ಜೆರುಸಲೇಂ: ಇಸ್ರೇಲ್ ಮೇಲೆ ಸಾವಿರಾರು ರಾಕೆಟ್‌ಗಳ ಮೂಲಕ ದಾಳಿ ಮಾಡಿದ ಹಮಾಸ್ ಉಗ್ರರಿಗೆ ಇಸ್ರೇಲ್ ಸೇನೆಯು ತಕ್ಕ ಪಾಠ ಕಲಿಸುತ್ತಿದೆ. ಅದರಲ್ಲೂ, ಗಾಜಾ ನಗರದ ಗಡಿಗೆ ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳನ್ನು (Israel Palestine War) ಕಳುಹಿಸಿರುವ ಇಸ್ರೇಲ್, ಭೂಮಿ, ಆಕಾಶ ಹಾಗೂ ಸಾಗರ ಪ್ರದೇಶದಿಂದಲೂ ಹಮಾಸ್ ಉಗ್ರರ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿಯೇ ಹಮಾಸ್ ಕಮಾಂಡರ್‌ಗಳನ್ನು (Hamas Commanders) ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸುತ್ತಿದ್ದು, ಕೇವಲ 24 ಗಂಟೆಯಲ್ಲಿಯೇ ಮೂವರು ಹಮಾಸ್ ಕಮಾಂಡರ್‌ಗಳನ್ನು ಹತ್ಯೆ ಮಾಡಿದೆ.
ಶನಿವಾರ (ಅಕ್ಟೋಬರ್ 14) ಹಮಾಸ್ ಏರ್‌ಫೋರ್ಸ್ ಮುಖ್ಯಸ್ಥ ಮುರಾದ್ ಅಬು ಮುರಾದ್ ಹಾಗೂ ಹಿರಿಯ ಕಮಾಂಡರ್ ಆಗಿದ್ದ ಅಲಿ ಖಾದಿಯನ್ನು ಹೊಡೆದುರುಳಿಸಿದ್ದ ಇಸ್ರೇಲ್, ಭಾನುವಾರ (ಅಕ್ಟೋಬರ್ 15) ಬಿಲಾಲ್ ಅಲ್ ಕೆಡ್ರಾ (Bilal Al Kedra) ಎಂಬ ಕಮಾಂಡರ್‌ನನ್ನು ಹತ್ಯೆಗೈದಿದೆ. ಈತ ಹಮಾಸ್ ನೌಕಾಪಡೆಯ ಹಿರಿಯ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ವಾಯುದಾಳಿ ಮೂಲಕ ಇಸ್ರೇಲ್ ಸೇನೆಯು ಈತನನ್ನು ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
As part of the extensive IDF strikes of senior operatives and terror infrastructure in the Gaza Strip, the IDF and ISA killed the Nukhba commander of the forces in southern Khan Yunis, who was responsible for the Kibbutz Nirim massacre pic.twitter.com/7QJE1LWQXf
— Israeli Air Force (@IAFsite) October 15, 2023
ನಿಖರ ಮಾಹಿತಿ ಆಧರಿಸಿ ದಾಳಿ
ಇಸ್ರೇಲ್‌ನ ಕಿಬುಟ್ಜ್ ನಿರಿಮ್ ಪ್ರದೇಶದಲ್ಲಿ ಹಮಾಸ್ ಉಗ್ರರು ದಾಳಿ ನಡೆಸಿ, ಹತ್ಯಾಕಾಂಡ ಮಾಡಿದ್ದರ ಹಿಂದೆ ಬಿಲಾಲ್ ಅಲ್ ಕೆಡ್ರಾ ಕೈವಾಡವಿದೆ ಎನ್ನಲಾಗಿದೆ. ಈತನ ಕುರಿತು ಇಸ್ರೇಲ್ ಗುಪ್ತಚರ ಸಂಸ್ಥೆಯು ನಿಖರ ಮಾಹಿತಿ ನೀಡಿದೆ. ಗಾಜಾಪಟ್ಟಿಯ ದಕ್ಷಿಣ ಭಾಗದಲ್ಲಿರುವ ಖಾನ್ ಯುನಿಸ್ ನಗರದಲ್ಲಿ ಬಿಲಾಲ್ ಅಲ್ ಕೆಡ್ರಾ ಅಡಗಿದ್ದಾನೆ ಎಂಬ ಕುರಿತು ನಿಖರ ಮಾಹಿತಿ ಪಡೆದ ಇಸ್ರೇಲ್ ಸೇನೆಯು ವಾಯುದಾಳಿ ನಡೆಸಿ ಹತ್ಯೆಗೈದಿದೆ. ವಿಡಿಯೊ ಸಮೇತ ಇಸ್ರೇಲ್ ಸೇನೆಯು ಹತ್ಯೆಯ ಕುರಿತು ಮಾಹಿತಿ ಒದಗಿಸಿದೆ.
ಇದನ್ನೂ ಓದಿ: Israel Palestine War: ಹಮಾಸ್ ಉಗ್ರರ ಪರ ಪೋಸ್ಟ್; ಉತ್ತರ ಪ್ರದೇಶದಲ್ಲಿ ಮೌಲ್ವಿಯ ಬಂಧನ
ಇಸ್ರೇಲ್ ಮೇಲೆ ಉಗ್ರರು ದಾಳಿ ಮಾಡಲು ಕಾರಣವಾದ ಹಮಾಸ್ ಉಗ್ರರನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಹಮಾಸ್ ಮುಖಂಡರನ್ನು ಕೊಂದು, ಬಳಿಕ ಉಳಿದ ಉಗ್ರರನ್ನು ನಿರ್ನಾಮ ಮಾಡುವುದು ಇಸ್ರೇಲ್ ಯೋಜನೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಗಾಜಾಪಟ್ಟಿ ಮೇಲೆ ಇಸ್ರೇಲ್ ಯೋಧರು ವೈಮಾನಿಕ ದಾಳಿ ನಡೆಸಿದ್ದು, ಹಮಾಸ್ ಏರ್‌ಫೋರ್ಸ್ ಮುಖ್ಯಸ್ಥನನ್ನೇ ಹೊಡೆದುರುಳಿಸಿದ್ದರು. ಈತನು ಹಮಾಸ್ ಉಗ್ರರು ಇಸ್ರೇಲ್ ಮಾಡುವ ಸಂಚು ರೂಪಿಸಿದ ಪ್ರಮುಖರಲ್ಲಿ ಒಬ್ಬನಾಗಿದ್ದಾನೆ ಎಂದು ತಿಳಿದುಬಂದಿದೆ. ವಾಯುದಾಳಿ ದಾಳಿ ಮೂಲಕವೇ ಏರ್‌ಫೋರ್ಸ್ ಮುಖ್ಯಸ್ಥನನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.