರೆ, ಮಧ್ಯ ಪ್ರಾಚ್ಯದ ಇತರ ರಾಷ್ಟ್ರಗಳು ಮೈದಾನಕ್ಕೆ ಇಳಿಯಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ(Israel Palestine War).
ಇಸ್ರೇಲಿಗಳ ಆಕ್ರಮಣಗಳು ನಿಲ್ಲದಿದ್ದರೆ, ಈ ಪ್ರದೇಶದ ಎಲ್ಲಾ ರಾಷ್ಟ್ರಗಳ ಕೈ ಯುದ್ಧದ ಬಟನ್ ಒತ್ತಲು ರೆಡಿಯಾಗಿವೆ ಎಂದು ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್ ಅವರನ್ನು ಉಲ್ಲೇಖಿಸಿ ಇರಾನ್ ಸುದ್ದಿ ಸಂಸ್ಥೆ ಫಾರ್ಸ್ ವರದಿ ಮಾಡಿದೆ. ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್ ಬಂಡುಕೋರರ ಗುಂಪು ಹಮಾಸ್ ದಕ್ಷಿಣ ಮತ್ತು ಮಧ್ಯ ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿದ ನಂತರ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ನಿರಂತರವಾಗಿ ರಾಕೆಟ್ ಮತ್ತು ಕ್ಷಿಪಣಿಗಳ ಮಳೆಗರೆಯುತ್ತಿದೆ.
ಅಕ್ಟೋಬರ್ 7ರ ದಾಳಿಯನ್ನು ಶ್ಲಾಘಿಸಿದ ಇರಾನ್‌ನಿಂದ ನಿರಂತವರಾಗಿ ಹಮಾಸ್ ಬೆಂಬಲವನ್ನು ಪಡೆಯುತ್ತಿದೆ. ಹಾಗಿದ್ದೂ, ಈ ದಾಳಿಯಲ್ಲಿನ ತನ್ನ ಕೈವಾಡವನ್ನು ನಿರಾಕರಿಸಿರುವ ಇರಾನ್, ಹಮಾಸ್ ದಾಳಿಯು ಇಸ್ರೇಲ್‌ನ ಗುಪ್ತಚರ ವೈಫಲ್ಯ ಮತ್ತು ದುರಸ್ತಿ ಮಾಡಲಾಗದ ಸೇನಾಕಾರ್ಯಾಚರಣೆಯ ಪ್ರತಿಫಲವಾಗಿದೆ ಎಂದು ಹೇಳಿತ್ತು. ಈ ಮಧ್ಯೆ, ಇರಾನ್ ವಿರುದ್ದ ಕೆಂಡ ಕಾರಿರುವ ಇಸ್ರೇಲ್, ಲೆಬನಾನ್ ಗಡಿಯಲ್ಲಿ ಹಿಜ್ಬುಲ್ ಮೂಲಕ ದಾಳಿ ನಡೆಸಲು ಇರಾನ್ ಸೂಚಿಸಿದೆ ಎಂದು ಆದೇಶಿಸಿದೆ.
ಈ ಸುದ್ದಿಯನ್ನೂ ಓದಿ: Israel Palestine War : ಇಸ್ರೇಲ್ – ಪ್ಯಾಲೆಸ್ತೀನ್ ಯುದ್ಧದಲ್ಲಿ ಕ್ರೀಡಾ ಕ್ಷೇತ್ರಕ್ಕೂ ಹಾನಿ
ಗಾಜಾ ಪಟ್ಟಿಯ ಮೇಲಿನ ನಮ್ಮ ಯುದ್ಧ ಪ್ರಯತ್ನಗಳನ್ನು ಬೇರೇಡೆಗೆ ಸೆಳೆಯಲು ಗಡಿಯಲ್ಲಿ ಹಿಜ್ಬುಲ್ಲಾ ಉಗ್ರರು ನಿರಂತವರಾಗಿ ದಾಳಿ ನಡೆಸುತ್ತಿದ್ದಾರೆ. ಇರಾನ್ ಬೆಂಬಲ ಮತ್ತು ಇರಾನ್ ಸೂಚನೆಯಂತೆ ಈ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗರಿ ಅವರು ಸೋಮವಾರ ಆರೋಪಿಸಿದ್ದಾರೆ.
ಈ ಮಧ್ಯೆ, ಇಸ್ರೇಲ್ ಗಾಜಾ ಯುದ್ಧ ಕುರಿತು ಚರ್ಚಿಸಲು ಸೌದಿ ಅರೆಬಿಯಾ ಇಸ್ಲಾಮಿಕ್ ಕೋಆಪರೇಷನ್ ಸಂಸ್ಥೆಗಳ ಸಭೆಯನ್ನು ಕರೆದಿದೆ. ಜೆಡ್ಡಾದಲ್ಲಿ ಬುಧವಾರ ನಡೆಯಲಿರುವ ಸಭೆಯಲ್ಲಿ ಇಸ್ಲಾಮಿಕ್ ರಾಷ್ಟ್ರಗಳ ಉನ್ನತ ಗುಂಪು “ಸೇನಾ ಕಾರ್ಯಾಚರಣೆ ಕೈಗೊಳ್ಳುವ” ಮತ್ತು “ಗಾಜಾದಲ್ಲಿ ರಕ್ಷಣೆಯಿಲ್ಲದ ನಾಗರಿಕರಿಗೆ ಬೆದರಿಕೆ”ಯನ್ನು ಪರಿಹರಿಸುವ ಬಗ್ಗೆ ಚಿಂತನ ಮಂಥನ ನಡೆಸಲಿದೆ.