ಟೆಲ್ ಅವಿವ್: ಇಸ್ರೇಲ್‌ನ (Israel) ವಾಣಿಜ್ಯ ಕೇಂದ್ರವಾದ ಟೆಲ್ ಅವೀವ್‌ನಲ್ಲಿ (Tel Aviv) “ದೊಡ್ಡ ರಾಕೆಟ್ ದಾಳಿ” ನಡೆಸಿರುವುದಾಗಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ (hamas) ಹೇಳಿಕೊಂಡ ಗಂಟೆಗಳ ನಂತರ, ಇಸ್ರೇಲ್ ಮಿಲಿಟರಿ ದಕ್ಷಿಣ ಗಾಜಾ ಪಟ್ಟಿಯ (Gaza Strip) ರಫಾದಲ್ಲಿ ಸ್ಥಳಾಂತರಗೊಂಡ ಜನರ ಶಿಬಿರದ ಮೇಲೆ ವೈಮಾನಿಕ ದಾಳಿ (Israel Palestine War) ನಡೆಸಿತು. ಭಾನುವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ 35 ಪ್ಯಾಲೆಸ್ಟೀನಿಯನ್ನರನ್ನು ಕೊಂದಿತು.
ತಿಂಗಳುಗಳಲ್ಲಿ ಮೊದಲ ಬಾರಿಗೆ ಇಂಥ ಭಾರಿ ದಾಳಿ ನಡೆಯುತ್ತಿದೆ. ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ನೀಡಿದ ಹೇಳಿಕೆಯಲ್ಲಿ, “ಇಸ್ರೇಲ್ ದಾಳಿ 35 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಡಜನ್‌ಗಟ್ಟಲೆ ಜನ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು” ಎಂದು ಹೇಳಿದೆ. ರಫಾಹ್ ಬಳಿ ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆ ಏಜೆನ್ಸಿ ನಿರ್ವಹಿಸುತ್ತಿದ್ದ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ದಾಳಿಯನ್ನು “ಭಯಾನಕ ಹತ್ಯಾಕಾಂಡ” ಎಂದು ಹಮಾಸ್ ಮೀಡಿಯಾ ಕರೆದಿದೆ.
“ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಕಾನೂನುಬದ್ಧ ಗುರಿಗಳ ವಿರುದ್ಧ ನಿಖರವಾದ ಗುಪ್ತಚರ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಮತ್ತು ಪಶ್ಚಿಮ ದಂಡೆಯಲ್ಲಿ ಉಗ್ರ ಕಾರ್ಯಾಚರಣೆ ನಡೆಸುತ್ತಿದ್ದ ಇಬ್ಬರು ಹಿರಿಯ ಹಮಾಸ್ ಅಧಿಕಾರಿಗಳನ್ನು ಕೊಂದಿದ್ದೇವೆ” ಎಂದು ಇಸ್ರೇಲಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲಿ ಸೈನ್ಯವು ತನ್ನ ದಾಳಿ ವಿಮಾನವು ರಫಾದಲ್ಲಿ ಹಮಾಸ್ ಆವರಣವನ್ನು ಘಾತಿಸಿದೆ ಎಂದು ವರದಿ ಮಾಡಿದೆ, ಇದರ ಪರಿಣಾಮವಾಗಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪಿನ ಹಿರಿಯ ಅಧಿಕಾರಿಗಳಾದ ಯಾಸಿನ್ ರಬಿಯಾ ಮತ್ತು ಖಲೀದ್ ನಗರ್ ಸಾವನ್ನಪ್ಪಿದರು. ಇಸ್ರೇಲಿ ಸೈನ್ಯವು ದಾಳಿಯ ಪರಿಣಾಮವಾಗಿ, ಆ ಪ್ರದೇಶದಲ್ಲಿ ಹಲವಾರು ನಾಗರಿಕರಿಗೆ ಹಾನಿಯಾಗಿದೆ ಎಂದು ಸೂಚಿಸುವ ವರದಿಗಳ ಬಗ್ಗೆ ನಮಗೆ ತಿಳಿದಿದೆ ಎಂದು ಒಪ್ಪಿಕೊಂಡಿದೆ.
ಇಸ್ರೇಲಿ ಮಿಲಿಟರಿ ಮತ್ತು ಹಮಾಸ್ ನಡುವಿನ ಯುದ್ಧದ ತೀವ್ರತೆಯು ಇತ್ತೀಚೆಗೆ ರಫಾದಲ್ಲಿ ಕೇಂದ್ರೀಕೃತವಾಗಿದೆ. ಅಲ್ಲಿ ಸೇನಾಪಡೆಗಳು ಮೇ ಆರಂಭದಲ್ಲಿ ವ್ಯಾಪಕ ವಿರೋಧದ ಹೊರತಾಗಿಯೂ ಭೂಸೇನಾ ಕಾರ್ಯಾಚರಣೆಯನ್ನು ನಡೆಸಿವೆ.
ಇದನ್ನೂ ಓದಿ: Iran-Israel Conflict: “ಅಚ್ಚರಿಯ ದಾಳಿ ನಿರೀಕ್ಷಿಸಿ”- ಇಸ್ರೇಲ್‌ಗೆ ಇರಾನ್‌ನಿಂದ ವಾರ್ನಿಂಗ್