ಜೆರುಸಲೇಂ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರವು (Israel Palestine War) ದಿನೇದಿನೆ ಜೋರಾಗುತ್ತಿದೆ. ಸಾವಿರಾರು ಜನ ಮೃತಪಟ್ಟು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇಷ್ಟಾದರೂ, ಇಸ್ರೇಲ್ ಸೇನೆಯು ಗಾಜಾ ನಗರದ ಮೇಲೆ ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಇಸ್ರೇಲ್ ದಾಳಿಗೆ ಹಮಾಸ್ ಉಗ್ರರ (Hamas Terrorists) ಪರಿತಪಿಸುತ್ತಿದ್ದರೂ ಇಸ್ರೇಲ್ ದಾಳಿ ನಿಲ್ಲಿಸುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಗಾಜಾ ನಗರದೊಳಗೆ ಇಸ್ರೇಲ್ ಯುದ್ಧ ಟ್ಯಾಂಕರ್‌ಗಳನ್ನು (Israel Tanks) ನುಗ್ಗಿಸಿದೆ. ಹಾಗಾಗಿ, ಶೀಘ್ರದಲ್ಲೇ ಇಸ್ರೇಲ್ ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಸುತ್ತದೆ ಎಂದು ತಿಳಿದುಬಂದಿದೆ.
ಗಾಜಾ ನಗರದ ಉತ್ತರ ಭಾಗದಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದ ಕುರಿತು ಇಸ್ರೇಲ್ ರಕ್ಷಣಾ ಪಡೆಯು (IDF) ಗುರುವಾರ (ಅಕ್ಟೋಬರ್ 26) ವಿಡಿಯೊ ಪೋಸ್ಟ್ ಮಾಡಿದೆ. ಗಾಜಾ ಉತ್ತರ ಭಾಗದಲ್ಲಿ ಯುದ್ಧ ಟ್ಯಾಂಕರ್‌ಗಳು ನಿಗದಿತ ಗುರಿಗಳನ್ನು ಹೊಡೆದುರುಳಿಸಿದ ವಿಡಿಯೊ ಈಗ ವೈರಲ್ ಆಗಿದೆ. ಹಮಾಸ್ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಐಡಿಎಫ್ ಮುಖ್ಯಸ್ಥ ಈಗಾಗಲೇ ಘೋಷಿಸಿದ್ದಾರೆ. ಹಾಗಾಗಿ, ಯಾವುದೇ ಸಮಯದಲ್ಲಿ ಕೂಡ ಇಸ್ರೇಲ್ ಪೂರ್ಣ ಪ್ರಮಾಣದ ದಾಳಿ ಮಾಡಬಹುದು ಎನ್ನಲಾಗಿದೆ.
In preparation for the next stages of combat, the IDF operated in northern Gaza.
— Israel Defense Forces (@IDF) October 26, 2023
IDF tanks & infantry struck numerous terrorist cells, infrastructure and anti-tank missile launch posts.
The soldiers have since exited the area and returned to Israeli territory. pic.twitter.com/oMdSDR84rU
7 ಸಾವಿರ ದಾಟಿದ ಸಾವಿನ ಸಂಖ್ಯೆ
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 7,100 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿಯಿಂದ ಇದುವರೆಗೆ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್ ಸತತ ದಾಳಿಗೆ 5,700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಜಾ ನಗರದಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ: Israel Palestine War: ಇಸ್ರೇಲ್ ದಾಳಿಗೆ ಗಾಜಾ ನಗರ ದಿವಾಳಿ; ಒಂದೇ ರಾತ್ರಿ 700 ಜನ ಸಾವು
ಐಡಿಎಫ್ ಮುಖ್ಯಸ್ಥ ಹೇಳಿದ್ದೇನು?
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವ ವೇಳೆ ಇಸ್ರೇಲ್ ರಕ್ಷಣೆ ಪಡೆಗಳ ಮುಖ್ಯಸ್ಥ ಹೆರ್ಜಿ ಹಲೇವಿ ಹಮಾಸ್ ನಿರ್ನಾಮದ ಕುರಿತು ಹೇಳಿದ್ದರು. “ಹಮಾಸ್ ಉಗ್ರರನ್ನು ನಾವು ನಿರ್ನಾಮ ಮಾಡುತ್ತೇವೆ. ಹಮಾಸ್ ಮಿಲಿಟರಿ ಪಡೆಯ ಎಲ್ಲ ಮುಖಂಡರನ್ನು ಹತ್ಯೆಗೈಯುತ್ತೇವೆ. ಇದೇ ಕಾರಣಕ್ಕಾಗಿ ಹಿರಿಯ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದೇವೆ. ಹಮಾಸ್ ಹಿರಿಯ ಉಗ್ರರು, ಹಮಾಸ್ ಮೂಲಸೌಕರ್ಯ, ನೆಲೆಗಳು ಹಾಗೂ ಕಟ್ಟಡಗಳನ್ನು ಧ್ವಂಸಗೊಳಿಸುವ ಮೂಲಕ ಅವರನ್ನು ಸಂಪೂರ್ಣವಾಗಿ ಸದೆಬಡಿಯುತ್ತೇವೆ” ಎಂದಿದ್ದರು.