Site icon Vistara News

Israel Palestine War: ಗಾಜಾಪಟ್ಟಿ ನಿರ್ನಾಮವೇ ಇಸ್ರೇಲ್‌ ಗುರಿ; ಬಾಂಬಿಟ್ಟು ಮಸೀದಿ ಉಡೀಸ್!‌

Muhammad Al Amin mosque

ಜೆರುಸಲೇಂ: ಯಹೂದಿಗಳ ರಾಷ್ಟ್ರವಾದ ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಕೂಢ ಗಾಜಾ ಪಟ್ಟಿ ಮೇಲೆ ಸಮರ (Israel Palestine War) ಸಾರಿದ್ದು, ಮಸೀದಿಗಳು, ಹಮಾಸ್‌ ಉಗ್ರರ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಗಾಜಾದಲ್ಲಿರುವ ಅಲ್‌ ಮೊಹಮ್ಮದ್‌ ಅಮಿನ್‌ ಮಸೀದಿಯು (Muhammad Al Amin Mosque) ಸಂಪೂರ್ಣವಾಗಿ ಧ್ವಂಸಗೊಂಡಿದೆ.

ಗಾಜಾದಲ್ಲಿ 2013ರಲ್ಲಿ ಮಲೇಷ್ಯಾದ ಮುಸ್ಲಿಂ ಕೇರ್‌ ಮಲೇಷ್ಯಾ ಸೊಸೈಟಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಸೀದಿಯನ್ನು ನಿರ್ಮಿಸಿತ್ತು. “ಇಸ್ರೇಲ್‌ ಬಾಂಬ್‌ ದಾಳಿಯಲ್ಲಿ ಮಲೇಷ್ಯಾ ಜನರಿಂದ ಹಣ ಸಂಗ್ರಹಿಸಿದ ನಿರ್ಮಿಸಿದ ಮಸೀದಿಯು ಧ್ವಂಸಗೊಂಡಿದೆ. ಇದರಿಂದ ನಮಗೆ ಅತೀವ ದುಃಖವಾಗಿದೆ. ದಾಳಿಯನ್ನು ನಾವು ಖಂಡಿಸುತ್ತೇವೆ” ಎಂದು ಮುಸ್ಲಿಂ ಕೇರ್‌ ಮಲೇಷ್ಯಾ ಸೊಸೈಟಿಯು ಖಂಡನೆ ವ್ಯಕ್ತಪಡಿಸಿದೆ. ಹಾಗೆಯೇ, ಪ್ಯಾಲೆಸ್ತೀನ್‌ನಲ್ಲಿರುವ ಮುಸ್ಲಿಮರೂ ದಾಳಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಸೀದಿ ಸ್ಫೋಟದ ಭೀಕರ ವಿಡಿಯೊ

ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ದಾಳಿ ಆರಂಭಿಸಿದ ಬಳಿಕ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಮಧ್ಯೆ ನಡೆದ ಸಂಘರ್ಷದಲ್ಲಿ (Israel Palestine War) ಮೃತಪಟ್ಟವರ ಸಂಖ್ಯೆ 1,100 ದಾಟಿದೆ. ರಾಕೆಟ್‌, ಡ್ರೋನ್‌ ಹಾಗೂ ಗುಂಡಿನ ದಾಳಿಗೆ ಎರಡೂ ರಾಷ್ಟ್ರಗಳು ಸಾವಿನ ಮನೆಯಂತಾಗಿದ್ದು, ದಿನೇದಿನೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮೃತಪಟ್ಟವರಲ್ಲಿ ಅಮೆರಿಕ, ಜರ್ಮನಿ, ಜಪಾನ್‌ ನಾಗರಿಕರು ಕೂಡ ಇದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Israel Palestine War: ತಂದೆ-ತಾಯಿ ಮುಂದೆಯೇ ಮಗಳನ್ನು ಹತ್ಯೆಗೈದ ಹಮಾಸ್ ಉಗ್ರರು!

ಹಮಾಸ್‌ ಉಗ್ರರ ದಾಳಿಯಿಂದ ಇಸ್ರೇಲ್‌ನಲ್ಲಿ 44 ಯೋಧರು ಸೇರಿ 700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಇಸ್ರೇಲ್‌ ನಡೆಸಿದ ವಾಯುದಾಳಿಯಿಂದ ಗಾಜಾಪಟ್ಟಿಯಲ್ಲಿ 413 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, “ಇದು ಸುದೀರ್ಘ ಹಾಗೂ ಸವಾಲಿನ ಯುದ್ಧ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿರುವುದು ಶೀಘ್ರದಲ್ಲೇ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಕಾಳಗ ನಿಲ್ಲುವ ಲಕ್ಷಣಗಳು ಇಲ್ಲ ಎನ್ನಲಾಗಿದೆ.

Exit mobile version