ಗಾಜಾ ನಗರ: ಗಾಜಾ ನಗರದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿರುವ ಇಸ್ರೇಲ್ ಸೇನೆಯು ಹಮಾಸ್ ಉಗ್ರರನ್ನು ಹುಡುಕಿ ಹುಡುಕಿ (Israel Palestine War) ಕೊಲ್ಲುತ್ತಿದೆ. ಅದರಲ್ಲೂ, ಗಾಜಾ ನಗರದಲ್ಲಿರುವ (Gaza City) ಅಲ್ ಶಿಫಾ ಆಸ್ಪತ್ರೆಯನ್ನು ಹಮಾಸ್ ಉಗ್ರರು (Hamas Terrorists) ಉಗ್ರ ಚಟುವಟಿಕೆಗಳ ತಾಣವಾಗಿ ಬಳಸುತ್ತಿರುವ, ಅಲ್ಲಿಯೇ ಇಸ್ರೇಲ್ ಸೇರಿ ಹಲವು ದೇಶಗಳ ಒತ್ತೆಯಾಳುಗಳನ್ನು ಇಟ್ಟುಕೊಂಡಿರುವುದನ್ನು ಕೂಡ ಇಸ್ರೇಲ್ ಜಗತ್ತಿಗೆ ತಿಳಿಸುತ್ತಿದೆ. ಅಲ್ ಶಿಫಾ ಆಸ್ಪತ್ರೆಯಲ್ಲಿ (Al Shifa Hospital) ಒತ್ತೆಯಾಳುಗಳನ್ನು ಇಟ್ಟಿರುವ ವಿಡಿಯೊ ಒಂದನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ.
“ಹಮಾಸ್ ಉಗ್ರರ ಮತ್ತೊಂದು ಮುಖ ಬಯಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು, ನೇಪಾಳ, ಥಾಯ್ಲೆಂಡ್ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದೆ. ಆ ಒತ್ತೆಯಾಳುಗಳನ್ನು ಅಲ್ ಶಿಫಾ ಆಸ್ಪತ್ರೆಯಲ್ಲಿಯೇ ಇರಿಸಿದೆ. ಇಸ್ರೇಲ್‌ನಲ್ಲಿದ್ದ ಇವರನ್ನು ಹಮಾಸ್ ಉಗ್ರರು ಅಪಹರಣ ಮಾಡಿ, ಅವರ ಮೇಲೆ ಹಲ್ಲೆ ನಡೆಸಿ, ಗಾಜಾ ಆಸ್ಪತ್ರೆಯಲ್ಲಿ ಇರಿಸಿದೆ” ಎಂದು ವಿಡಿಯೊ ಸಮೇತ ಇಸ್ರೇಲ್ ಸೇನೆಯು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಹಾಗೆಯೇ, ಅಲ್ ಶಿಫಾ ಆಸ್ಪತ್ರೆಯಲ್ಲಿಯೇ ಇಸ್ರೇಲ್ ಸೇನೆಯು ಮತ್ತೊಂದು ಸುರಂಗವನ್ನು ಪತ್ತೆಹಚ್ಚಿದೆ.
EXPOSED: This is documentation from Shifa Hospital from the day of the massacre, October 7, 2023, between the hours of 10:42 a.m and 11:01 a.m. in which hostages, a Nepalese civilian and a Thai civilian, were abducted from Israeli territory are seen surrounded by armed Hamas… pic.twitter.com/a5udjBw4wF
— Israel Defense Forces (@IDF) November 19, 2023
ಆಸ್ಪತ್ರೆಗೆ ಬುಲ್ಡೋಜರ್ ನುಗ್ಗಿಸಿದ ಇಸ್ರೇಲ್
ಇಸ್ರೇಲ್ ಸೈನಿಕರು ಗಾಜಾ ನಗರದಲ್ಲಿರುವ ಅಲ್ ಶಿಫಾ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಅಲ್ ಶಿಫಾ ಆಸ್ಪತ್ರೆಯ ಕೆಳಗಡೆಯೇ ಹಮಾಸ್ ಉಗ್ರರ ಸುರಂಗಗಳಿವೆ. ಸುಮಾರು 2,500 ಜನ ಇರುವ ಆಸ್ಪತ್ರೆ ಮೇಲೆ ದಾಳಿ ನಡೆಸಿರುವ ಇಸ್ರೇಲ್ ಸೇನೆಯು ಈಗ ಸುರಂಗಗಳನ್ನು ಪತ್ತೆಹಚ್ಚಲು ಬುಲ್ಡೋಜರ್‌ಗಳನ್ನು ನುಗ್ಗಿಸಿದೆ. “ಇಸ್ರೇಲ್ ಸೇನೆಯ ಬುಲ್ಡೋಜರ್‌ಗಳು ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿವೆ. ದಕ್ಷಿಣ ಭಾಗದಲ್ಲಿರುವ ಗೇಟ್ ಒಂದನ್ನು ಧ್ವಂಸಗೊಳಿಸಿವೆ” ಎಂದು ಹಮಾಸ್ ತಿಳಿಸಿದೆ. ಇಸ್ರೇಲ್ ಸೇನೆಯೂ ಬುಲ್ಡೋಜರ್‌ಗಳನ್ನು ನುಗ್ಗಿಸಿರುವುದನ್ನು ದೃಢಪಡಿಸಿದೆ.
ಗಾಜಾ ಆಸ್ಪತ್ರೆಯಲ್ಲಿ ಉಗ್ರರ ಮತ್ತೊಂದು ಸುರಂಗ ಪತ್ತೆ
The IDF has been telling the world the truth about the Shifa Hospital.
— Israel Defense Forces (@IDF) November 19, 2023
The operation is ongoing and is being conducted carefully, all in order to locate and dismantle Hamas infrastructure in the hospital.
Still don’t believe us? See for yourselves the evidence shown by IDF… pic.twitter.com/4H9hWJpnID
ಇದನ್ನೂ ಓದಿ: ಪ್ರತಿದಾಳಿಗೆ ಮಣಿದು ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಗೆ? ಇಸ್ರೇಲ್ ಹೇಳುವುದಿಷ್ಟು…
12 ಸಾವಿರ ದಾಟಿದ ಸಾವಿನ ಸಂಖ್ಯೆ
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ